• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನಗ್ನಚಿತ್ರ ವೈರಲ್ ಭಯಕ್ಕೆ 83 ರ ಗಂಡ, 79 ರ ಪತ್ನಿ ಆತ್ಮಹತ್ಯೆ!

Tulunadu News Posted On March 29, 2025
0


0
Shares
  • Share On Facebook
  • Tweet It

ಸೈಬರ್ ಕಳ್ಳರ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರು ಅವರ ಬಲೆಗೆ ಬೀಳುವುದು ಮಾತ್ರ ನಿಂತಿಲ್ಲ. ಆ ದಂಪತಿಯಲ್ಲಿ ಗಂಡನಿಗೆ 83 ವರ್ಷ. ಹೆಂಡತಿಗೆ 79 ವರ್ಷ. ಗಂಡನ ಹೆಸರು ಡಿಯಾಗೋ ನಜರತ್. ಮಹಾರಾಷ್ಟ್ರ ಸೆಕ್ರೆಟರಿಯೇಟ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹೆಂಡತಿ ಪಾವಿಯಾ ಜೊತೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಎಂಬಲ್ಲಿ ನೆಲೆಸಿದ್ದರು.

ಸರಕಾರಿ ಉದ್ಯೋಗಿಯಾಗಿರುವುದರಿಂದ ಇವರ ಬಳಿ ಸಾಕಷ್ಟು ಹಣವಿರುವುದು ಸೈಬರ್ ಕಳ್ಳರ ಗಮನಕ್ಕೆ ಬಂದಿದೆ. ಇವರ ಮೊಬೈಲಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಅವರಿಬ್ಬರ ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೇಡಿಕೆ ಇಟ್ಟಿದ್ದಾರೆ. ಒಂದು ತಿಂಗಳಿನಿಂದ ನಿತ್ಯ ಈ ದಂಪತಿಗೆ ಕರೆ ಮಾಡಿ ಹೆದರಿಸುತ್ತಾ ಬರುತ್ತಿದ್ದಾರೆ. ಇವರ ಬೆದರಿಕೆಗೆ ಬೇಸತ್ತು ಈಗಾಗಲೇ ಆರು ಲಕ್ಷ ರೂಪಾಯಿಯನ್ನು ಕಳ್ಳರು ಹೇಳಿದ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಆದರೆ ಸೈಬರ್ ಕಳ್ಳರ ದಾಹ ಮಾತ್ರ ಆರಿರಲಿಲ್ಲ. ಅವರು ಇನ್ನಷ್ಟು ಹಣ ನೀಡಲು ಮತ್ತೆ ಬೇಡಿಕೆ ಇಡುತ್ತಾ ಇದ್ದರು. ಕೊನೆಗೆ ಹಂತಹಂತವಾಗಿ 50 ಲಕ್ಷ ರೂಪಾಯಿ ಹಣ ಸೈಬರ್ ಕಳ್ಳರ ಅಕೌಂಟಿಗೆ ಸೇರಿದೆ.

ಸೈಬರ್ ಕಳ್ಳರು ಆರಂಭದಲ್ಲಿ ತಾವು ದೆಹಲಿ ಕ್ರೈಂ ಬ್ರಾಂಚಿನ ಅಧಿಕಾರಿಗಳು ಎಂದು ವಿಡಿಯೋ ಕಾಲ್ ಮಾಡಿದ್ದಾರೆ. ನೀವು ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿ ಎಂದು ಸುಳ್ಳು ಕೇಸ್ ಬಗ್ಗೆ ಕತೆ ಕಟ್ಟಿದ್ದಾರೆ. ಈ ಕೇಸ್ ಬರ್ಖಾಸ್ತು ಮಾಡಲು ಐದು ಲಕ್ಷ ನೀಡಲು ತಿಳಿಸಿದ್ದಾರೆ. ನಿಮ್ಮಿಬ್ಬರ ನಗ್ನ ವಿಡಿಯೋಗಳು ನಮ್ಮಲ್ಲಿ ಇರುವುದು ಎಂದು ಯಾವುದೋ ಎಐ ತರಹದ್ದು ತೋರಿಸಿದ್ದಾರೆ. ಹಣ ಕೊಟ್ಟು ಕೊಟ್ಟು ಸುಸ್ತಾದ ವೃದ್ಧ ದಂಪತಿಗಳು ಇದು ಮುಗಿಯುವ ಕಥೆ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ತಾವು ಸತ್ತರೆ ಮಾತ್ರ ಇದಕ್ಕೊಂದು ಪರಿಹಾರ ಸಿಗುತ್ತೆ ಎಂದು ಅವರಿಗೆ ಅನಿಸಿದೆ. ಕೊನೆಗೆ ಈ ಉಪಟಳ ಸಹಿಸಲಾರದೇ ಪಾವಿಯಾ ನಿದ್ರೆ ಮಾತ್ರೆ ವಿಪರೀತ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಪತಿ ಡಿಯಾಗೋ ನಜರತ್ ಡೆತ್ ನೋಟ್ ಬರೆದಿಟ್ಟು ಚಾಕುವಿನಿಂದ ಗಂಟಲು ಚೀರಿ ಪತ್ನಿಯ ದಾರಿ ಹಿಡಿದಿದ್ದಾರೆ. ಈ ಹಿರಿಯ ದಂಪತಿಗೆ ಮಕ್ಕಳಿರಲಿಲ್ಲ. ಇನ್ನು ಹತ್ತಿರದ ಸಂಬಂಧಿಗಳು ಎಂದು ಇವರಿಗೆ ಯಾರೂ ಇರಲಿಲ್ಲ ಎನ್ನಲಾಗುತ್ತಿದ್ದು, ಆದ್ದರಿಂದ ಇಂತಹ ಸಂದರ್ಭದಲ್ಲಿ ಅವರು ತಮ್ಮ ಸಂಕಟವನ್ನು ಯಾರ ಬಳಿಯೂ ಹೇಳಲಾಗದೇ ಒದ್ದಾಡಿಬಿಟ್ಟಿದ್ದರು. ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0
Shares
  • Share On Facebook
  • Tweet It




Trending Now
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!

  • Privacy Policy
  • Contact
© Tulunadu Infomedia.

Press enter/return to begin your search