• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಓವರ್‍ಟೇಕ್ ಕಿಲ್ಲರ್ ಇನ್ನು ಜೀವನಪರ್ಯಂತ ಜೈಲಲ್ಲಿ!

TNN Correspondent Posted On September 7, 2017
0


0
Shares
  • Share On Facebook
  • Tweet It

ಪಟನಾ : ಪರೀಕ್ಷೆ ಮುಗಿಸಿದ ಸಂಭ್ರಮಕ್ಕೆ ಸ್ನೇಹಿತರೊಂದಿಗೆ ಭಾರೀ ಮೋಜು-ಮಸ್ತಿ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಸ್ವಿಫ್ಟ್ ಕಾರೊಂದು ತನ್ನ ಕಾರನ್ನು ಓವರ್‍ಟೇಕ್ ಮಾಡಿದ್ದಕ್ಕಾಗಿ ಓವರ್‍ಸ್ಪೀಡ್‍ನಿಂದ ಹಿಂಬಾಲಿಸಿ ಅದನ್ನು ಅಡ್ಡಗಟ್ಟಿ ಚಾಲಕನಿಗೆ ಗುಂಡು ಹಾರಿಸಿ ಕೊಂದಿದ್ದ ರಾಕಿ ಯಾದವ್‍ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕಳೆದ ವರ್ಷ ಮೇನಲ್ಲಿ ನಡೆದ ಘಟನೆಯ ಕೂಲಂಕುಷ ವಿಚಾರಣೆ ನಡೆಸಿದ್ದ ಗಯಾ ಜಿಲ್ಲಾ ನ್ಯಾಯಾಲಯ ಬುಧವಾರ ಮಹತ್ವದ ತೀರ್ಪು ನೀಡಿದೆ. ಹತ್ಯೆ ಮಾಡಿ ತನ್ನ ಅಪ್ಪ ಭೂಗತ ಪಾತಕಿ ಬಿಂದಿ ಯಾದವ್‍ಗೆ ರಾಕಿ ಕರೆಮಾಡಿದ್ದ. ಮಗನ ರಕ್ಷಣೆಗೆಂದು ಬಿಂದಿ ತನ್ನ ಗ್ಯಾರೇಜ್‍ನಲ್ಲಿ ಅಡಗಿಸಿಟ್ಟಿದ್ದ. ರಾಕಿ ತಾಯಿ ಮನೋರಮಾ ದೇವಿ ಉಚ್ಚಾಟಿತ ಜೆಡಿಯು ಎಂಎಲ್‍ಸಿಯಾಗಿದ್ದು, ಆಕೆಯು ತನ್ನ ಪ್ರಭಾವ ಬಳಸಿ ಮಗನನ್ನು ರಕ್ಷಿಸಲು ಯತ್ನಿಸಿದ್ದು ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಇದನ್ನು ಪರಿಗಣಿಸಿದ ನ್ಯಾಯಾಲಯ ಬಿಂದಿ ಯಾದವ್‍ಗೆ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಜತೆಗೆ ಅಪರಾಧಿ ರಾಕಿಗೆ ರೂ. 1 ಲಕ್ಷ ಹಾಗೂ ಬಿಂದಿಗೆ ರೂ.50ಸಾವಿರ ದಂಡ ಹಾಕಿದೆ.

ಹತ್ಯೆಯಾದ 19 ವರ್ಷದ ಹೈಸ್ಕೂಲ್ ವಿದ್ಯಾರ್ಥಿ ಆದಿತ್ಯ ಸಚ್‍ದೇವ್ ಕುಟುಂಬ ನ್ಯಾಯಾಲಯದ ತೀರ್ಪು ಸ್ವಾಗತಿಸಿ, ಮಗನ ಆತ್ಮಕ್ಕೆ ಶಾಂತಿ ದೊರಕಿದೆ ಎಂದು ಸಮಾಧಾನಪಟ್ಟಿದೆ.

ಮೇ 10, 2016ರಂದು ನಡೆದ ಘಟನೆ ಬಳಿಕ ಸಚ್‍ದೇವ್ ಕುಟುಂಬ ನೀಡಿದ್ದ ದೂರು ಆಧರಿಸಿ ರಾಕಿಗೆ ಪಾರಾಗಲು ಕುಮ್ಮಕ್ಕು ನೀಡಿದ್ದ ಕಾರಣಕ್ಕೆ ಬಿಂದಿ ಯಾದವ್ ಹಾಗೂ ಮನೋರಮಾ ದೇವಿಯನ್ನು ಪೊಲೀಸರು ಬಂಧಿಸಿದ್ದರು. ಜಾಮಿನು ಪಡೆದು ಹೊರಬಂದಿದ್ದ ಮೂವರನ್ನು ಆ.31ರಂದು ಜಿಲ್ಲಾ ನ್ಯಾಯಾಲಯ ದೋಷಿಗಳೆಂದು ಹೇಳಿತ್ತು.

0
Shares
  • Share On Facebook
  • Tweet It


bindicar overtakerange roverrockyswift sachdevyadav


Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
Tulunadu News April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search