• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸಲ್ಮಾನ್ ವಾಚ್ ನಲ್ಲಿ ರಾಮ ಮಂದಿರ, ಬೆಲೆ 34 ಲಕ್ಷ ರೂ!

Tulunadu News Posted On March 27, 2025
0


0
Shares
  • Share On Facebook
  • Tweet It

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ತಮ್ಮ ನೂತನ ಸಿನೆಮಾ ಸಿಕಂದರ್ ಪ್ರಮೋಶನ್ ನಲ್ಲಿ ಬಿಝಿಯಾಗಿದ್ದಾರೆ. ಹೀಗೆ ಎಲ್ಲಾ ಕಡೆ ಪ್ರಚಾರದ ಅಂಗವಾಗಿ ಭೇಟಿ ನೀಡುತ್ತಿರುವ ಸಲ್ಮಾನ್ ಖಾನ್ ಕೈಯಲ್ಲಿರುವ ವಾಚ್ ಜನರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಆ ವಾಚಿನಲ್ಲಿ ಏನಿದೆ ಎಂದು ನಿಮಗೆ ಅನಿಸಬಹುದು. ಅದರಲ್ಲಿ ರಾಮ ಮಂದಿರ ಇದೆ. ಹೌದು ರಾಮ ಜನ್ಮಭೂಮಿ ವಾಚ್ ಎಂದೇ ಇದನ್ನು ಕರೆಯಲಾಗುತ್ತದೆ. ಇದರ ಬೆಲೆ ಕೇವಲ 34 ಲಕ್ಷ ರೂಪಾಯಿಗಳು.

 

ಸಲ್ಮಾನ್ ಖಾನ್ ಈ ವಾಚ್ ತಯಾರಿಕಾ ಕಂಪೆನಿ ಜಾಕಬ್ ಅಂಡ್ ಕಂ ಇದರ ಮಾಲೀಕರೂ, ಚೇರ್ ಮೆನ್ ಕೂಡ ಆಗಿರುವ ಜಾಕಬ್ ಅರಬೋ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಈ ಸಂಸ್ಥೆ ಅನೇಕ ಐಷಾರಾಮಿ ವಾಚುಗಳನ್ನು ತಯಾರಿಸುತ್ತದೆ. ಈ ಕಂಪೆನಿಯ ವಾಚುಗಳನ್ನು ಸಲ್ಮಾನ್ ಖಾನ್ ಈ ಹಿಂದೆನೂ ಹಲವಾರು ಕಾರ್ಯಕ್ರಮಗಳಲ್ಲಿ ಧರಿಸಿದ್ದಾರೆ. ಈ ನೂತನ ಬ್ರಾಂಡನ್ನು ಜಾಕಬ್ ಕಂಪೆನಿ ರಾಮ ಮಂದಿರ ಲೋಕಾರ್ಪಣೆ ಆದ ಸಂದರ್ಭದಲ್ಲಿ ಬಿಡುಗಡೆಗೆ ಉದ್ದೇಶಿಸಿತು. ಈ ವಾಚ್ ಈಥೋಸ್ ಮತ್ತು ಜಾಕೋಬ್ ಅಂಡ್ ಕಂಪೆನಿ ಜಂಟಿಯಾಗಿ ಸೇರಿ ನಿರ್ಮಿಸಲಾಗಿದೆ.

ಈ ವಾಚನ್ನು ಎರಡು ತಿಂಗಳ ಹಿಂದೆ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ಐಎಸ್ ಪಿಎಲ್) ಲಾಂಚ್ ಸಂದರ್ಭದಲ್ಲಿ ಅಭಿಷೇಕ್ ಬಚ್ಚನ್ ಧರಿಸಿದ್ದರು. ಈ ವಾಚಿನಲ್ಲಿ ರಾಮ ಜನ್ಮಭೂಮಿಯ ಟೈಟಾನಿಯಂ 2 ಸಾಂಸ್ಕೃತಿಕ ಪ್ರಭಾವಳಿ ಮೂಡಿಬಂದಿದೆ. ಈ ವಾಚ್ ಎರಡು ಎಡಿಶನ್ ನಲ್ಲಿ ಹೊರಗೆ ಬಂದಿದ್ದು, ರಾಮ ಮಂದಿರ, ರಾಮ ದೇವರು ಮತ್ತು ಹನುಮಂತ ದೇವರನ್ನು ಕೂಡ ಕಾಣಬಹುದು. ಈ ವಾಚ್ ಬೆಲ್ಟ್ ಕೇಸರಿ ವರ್ಣದಲ್ಲಿ ಮೂಡಿ ಬಂದಿದ್ದು, ಧರಿಸುವವರಿಗೆ ದೈವಿಕವಾಗಿರುವ ಭಾವನೆಯನ್ನು ನೀಡುತ್ತದೆ.

ಸಂಸ್ಥೆಯ ಪ್ರಕಾರ ಕೇಸರಿ ವರ್ಣ ಆಧ್ಯಾತ್ಮಿಕತೆ, ಶುದ್ಧತೆ, ಪ್ರಾರ್ತನೆಯ ಫಲ ಸೇರಿ ಹಿಂದೂತ್ವದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಸಲ್ಮಾನ್ ಈ ವಾಚ್ ಧರಿಸಿ ಸಿಕಂದರ್ ಪ್ರಚಾರ ಮಾಡುತ್ತಿರುವುದು ಮತ್ತು ಅದು ಕೂಡ ರಮ್ಜಾನ್ ಮಾಸದಲ್ಲಿ ಹಲವರ ಹುಬ್ಬು ಏರುವಂತೆ ಮಾಡಿದೆ.

0
Shares
  • Share On Facebook
  • Tweet It




Trending Now
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
  • Popular Posts

    • 1
      ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!

  • Privacy Policy
  • Contact
© Tulunadu Infomedia.

Press enter/return to begin your search