• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ – 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!

Tulunadu News Posted On May 31, 2025
0


0
Shares
  • Share On Facebook
  • Tweet It

ಒಂದು ಕಾಲದಲ್ಲಿ ಪ್ರಖ್ಯಾತವಾಗಿದ್ದ ಹಿಂದಿ ಧಾರಾವಾಹಿ ಕ್ಯೂಂ ಕೀ ಸಾಸ್ ಬಿ ಕಬೀ ಭಹೂ ತೀ ನಿಂದ ಜನಮಾನಸದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದ ಸ್ಮೃತಿ ಇರಾನಿ ಅದೇ ಇಮೇಜಿನೊಂದಿಗೆ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಕೇಂದ್ರದ ನಾಯಕರಾಗಿಯೂ ಕೆಲಸ ಮಾಡಿದ ಸ್ಮೃತಿ 2019 ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಠಿಯಲ್ಲಿ ಕಾಂಗ್ರೆಸ್ ಸರ್ವೋಚ್ಚ ನಾಯಕ ರಾಹುಲ್ ಗಾಂಧಿಯವರನ್ನು ಸೋಲಿಸಿದ್ದರು. ಮೋದಿ ಮೊದಲ ಬಾರಿ ಪ್ರಧಾನಿಯಾದಾಗಲೇ 2014 ರಲ್ಲಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದರು. ಕೇಂದ್ರದಲ್ಲಿ 2014 ರಿಂದ 2024 ರ ತನಕ ಮಂತ್ರಿಯನ್ನಾಗಿ ಮಾಡಿದ್ದರು. ಕೇಂದ್ರದಲ್ಲಿ ಮೋದಿಯವರ ಸಚಿವ ಸಂಪುಟದಲ್ಲಿ ಹತ್ತು ವರ್ಷಗಳ ತನಕ ಸಚಿವೆಯಾಗಿದ್ದರು.

2019 ರಿಂದ 2024 ರವರೆಗೆ ಅಮೇಠಿಯಲ್ಲಿ ಸಂಸದರಾಗಿ, ಒಂದಿಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದರೂ 2024 ರಲ್ಲಿ ಅಮೇಠಿಯ ಜನ ಅವರ ಕೈ ಹಿಡಿಯಲಿಲ್ಲ. ಗಾಂಧಿ ಕುಟುಂಬದ ಆಪ್ತ ಕಿಶೋರಿಲಾಲ್ ಶರ್ಮಾ ಅವರ ವಿರುದ್ಧ ಸೋತು ರಾಜಕಾರಣದಲ್ಲಿ ಒಂದಿಷ್ಟು ನೈಪಥ್ಯಕ್ಕೆ ಸರಿದಿದ್ದರು. ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗುತ್ತದೆ ಎನ್ನುವ ವದಂತಿ ಇದ್ದರೂ ಅದು ಕಳೆದ ಒಂದು ವರ್ಷದಲ್ಲಿ ಆಗಿಲ್ಲ. ಇನ್ನೊಂದೆಡೆ ರಾಷ್ಟ್ರೀಯ ಅಧ್ಯಕ್ಷೆಯನ್ನಾಗಿ ಅವರನ್ನು ಭಾಜಪಾ ಹೈಕಮಾಂಡ್ ನೇಮಿಸುತ್ತದೆ ಎಂದು ಹೇಳಲಾಗುತ್ತದೆಯಾದರೂ ಅದು ಇನ್ನೂ ಜಾರಿಗೆ ಬಂದಿಲ್ಲ.

ಈ ಕಾಲಘಟ್ಟದಲ್ಲಿ ಮತ್ತೆ ಲೈಮ್ ಲೈಟಿಗೆ ಬರಲು ಸ್ಮೃತಿ ಇರಾನಿ ಸಿದ್ಧತೆಯನ್ನು ನಡೆಸಿದ್ದಾರೆ.
ಏಕ್ತಾ ಕಪೂರ್ ನಿರ್ಮಾಣದ ಕ್ಯೂಂ ಕಿ… ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿರುವ ಅವರಿಗೆ ಚಿತ್ರೀಕರಣದಲ್ಲಿ ಝಡ್ ಪ್ಲಸ್ ಭದ್ರತಾ ವ್ಯವಸ್ಥೆ ನೀಡಲಾಗಿದೆ. ಅವರು ಚಿತ್ರೀಕರಣದಲ್ಲಿ ಇದ್ದಾಗ ಕಠಿಣ ನಿಯಮಗಳನ್ನು ಧಾರಾವಾಹಿ ತಂಡ ಜಾರಿಗೆ ತಂದಿದ್ದು, ಯಾವುದೇ ಫೋನ್ ತೆಗೆದುಕೊಂಡು ಚಿತ್ರೀಕರಣದ ಜಾಗದಲ್ಲಿ ಇರುವಂತಿಲ್ಲ. ಕೇವಲ ಸ್ಮೃತಿ ಇರಾನಿ, ಅಮರ್ ಉಪಾಧ್ಯಾಯ ಹಾಗೂ ನಿರ್ಮಾಪಕಿ ಏಕ್ತಾ ಕಪೂರ್ ಅವರ ಮೊಬೈಲ್ ಫೋನ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲರ ಫೋನ್ ಗಳನ್ನು ಟ್ರಾಪ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ನಾಗರಿಕರು ಚಿತ್ರೀಕರಣದ ಸ್ಥಳದ ಹತ್ತಿರದಲ್ಲಿಯೂ ಸುಳಿಯದಂತೆ ನೋಡಿಕೊಳ್ಳಲಾಗಿದೆ.

ಒಂದೂವರೆ ದಶಕದ ನಂತರ ಈ ಪ್ರಖ್ಯಾತ ಧಾರಾವಾಹಿಯ ಎರಡನೇ ಭಾಗ ಮತ್ತೆ ಪ್ರಸಾರಗೊಳ್ಳಲು ಅಣಿಯಾಗಿದ್ದು, ಸ್ಮೃತಿ ಇರಾನಿ ಹೇಗೆ ಅಭಿನಯಿಸಿದ್ದಾರೆ ಎನ್ನುವ ಕುತೂಹಲ ಜನರಿಗೆ ಇದೆ. ಅದರೊಂದಿಗೆ ಅವರ ಹಿಂದಿನ ಭಾಗದ ಜೋಡಿ ಅಮರ್ ಉಪಾಧ್ಯಾಯ ಕೂಡ ಜೊತೆಯಾಗಲಿದ್ದು, ಇದು ಕೂಡ ಹೆಣ್ಣುಮಕ್ಕಳ ಕುತೂಹಲವನ್ನು ಕೆರಳಿಸಿದೆ.

ತುಳಸಿ ಎನ್ನುವ ಹೆಸರಿನಿಂದ ಧಾರಾವಾಹಿ ಪ್ರಿಯರ ಮನೆಮಾತಾಗಿದ್ದ ಸ್ಮೃತಿ ಆ ಧಾರಾವಾಹಿಯಲ್ಲಿ ಸುಮಾರು ಎಂಟು ವರ್ಷ ಅಭಿನಯಿಸಿದ್ದರು. ಇದರ ಪ್ರಖ್ಯಾತಿ ಅವರನ್ನು ರಾಜಕೀಯ ಕ್ಷೇತ್ರಕ್ಕೆ 2003 ರಲ್ಲಿ ತೆಗೆದುಕೊಂಡು ಹೋಗಿತ್ತು. ಈಗ ಮುಂದಿನ ಭಾಗ ಯಾವಾಗ ಟಿವಿಯಲ್ಲಿ ಬರಲಿದೆ ಎಂದು ಹೇಳಲಾಗಿಲ್ಲ.

0
Shares
  • Share On Facebook
  • Tweet It




Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Tulunadu News January 28, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search