ಮದರಸಾ ಪಠ್ಯದಲ್ಲಿ ಆಪರೇಶನ್ ಸಿಂಧೂರ್ ಅಳವಡಿಕೆ!

ಉತ್ತರಖಂಡ ರಾಜ್ಯದ ಮದರಾಸಾಗಳಲ್ಲಿ ಆಪರೇಶನ್ ಸಿಂಧೂರ್ ಅಳವಡಿಸಲು ಅಲ್ಲಿನ ರಾಜ್ಯ ಸರಕಾರ ತೀರ್ಮಾನಿಸಿದೆ. ಈ ಮೂಲಕ ಮದರಸಾಗಳಲ್ಲಿ ಕಲಿಯುವ ಮಕ್ಕಳು ಭಯೋತ್ಪಾದನೆಯ ವಿರುದ್ಧ ಭಾರತ ತೀಕ್ಣ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ಅರಿಯಬೇಕು ಎನ್ನುವುದು ಇದರ ಉದ್ದೇಶವಾಗಿದೆ. ಉತ್ತರಖಂಡ ರಾಜ್ಯದ ಸುಮಾರು 451 ಮದರಸಾಗಳಲ್ಲಿ ಕಲಿಯುವ ಅಂದಾಜು 50000 ಮಕ್ಕಳು ಇನ್ನು ಮುಂದೆ ತಮ್ಮ ಪಠ್ಯದಲ್ಲಿ ಆಪರೇಶನ್ ಸಿಂಧೂರ ಇದರ ಬಗ್ಗೆನೂ ಕಲಿಯಬೇಕಿದೆ. ಇದರಲ್ಲಿ ಉಗ್ರರು ಪಾಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಹತ್ಯೆ ಮಾಡಿದ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಉಗ್ರರ ಅಡಗುತಾಣಗಳು ಮತ್ತು ಪಿಒಕೆ ಮೇಲೆ ಭಾರತದ ಸೈನ್ಯ ಹೇಗೆ ದಾಳಿ ಮಾಡಿ ಉಗ್ರರ ನಾಶ ಮಾಡಿತು ಎನ್ನುವುದನ್ನು ಮದರಸಾದಲ್ಲಿ ಮಕ್ಕಳು ಕಲಿಯಲಿದ್ದಾರೆ.
ಉತ್ತರಖಂಡ ಸರಕಾರದ ಈ ನಡೆ ನಿಜಕ್ಕೂ ಐತಿಹಾಸಿಕವಾಗಿದ್ದು, ಉಳಿದ ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿ ಆಳ್ವಿಕೆ ನಡೆಸುತ್ತಿರುವ ಸರಕಾರಗಳು ಇದನ್ನು ಅನುಸರಿಸುತ್ತವೆಯೋ ಎಂದು ಕಾದು ನೋಡಬೇಕಿದೆ. ಉತ್ತರಖಂಡ ರಾಜ್ಯದ ಮದರಸಾ ಬೋರ್ಡಿನ ಅಧ್ಯಕ್ಷ ಶಾಮೂನ್ ಖಾಸ್ಮಿ ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ ಶಾಸ್ಮಿ, ಆಪರೇಶನ್ ಸಿಂಧೂರ ನಮ್ಮ ದೇಶದ ಸೈನಿಕರ ಸಾಮರ್ತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಎಲ್ಲಾ ಭಾರತೀಯರು ಅಭಿಮಾನ ಪಡುವ ಸಂಗತಿಯಾಗಿದೆ. ಈ ವಿಷಯವನ್ನು ಎಲ್ಲಾ ಮಕ್ಕಳಿಗೆ ತಿಳಿಸಬೇಕಾಗಿದೆ. ಅದಕ್ಕಾಗಿ ಮದರಸಾ ಪಠ್ಯಕ್ರಮ ಕಮಿಟಿಯ ಸಭೆ ಕರೆದು ಈ ಪಠ್ಯ ಅಳವಡಿಸಲು ಸೂಚಿಸಲಾಗುವುದು” ಎಂದು ತಿಳಿಸಿದರು.
ಇದು ಜಾರಿಗೆ ಬಂದಲ್ಲಿ ಉತ್ತರಖಂಡದ 451 ಮದರಸಾಗಳ 50 ಸಾವಿರ ಮಕ್ಕಳು ಎಪ್ರಿಲ್ 22 ರ ಪೆಹಲ್ಗಾಮ್ ಹತ್ಯಾಕಾಂಡದ ಪ್ರತಿಕಾರವಾಗಿ ಭಾರತ ಕೈಗೊಂಡ ಕ್ರಮಗಳ ಬಗ್ಗೆ ವಿವರವಾಗಿ ಕಲಿಯಲಿದ್ದಾರೆ. ಈ ಮೂಲಕ ಅಲ್ಲಿನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉತ್ತರಖಂಡದ ಮದರಸಾಗಳಲ್ಲಿ ಗಳಲ್ಲಿ ಭಾರತದ ಸೈನ್ಯದ ಬಲದ ಅರಿವನ್ನು ಮಕ್ಕಳಿಗೆ ಮಾಡಿಸಲಿದ್ದಾರೆ.
Leave A Reply