• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಒಬ್ಬ ಮುಗ್ಧನನ್ನು ಕೊಲ್ಲುವುದು ಇಡೀ ಮಾನವ ಜನಾಂಗವನ್ನೇ ಕೊಂದಂತೆ ಎಂದು ಕುರಾನ್ ಹೇಳಿದೆ – ಓವೈಸಿ

Tulunadu News Posted On May 26, 2025
0


0
Shares
  • Share On Facebook
  • Tweet It

ಒಬ್ಬ ಮುಗ್ಧನನ್ನು ಕೊಲ್ಲುವುದು ಎಂದರೇ ಇಡೀ ಮಾನವ ಜನಾಂಗವನ್ನೇ ಕೊಂದಂತೆ ಎಂದು ಕುರಾನ್ ಹೇಳುತ್ತದೆ ಎಂದು ಹೈದ್ರಾಬಾದ್ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರ ಮುಖವನ್ನು ಓವೈಸಿ ತೆರೆದಿಟ್ಟಿದ್ದಾರೆ. ಯಾಕೆಂದರೆ ಪೆಹಲ್ಗಾಂನಲ್ಲಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿ ಹತ್ಯಾಕಾಂಡ ನಡೆಸಿದ ಭಯೋತ್ಪಾದಕರಿಗೆ ಈ ಮೂಲಕ ಅವರ ಧರ್ಮವನ್ನು ಓವೈಸಿ ನೆನಪಿಸಿದ್ದಾರೆ.

ಆಪರೇಶನ್ ಸಿಂಧೂರ ಬಳಿಕ, ಭಾರತದ ಸಂಸದರ ನಿಯೋಗಗಳು ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಗೆ ತೆರಳಿ ಪಾಕಿಸ್ತಾನದ ಹಣೆಬರವನ್ನು ತೆರೆದಿಡುತ್ತಿದ್ದು, ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಸ್ಪಷ್ಟಪಡುತ್ತಿವೆ. ಭಾರತೀಯ ಜನತಾ ಪಾರ್ಟಿಯ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಭಾರತೀಯ ನಿಯೋಗ ಬಹ್ರೇನ್ ತಲುಪಿದೆ. ಈ ವೇಳೆ ಆ ನಿಯೋಗದಲ್ಲಿರುವ ಅಸಾದುದ್ದೀನ್ ಓವೈಸಿ ಪಾಕಿಸ್ತಾನಕ್ಕೆ ತೀಕ್ಣ ಚಾಟಿಯೇಟು ಬೀಸಿದ್ದಾರೆ.

ಆ ಭಯೋತ್ಪಾದಕರು ಭಾರತದಲ್ಲಿ ಕೊಂದದ್ದು ನಮ್ಮ ದೇಶದ ಮುಗ್ಧ ಜನರನ್ನು. ಕೊಲ್ಲುವಾಗ ಧರ್ಮದ ವಿಚಾರ ತಂದಿದ್ದಾರೆ. ಜನರನ್ನು ಕೊಲ್ಲುವುದನ್ನು ಸಮರ್ಥಿಸಲು ಧರ್ಮವನ್ನು ಬಳಸಿಕೊಂಡಿದ್ದಾರೆ. ಇಸ್ಲಾಂ ಭಯೋತ್ಪಾದನೆಯನ್ನು ಖಂಡಿಸುತ್ತದೆ ಎಂದು ಓವೈಸಿ ಹೇಳಿದ್ದಾರೆ.
ನಮ್ಮ ರಾಜಕೀಯ ಸಂಬಂಧ ಏನೇ ಇರಲಿ. ನಮ್ಮ ದೇಶದಲ್ಲಿ ಒಮ್ಮತವಿದೆ ಎಂದು ಅಸಾದುದ್ದೀನ್ ಓವೈಸಿ ಹೇಳಿದರು. ನಮಗೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ. ಆದರೆ ನಮ್ಮ ದೇಶದ ಸಮಗ್ರತೆಯ ವಿಷಯ ಬಂದಾಗ, ನಮ್ಮ ನೆರೆಯ ದೇಶವು ಇದನ್ನು ಅರ್ಥ ಮಾಡಿಕೊಳ್ಳಲು ಇದು ಸರಿಯಾದ ಸಮಯ. ಪಾಕಿಸ್ತಾನವನ್ನು ಪೈನಾನ್ಸಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಇದರ ಬೂದು ಪಟ್ಟಿಗೆ ಮರಳಿ ಸೇರಿಸುವಲ್ಲಿ ಬಹ್ರೇನ್ ಸರಕಾರ ನಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸಿದ್ದೇವೆ ಎಂದರು.

ಪ್ರತಿಯೊಬ್ಬ ಭಾರತೀಯನ ಜೀವವನ್ನು ರಕ್ಷಿಸಲು ನಮ್ಮ ಸರಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಹೇಳಿದರು. ಮುಂದೊಮ್ಮೆ ಈ ರೀತಿಯ ಕೃತ್ಯಗಳನ್ನು ಎಸಗಲು ಧೈರ್ಯ ಮಾಡಿದರೆ, ಅವರ ನಿರೀಕ್ಷೆಗೂ ಮೀರಿರುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಭಾರತೀಯ ನಿಯೋಗಗಳು ಪ್ರಪಂಚದಾದ್ಯಂತ 33 ದೇಶಗಳಿಗೆ ಭೇಟಿ ನೀಡುತ್ತಿವೆ ಮತ್ತು ಪಾಕಿಸ್ತಾನದ ನೈಜ ಮುಖವನ್ನು ಜಗತ್ತಿಗೆ ಬಹಿರಂಗಪಡಿಸುತ್ತಿವೆ.

ಓವೈಸಿ ತಮ್ಮ ನಿಯೋಗ ಭೇಟಿ ನೀಡಿದ ಕಡೆಗಳಲ್ಲೆಲ್ಲಾ ಪಾಕಿಸ್ತಾನದ ಕಪಟತೆಯನ್ನು ತೆರೆದಿಡುತ್ತಾ ಹೋಗುತ್ತಿದ್ದಾರೆ. ಅದರೊಂದಿಗೆ ಧರ್ಮದ ಹೆಸರಿನಲ್ಲಿ ನಡೆಸುತ್ತಿರುವ ದುರುಳತೆಯನ್ನು ಜಗತ್ತಿನ ಮುಂದಿಡುತ್ತಿದ್ದಾರೆ. ಓವೈಸಿ ಹೀಗೆ ಪಾಕಿಸ್ತಾನವನ್ನು ಲೆಫ್ಟ್ ರೈಟ್ ಮಾಡುತ್ತಿರುವುದರಿಂದ ಜನರಿಗೆ ವಾಸ್ತವ ಬಹಳ ಬೇಗ ತಿಳಿಯುತ್ತದೆ.

0
Shares
  • Share On Facebook
  • Tweet It




Trending Now
ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
Tulunadu News March 5, 2026
ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
Tulunadu News March 3, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
  • Popular Posts

    • 1
      ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!

  • Privacy Policy
  • Contact
© Tulunadu Infomedia.

Press enter/return to begin your search