ಬುಲೆಟ್ ಟ್ರೇನ್ ಕಾಮಗಾರಿಗೆ ಚಾಲನೆ
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ಬುಲೆಟ್ ರೈಲಿಗೆ ಚಾಲನೆ ನೀಡಲಾಗಿದೆ. ಭಾರತೀಯ ರೈಲ್ವೆ ಮಾತ್ರವಲ್ಲದೇ ಮೂಲಸೌಕರ್ಯಕ್ಕೆ ವೇಗ ನೀಡಲಿರುವ ದೇಶದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಗುರುವಾರ ಶಂಕುಸ್ಥಾಾಪನೆ ನೆರವೇರಿದೆ.
ಅಹಮದಾಬಾದ್‌ನ ಸಬರಮತಿ ರೈಲ್ವೆ ನಿಲ್ದಾಾಣದ ಬಳಿ ವಿದ್ಯುಕ್ತವಾಗಿ ಗುದ್ದಲಿ ಪೂಜೆ ನೆರವೇರಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂರೆ ಅಬೆ ನೇತೃತ್ವದಲ್ಲಿ ಚಾಲನೆ ನೀಡಲಾಗಿದೆ. ದೇಶದ ಪ್ರಬಲ ಕೈಗಾರಿಕಾ ವಲಯದಲ್ಲಿ ಬರುವ ಮುಂಬೈ-ಅಹಮದಾಬಾದ್ ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಸದರಿ ಯೋಜನೆ ಮೇಲೆ ಜಪಾನ್ 12 ಶತಕೋಟಿ ಡಾಲರ್(88 ಸಾವಿರ ಕೋಟಿ ರು) ಹೂಡುತ್ತಿದ್ದು, ಸ್ವತಂತ್ರ ಭಾರತದ ಅತಿ ದೊಡ್ಡ ವಿದೇಶೀ ಬಂಡವಾಳ ಹೂಡಿಕೆಗಳಲ್ಲಿ ಒಂದಾಗಿದೆ. ಯೋಜನೆಗೆ 1,10,000 ಕೋಟಿ ರು.ಗಳು ತಗಲುವ ಅಂದಾಜಿದೆ. ಹೂಡಿಕೆ ಮೇಲೆ ಶೇ 0.1ರ ಬಡ್ಡಿಿ ದರದಲ್ಲಿ ಸಾಲವನ್ನು ಮರುಪಾವತಿ ಮಾಡಲು ಭಾರತಕ್ಕೆ 50 ವರ್ಷಗಳ ಕಾಲಾವಕಾಶ ಹಾಗೂ ಈ ಕುರಿತ ಒಡಂಬಡಿಕೆಯಲ್ಲಿ ತಂತ್ರಜ್ಞಾನ ವರ್ಗಾವಣೆಗೆ ಜಪಾನ್ ಮುಂದಾಗಿರುವುದು ಮೋದಿಯವರ ‘ಮೇಕ್ ಇನ್ ಇಂಡಿಯಾ’ ಧ್ಯೇಯೋದ್ದೇಶಕ್ಕೆ ಇಂಬು ದೊರಕಿದೆ.
Leave A Reply