• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಕಾಂಗ್ರೆಸ್ ಸರಕಾರ ಕೊಲೆಗಳನ್ನು ಬಯಸುತ್ತಿದೆ, ವಿಚಾರವಾದಿಗಳಿಗೆ ಎಚ್ಚರ: ಕೆಪಿ ಶಶಿಕಲಾ

TNN Correspondent Posted On September 11, 2017
0


0
Shares
  • Share On Facebook
  • Tweet It

ಕೊಲ್ಲಂ: ಚುನಾವಣೆಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವೇ ಕೊಲೆಗಳನ್ನು ಬಯಸುತ್ತಿದೆ. ಹುಸಿ ಜಾತ್ಯಾತೀತವಾದಿಗಳೇ ಎಚ್ಚರ ನಿಮ್ಮವರೇ ನಿಮ್ಮನ್ನು ಕೊಲ್ಲಬಹುದು. ಜೀವ ಉಳಿಸಿಕೊಳ್ಳಲು ಶಿವ ದೇವಾಲಯದಲ್ಲಿ ಮೃತ್ಯುಂಜಯ ಹೋಮ ಮಾಡಿ ಎಂದು ಕೇರಳದ ಹಿಂದೂ ಐಕ್ಯವಾದಿ ಸಂಘಟನೆ ಮುಖ್ಯಸ್ಥೆ, ಪ್ರಬಲ ಹಿಂದೂತ್ವವಾದಿ ಕೆ.ಪಿ.ಶಶಿಕಲಾ ಎಚ್ಚರಿಕೆ ನೀಡಿದ್ದಾರೆ.
ಬುದ್ದಿಜೀವಿಗಳೇ ಜೀವ ಉಳಿಸಿಕೊಳ್ಳುವ ಆಸೆಯಿದ್ದರೇ ಹಿಂದೂ ಶಿವ ದೇವಾಲಯದಲ್ಲಿ ಮೃತ್ಯುಂಜಯ ಹೋಮಮಾಡಿ. ಇಲ್ಲದಿದ್ದರೇ ನಿಮ್ಮವರೇ ನಿಮ್ಮನ್ನು ಕೊಲ್ಲಬಹುದು. ಕಾಂಗ್ರೆಸ್ ಸೋಲಿನ ಭೀತಿಯಲ್ಲಿ ಕೊಲೆಗಳು ಆಗುವುದನ್ನು ಬಯಸುತ್ತಿದೆ. ಅಲ್ಲದೇ ಗೌರಿ ಕೊಲೆಯಲ್ಲಿ ಅನುಕಂಪದ ವೋಟು ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ. ಕೊಲೆಗಳನ್ನೇ ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ಸರಕಾರ ಚುನಾವಣೆಯಲ್ಲಿ ವೋಟು ಪಡೆಯುವ ಉದ್ದೇಶ ಹೊಂದಿದೆ. ಗೌರಿಯಂತಹ ಸ್ವಾತಂತ್ರ್ಯ ಚಿಂತಕರು ತಮ್ಮ ಜೀವನ ಉಳಿಸಿಕೊಳ್ಳುವ ಆಸೆಯಿದ್ದರೇ ಹಿಂದೂ ದೇವರ ಮೊರೆಹೋಗಬೇಕು ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್ ಹಲವು ವಿರೋಧಗಳ ಮಧ್ಯೆ ವಿಶ್ವಾದ್ಯಂತ ಬೆಳೆಯುತ್ತಿದೆ. ವಿರುದ್ಧ ವಿಚಾರಧಾರೆಯವರ ಹತ್ಯಗಳನ್ನು ನಡೆಸಿ ಆರ್‌ಎಸ್‌ಎಸ್ ಬೆಳೆಸುವ ಗತಿ ಇಲ್ಲ. ಗೌರಿ ಲಂಕೇಶ್ ಜೀವನದ ಕೊನೆಯವರೆಗೂ ಬಲಪಂಥಿಯ ವಿಚಾರಧಾರೆಗಳನ್ನು ಕಟುವಾಗಿ ಟೀಕಿಸುತ್ತಿದ್ದರು. ಅವರ ಹತ್ಯೆಯಲ್ಲಿ ಬಲಪಂಥೀಯರ ಕೈವಾಡ ಇರಬಹುದು ಎಂಬ ಶಂಕೆ ಮೂಡುವುದು ಸಹಜ. ಆದರೆ ಅವರು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹೋಗಿ ಗೌರಿ ಲಂಕೇಶ ಅದೇ ಸಂಘಟನೆಯ ಕೆಲವರ ವಿರೋಧ ಕಟ್ಟಿಕೊಂಡಿದ್ದರ ಮಾಹಿತಿ ಇದೆ. ಅವರೂ ಈ ಕೊಲೆಗಳನ್ನು ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಶಶಿಕಲಾ ಅವರ ಭಾಷಣ ಪ್ರಚೋದನಕಾರಿಯಾಗಿದೆ ಎಂದು ಪರವೂರ್ ಕಾಂಗ್ರೆಸ್ ಶಾಸಕ ವಿ.ಡಿ.ಸತೀಶನ್ ಪೊಲೀಸರಿಗೆ ದೂರು ನೀಡಿದ್ದು, ಶಶಿಕಲಾ ವಿರುದ್ಧ ಪ್ರಕರಣ ದಾಖಲಾಗಿದೆ.

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • 1
      ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್

  • Privacy Policy
  • Contact
© Tulunadu Infomedia.

Press enter/return to begin your search