SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!

ಎಸ್ ಎಸ್ ಎಲ್ ಸಿಯಲ್ಲಿ ಪಾಸ್ ಆಗಲು ಒದ್ದಾಡುವ ಮಕ್ಕಳಿಗೆ, ಹೇಗಾದರೂ ಹತ್ತನೇ ತರಗತಿಯಲ್ಲಿ ಪಾಸ್ ಆದರೆ ಸಾಕಪ್ಪ ಎಂದುಕೊಂಡಿರುವ ಮಕ್ಕಳಿಗೆ ರಾಜ್ಯ ಸರಕಾರ ಶುಭ ಸುದ್ದಿ ನೀಡಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಹಾಗೂ ಪಾಸ್ ಆಗಬೇಕಾದ ಅಂಕಗಳ ವಿಷಯದಲ್ಲಿ ಇನ್ನಷ್ಟು ಸರಳೀಕರಣ ನೀತಿಯನ್ನು ಅನುಸರಿಸಿದೆ. ಇನ್ನು ಮುಂದೆ ಹತ್ತನೇ ತರಗತಿ ಪಾಸಾಗಲು 35 ಅಂಕಗಳು ಬೇಕಾಗಿಲ್ಲ. ಕೇವಲ 30 ಅಂಕಗಳು ಇದ್ದರೂ ಸಾಕು. ಪಾಸೋ, ಫೈಲೋ ಎನ್ನುವ ತೂಗು ಉಯ್ಯಾಲೆಯಲ್ಲಿರುವ ಮಕ್ಕಳು ರಾಜ್ಯ ಸರಕಾರದ ಹೊಸ ನೀತಿಯಿಂದ ನೆಮ್ಮದಿಯ ನಿದ್ದೆಯನ್ನು ಮಾಡಬಹುದು. ಹೊಸ ನೀತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರತಿ ವಿಷಯದಲ್ಲಿ 30 ಅಂಕಗಳನ್ನು ಪಡೆದರೆ ಸಾಕು, ಅಂತಹ ವಿದ್ಯಾರ್ಥಿ ಪಾಸ್ ಎಂದು ನಿರ್ಧರಿಸಲಾಗುತ್ತದೆ.
ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಓವರ್ ಆಲ್ ಅಗ್ರಿಗೇಟ್ ಶೇಕಡಾ 33 ಪಾಸಿಂಗ್ ಅಂಕಕ್ಕೆ ಕಡಿತ ಮಾಡಲಾಗಿದೆ. ಹೀಗಾಗಿ ಇದೀಗ 625 ಕ್ಕೆ 206 ಅಂಕ ಪಡೆದ ವಿದ್ಯಾರ್ಥಿಗಳನ್ನು ಪಾಸ್ ಎಂದು ಘೋಷಿಸಲಾಗುತ್ತದೆ. ಈ ಹಿಂದೆ ಓವರ್ ಆಲ್ ಪಾಸಿಂಗ್ ಶೇಕಡಾ 35 ಇತ್ತು. ಹೀಗಾಗಿ ಪ್ರತಿ ವಿಷಯದಲ್ಲಿ ಕನಿಷ್ಟ 35 ಅಂಕಗಳನ್ನು ಪಡೆದರೆ ಮಾತ್ರ ಪಾಸ್ ಆಗುತ್ತಿತ್ತು. ಆದರೆ ಇದೀಗ ಪ್ರತಿ ವಿಷಯದಲ್ಲಿ 30 ಅಂಕ ಪಡೆದರೆ ಸಾಕು. ಒಟ್ಟು ಪಾಸಿಂಗ್ ಅಗ್ರೇಗೇಟ್ ಶೇಕಡಾ 33 ಬರಬೇಕು. ಸಾರ್ವಜನಿಕರಿಗೆ ಈ ಪ್ರಸ್ತಾವನೆಗೆ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರು ಈ ಕುರಿತು ಆಕ್ಷೇಪ ಸಲ್ಲಿಸಿಕೆ ಅವಕಾಶ ನೀಡಲಾಗಿದೆ. ಆಂತರಿಕ ಮೌಲ್ಯಮಾಪನ ಹಾಗೂ ಬಾಹ್ಯ ಪರೀಕ್ಷೆ ಸೇರಿ ಒಟ್ಟಾರೆ ಸರಾಸರಿ ಶೇಕಡಾ 33 ರಷ್ಟು ಅಂಕಗಳನ್ನು ಪಡೆದರೆ ಪಾಸ್ ಎಂದು ನಿರ್ಧರಿಸಲಾಗಿದೆ.