ಪಹಲ್ಗಾಂ ಹತ್ಯಾಕಾಂಡದ ಬೆನ್ನಿಗೆ ಭಾರತದಲ್ಲಿರುವ ಪಾಕ್ ರಾಯಭಾರಿ ಕಚೇರಿಯಲ್ಲಿ ಕೇಕ್!

ಕಾಶ್ಮೀರದ ಪಹಲ್ಗಾಂನಲ್ಲಿ ಭಯೋತ್ಪಾದನಾ ದಾಳಿಯ ನಂತರ ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯಲ್ಲಿ ಸಂಭ್ರಮೋತ್ಸವ ನಡೆಯಿತಾ ಎನ್ನುವ ಅನುಮಾನಗಳು ದಟ್ಟವಾಗಿದೆ.
ಇದಕ್ಕೆ ಕಾರಣ ಕೇಕ್ ಬಾಕ್ಸೊಂದನ್ನು ಹಿಡಿದುಕೊಂಡು ವ್ಯಕ್ತಿಯೊಬ್ಬ ರಾಯಭಾರಿ ಕಚೇರಿಯ ದಾರಿಯಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾನೆ. ನವದೆಹಲಿಯಲ್ಲಿ ಪಾಕ್ ರಾಯಭಾರ ಕಚೇರಿ ಇದೆ. ಅಲ್ಲಿ ಉತ್ತಮ ಪೋಷಾಕನ್ನು ಧರಿಸಿದ ವ್ಯಕ್ತಿಯೊಬ್ಬ ಕೇಕ್ ಬಾಕ್ಸ್ ಒಂದನ್ನು ಹಿಡಿದುಕೊಂಡು ರಾಯಭಾರ ಕಚೇರಿ ಪ್ರವೇಶಿಸಿದ್ದಾನೆ. ಇದು ಯಾವ ಸಂಭ್ರಮಕ್ಕೆ ಎಂದು ಮಾಧ್ಯಮದವರು ಎಷ್ಟೇ ಪ್ರಶ್ನಿಸಿದರೂ ಆತ ಉತ್ತರ ನೀಡಲಿಲ್ಲ. ಇಂತಹ ಸಂದರ್ಭದಲ್ಲಿ ಪಾಕ್ ರಾಯಭಾರಿ ಕಚೇರಿಯಲ್ಲಿ ಯಾವುದೇ ರೀತಿಯ ಸಂಭ್ರಮದ ಆಚರಣೆಗಳು ಬೇಕಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಭಾರತದ ಕಾಶ್ಮೀರದಲ್ಲಿ ಪ್ರವಾಸದಲ್ಲಿ ನಿರತರಾಗಿದ್ದ ಹಿಂದೂ ಕುಟುಂಬಗಳ ಪುರುಷರನ್ನು ಪತ್ತೆ ಹಚ್ಚಿ ಒಂದು ಕಡೆ ಪಾಕ್ ಪ್ರಾಯೋಜಿತ ಉಗ್ರಗಾಮಿಗಳು ಹತ್ಯೆ ಮಾಡುತ್ತಿದ್ದರೆ ಮತ್ತೊಂದೆಡೆ ಮರುದಿನ ಪಾಕ್ ರಾಯಭಾರ ಕಚೇರಿಯಲ್ಲಿ ಕೇಕ್ ತರಿಸುವ ಔಚಿತ್ಯವಾದರೂ ಏನು ಎನ್ನುವ ಬಗ್ಗೆ ಉತ್ತರ ಸಿಕ್ಕಿಲ್ಲ. ಒಂದು ವೇಳೆ ಅಲ್ಲಿ ಯಾರಾದಾದರೂ ಹುಟ್ಟುಹಬ್ಬ ಇದ್ದರೂ ಈ ಪರಿಸ್ಥಿತಿಯಲ್ಲಿ ಕೇಕ್ ತರಿಸುವ ಮೂಲಕ ಬೇರೆ ಸಂದೇಶ ಹೋಗುತ್ತದೆ ಎನ್ನುವ ಕನಿಷ್ಟ ಜ್ಞಾನವಾದರೂ ಅವರಿಗೆ ಬೇಕಿತ್ತು. ಆದರೆ ನಾವು ಯಾವುದಕ್ಕೂ ಕೇರ್ ಮಾಡುವುದಿಲ್ಲ ಎನ್ನುವ ಭಂಡ ಧೈರ್ಯ ಅವರಿಗೆ ಇತ್ತಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಇನ್ನು ಪಾಕ್ ರಾಯಭಾರಿ ಕಚೇರಿಯ ಉನ್ನತ ಅಧಿಕಾರಿ ಸಾದ್ ಅಹ್ಮದ್ ಅವರನ್ನು ಕಳೆದ ರಾತ್ರಿ ಕೇಂದ್ರ ಸರಕಾರ ಕರೆಸಿದ ಬಗ್ಗೆ ಮಾಹಿತಿ ಇದೆಯಾ ಎನ್ನುವ ಬಗ್ಗೆ ಆ ಕೇಕ್ ತಂದವನ ಬಳಿ ಏನೂ ಉತ್ತರವಿರಲಿಲ್ಲ. ಸದ್ಯ ಭಾರತದ ಕೇಂದ್ರ ಸರಕಾರ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ರಾಯಭಾರ ಸಂಬಂಧಗಳನ್ನು ಕಡಿಮೆಗೊಳಿಸುವ ಸಂಬಂಧ ನಿರ್ಣಯ ಕೈಗೊಂಡಿದ್ದು ಪಾಕ್ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಮತ್ತು ಅವರ ಸೇನಾ ಸಲಹೆಗಾರರನ್ನು ಮತ್ತೆ ಅವರ ದೇಶಕ್ಕೆ ಕಳುಹಿಸುವ ನಿರ್ಧಾರ ಕೈಗೊಂಡಿದೆ. ಇದರ ಅಂಗವಾಗಿ ನವದೆಹಲಿಯಲ್ಲಿರುವ ಪಾಕ್ ರಾಯಭಾರ ಕಚೇರಿಗೆ ನೀಡಿದ ಮೂರು ಹಂತಗಳ ಸುರಕ್ಷಾ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಲಾಗಿದೆ.
ಗುರುವಾರ ಈ ಕಚೇರಿಗಳ ಹೊರಗೆ ನಾಗರಿಕರು ಪ್ರತಿಭಟನೆ ನಡೆಸಿ ಪೆಹಲ್ಗಾಂ ಹತ್ಯಾಕಾಂಡದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ನುಗ್ಗಿ ಹೊಡೆಯುತ್ತೇವೆ, ಪಾಕಿಸ್ತಾನ ಮುರ್ದಾಬಾದ್ ಘೋಷಣೆಗಳು ತಾರಕಕ್ಕೆ ಏರಿದ್ದವು.
26 ಜನರ ಹತ್ಯೆಯ ಬಳಿಕ ಭಾರತ ಪಾಕಿಸ್ತಾನದ ಜೊತೆಗೆ ಯಾವುದೇ ಸೌಹಾರ್ದ ಮಾತುಕತೆಯ ಅವಶ್ಯಕತೆ ಇಲ್ಲದವಾಗಿರುವುದರಿಂದ ರಾಯಭಾರ ಕಚೇರಿ ತನ್ನ ಅಸ್ತಿತ್ವವನ್ನು ಈ ಕ್ಷಣಕ್ಕೆ ಕಳೆದುಕೊಂಡಂತೆ ಆಗಿದೆ. ಇದರೊಂದಿಗೆ ಭಾರತದಲ್ಲಿರುವ ಪಾಕಿಗಳಿಗೆ ಭಾರತ ಬಿಟ್ಟು ತೊಲಗುವಂತೆ 48 ಗಂಟೆಗಳ ಸಮಯಾವಕಾಶ ನೀಡಲಾಗಿದೆ. ಅದರೊಂದಿಗೆ ವಾಘಾ- ಅಟ್ಟಾರಿ ಗಡಿಯನ್ನು ಅನಿರ್ದಿಷ್ಠಾವಧಿಗೆ ಮುಚ್ಚಲಾಗಿದೆ.
ಈ ಎಲ್ಲಾ ಬೆಳವಣಿಗೆಯಿಂದ ಪಾಕ್ ಪ್ರಧಾನಿ ಶಹಬಾಜ್ ಷರೀಷ್ ಆತಂಕದ ಸನ್ನಿವೇಶವನ್ನು ಕಳೆಯುವಂತಾಗಿದೆ.
Leave A Reply