ಮೊದಲೇ ಆ ಒಂದು ವಿಷಯ ಮಾತನಾಡಿಕೊಂಡಿದ್ದರೆ ಚಹಲ್ – ಧನ್ಯಶ್ರೀ ಡೈವೋರ್ಸ್ ಆಗ್ತಿರಲಿಲ್ಲ!

ಮದುವೆ ಎನ್ನುವುದು ಮನುಷ್ಯರ ಜೀವನದಲ್ಲಿ ಬಹಳ ಪ್ರಮುಖವಾದ ಭಾಗ. ಮದುವೆಯ ಬಂಧನದಲ್ಲಿ ಸಿಲುಕುವ ಪುರುಷರು ಮತ್ತು ಮಹಿಳೆಯರು ತಮ್ಮ ಹೊಂದಾಣಿಕೆಯ ವಿಷಯದಲ್ಲಿ ಮೊದಲೇ ಎಷ್ಟು ಚರ್ಚೆ ಮಾಡಿದರೂ ಸಾಕಾಗುವುದಿಲ್ಲ. ಕೆಲವೊಮ್ಮೆ ಪ್ರೀತಿ, ಪ್ರೇಮದ ಬಾಹುಗಳಲ್ಲಿ ಮುಳುಗಿರುವಾಗ ದೊಡ್ಡ ದೊಡ್ಡ ವಿಷಯಗಳನ್ನೇ ಸಮಾಲೋಚನೆ ಮಾಡದೇ ಮರೆತುಬಿಡುವಂತಹ ಘಟನೆಗಳು ನಡೆದು ಹೋಗುತ್ತದೆ. ಎಲ್ಲವನ್ನು ಮೊದಲೇ ಮಾತನಾಡಿ ಮದುವೆ ಆಗುವುದು ಕೂಡ ಸಾಧ್ಯವಿಲ್ಲದ ವಿಷಯ. ಏಕೆಂದರೆ ವಿವಾಹ ಎನ್ನುವುದು ಒಪ್ಪಂದವಲ್ಲ. ಅದು ಎರಡು ಜೀವಗಳು ಪರಸ್ಪರ ಅರಿತು ನಡೆಯುವ ಒಂದು ಧೀರ್ಘ ಪ್ರಯಾಣ. ಕೆಲವೊಮ್ಮೆ ಮದುವೆ ಆಗಿ ಅರ್ಧ ಶತಮಾನವನ್ನು ಕಳೆದರೂ ಗಂಡ, ಹೆಂಡತಿಯಲ್ಲಿ ಮೊದಲು ಇದ್ದ ಪ್ರೀತಿಯೇ ಇರುತ್ತದೆ. ಕೆಲವೊಮ್ಮೆ ಮದುವೆಯಾಗಿ ಅರ್ಧ ವಾರ ಕಳೆಯುವ ಮೊದಲೇ ಸಂಬಂಧಗಳು ಹಳಸಿ ಹೋಗುತ್ತದೆ. ಖ್ಯಾತ ಕ್ರಿಕೆಟಿಗ ಯಜುವೇಂದ್ರ ಚಹಲ್ ಹಾಗೂ ಧನ್ಯಶ್ರೀ ವರ್ಮಾ ವಿಚ್ಚೇದನದ ಬಗ್ಗೆ ಇಡೀ ರಾಷ್ಟ್ರದಲ್ಲಿ ಸಾಕಷ್ಟು ಸುದ್ದಿಯಾಗಿ ಜೀವನಾಂಶವಾಗಿ ನಾಲ್ಕು ಕೋಟಿ ರೂಪಾಯಿ ಹಣ ನೀಡಬೇಕಾಗಿ ಬಂದ ವಿಷಯ ಎಲ್ಲರಿಗೂ ಗೊತ್ತಿದೆ.
ಅಷ್ಟಕ್ಕೂ ಈ ವಿಚ್ಚೇದನ ಯಾಕೆ ಆಯಿತು ಎನ್ನುವುದು ಬಹಿರಂಗವಾಗಿದೆ. ಚಹಲ್ ಮೂಲತ: ಹರಿಯಾಣದವರು. ಅವರ ಪತ್ನಿ ಮುಂಬೈ ನಿವಾಸಿಯಾಗಿದ್ದರು. ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಕೋರಿಯೋಗ್ರಾಫರ್ ಕಮ್ ಮಾಡೆಲ್ ನಟಿ ಧನ್ಯಶ್ರೀ ಪ್ರೇಮ ಪಾಶಕ್ಕೆ ಬೀಳುವ ಚಹಲ್ ನಂತರ ಮದುವೆನೂ ಆಗುತ್ತಾರೆ. ಮದುವೆಯ ಬಳಿಕ ಈ ಜೋಡಿ ಹರಿಯಾಣದಲ್ಲಿ ನೆಲೆಸುತ್ತದೆ. ಚಹಲ್ ಪೋಷಕರು ಹರಿಯಾಣದವರಾಗಿರುವ ಕಾರಣ ತಂದೆ, ತಾಯಿ, ಕುಟುಂಬದ ಜೊತೆ ಈ ನವಜೋಡಿ ವಾಸಿಸಲು ಆರಂಭಿಸುತ್ತದೆ. ಆದರೆ ಕೆಲದಿನಗಳ ಬಳಿಕ ಧನ್ಯಶ್ರೀ ಅವರಿಗೆ ತಮ್ಮ ಕೆರಿಯರ್ ಮತ್ತೆ ಪ್ರಜ್ವಲಿಸಬೇಕಾದರೆ ಮುಂಬೈಯಲ್ಲಿಯೇ ವಾಸ ಮಾಡಬೇಕೆಂದು ಅನಿಸುತ್ತದೆ. ಅವರು ಗಂಡನಿಗೆ ಮುಂಬೈಯಲ್ಲಿ ಮನೆ ಮಾಡಿ ಅಲ್ಲಿಯೇ ನಿಲ್ಲೋಣ ಎಂದು ಒತ್ತಾಯಿಸಲು ಶುರು ಮಾಡುತ್ತಾರೆ. ಅಗತ್ಯ ಇದ್ದಾಗ ಹೋಗಿ ಬರೋಣ ಎಂದು ಚಹಲ್ ಹೇಳಿದರೂ ಧನ್ಯಶ್ರೀ ವರ್ಮಾ ಒಪ್ಪುವುದಿಲ್ಲ. ಹೆಂಡತಿಯ ಒತ್ತಾಯ ಒಂದು ಕಡೆ, ತಂದೆ, ತಾಯಿಯನ್ನು ಬಿಟ್ಟು ಪ್ರತ್ಯೇಕವಾಗಿ ನಿಲ್ಲಲು ಬಯಸದ ಚಹಲ್ ಮನಸ್ಥಿತಿ ಇನ್ನೊಂದು ಕಡೆ ಆಗಿ ಕೊನೆಗೆ ಚಹಲ್ ಪತ್ನಿಯ ಬೇಡಿಕೆಯನ್ನು ತಿರಸ್ಕರಿಸುತ್ತಾರೆ. ಅಲ್ಲಿಂದ ಧನ್ಯಶ್ರೀ ವರ್ಮಾ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಅಂತಿಮವಾಗಿ ಈಗ ವಿಚ್ಚೇದನ ನಡೆದು ಇಬ್ಬರು ಕಾನೂನಾತ್ಮಕವಾಗಿಯೂ ಪ್ರತ್ಯೇಕವಾಗಿದ್ದಾರೆ.
ಈ ವಿಷಯವನ್ನು ಮದುವೆಯ ಮೊದಲೇ ಇಬ್ಬರು ಚರ್ಚಿಸಿದ್ದರೆ ಈ ರಂಪಾಟವೇ ಇರುತ್ತಿರಲಿಲ್ಲ. ಚಹಲ್ ಕೋಟ್ಯಾಂತರ ರೂಪಾಯಿ ಉಳಿತಾಯವಾಗುತ್ತಿತ್ತು. ಅದರೆ ಪ್ರೀತಿಯ ಬಲೆಯಲ್ಲಿ ಬಿದ್ದಾಗ ಇಬ್ಬರಿಗೂ ನಂತರದ ಬದುಕು ಕಾಣಿಸಲಿಲ್ಲವೋ ಅಥವಾ ಚಹಲ್ ಗ್ರಹಚಾರದಲ್ಲಿ ಹೀಗೆ ಬರೆದಿದೆಯೋ. ಒಟ್ಟಿನಲ್ಲಿ ಈ ವಿಷಯ ಮುಂದೆ ಮದುವೆಯಾಗುವವರಿಗೆ ಪಾಠವಾಗುವುದರಲ್ಲಿ ಸಂಶಯವಿಲ್ಲ.
Leave A Reply