ಇವರೇನು ವಿವಿ ವಿದ್ಯಾರ್ಥಿಗಳೋ, ಮುಸ್ಲಿಂ ಮೂಲಭೂತವಾದಿಗಳೋ?
ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ…
ನಳಂದಾದಂಥ ವಿಶ್ವವಿದ್ಯಾಲಯವಿದ್ದ ಖ್ಯಾತಿ ಹೊಂದಿದ ಭಾರತದಲ್ಲಿ ಅಲಿಗಡ ವಿವಿಯಂಥ ಶಿಕ್ಷಣ ಸಂಸ್ಥೆಯೊಂದು ಭಾರತ-ಪಾಕಿಸ್ತಾನ ವಿಭಜನೆಗೆ ಮೂಲ ಕಾರಣವಾಯಿತು ಎಂಬುದು ಗೊತ್ತಿರುವ ವಿಚಾರ. ಇದು ಜಿಹಾದಿಗಳೊಂದಿಗೆ ಸಂಬಂಧ, ಸಂಪರ್ಕ ಹೊಂದಿದೆ ಎಂಬುದೂ ಬಹಿರಂಗ ಸತ್ಯ.
ಈಗ ಮತ್ತೊಂದು ಕಾರಣಕ್ಕೆ ಈ ವಿವಿ ಸುದ್ದಿಯಲ್ಲಿದೆ…
ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಮುರ್ಷಿದಾಬಾದ್ ಕೇಂದ್ರದಲ್ಲಿ ಎಂಬಿಎಂ ಓದುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳು ಹೌರಾದಿಂದ ಮುಂಬೈ ತೆರಳುವ ಕಲ್ಕಾ ಎಕ್ಸ್ ಪ್ರೆಸ್ ರೈಲಿನಲ್ಲಿದ್ದ ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ.
ಹಿಂದೂ ಯುವತಿಯ ಜತೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ, ಮುಸ್ಲಿಂ ವಿದ್ಯಾರ್ಥಿಗಳು ಈ ಕೃತ್ಯ ಎಸಗಿದ್ದು, ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಅವರನ್ನು ರೈಲಿನಿಂದ ನೂಕಲು ಸಹ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಮೊದಲಿಗೆ ಇಬ್ಬರು ವಿದ್ಯಾರ್ಥಿಗಳಿದ್ದ ಕಾರಣ ಹಿಂದೂಗಳ ಆಕ್ಷೇಪಕ್ಕೆ ಸುಮ್ಮನಾಗಿದ್ದಾರೆ. ಅಷ್ಟೇ ಆಗಿದ್ದರೆ ಯಾವ ಗಲಾಟೆಯೂ ಆಗುತ್ತಿರಲಿಲ್ಲ. ಬದಲಾಗಿ ಈ ಮುಸ್ಲಿಂ ವಿದ್ಯಾರ್ಥಿಗಳು ಪಕ್ಕದ ಬೋಗಿಯಲ್ಲಿದ್ದ ಮುಸ್ಲಿಂ ಯುವಕರಿಗೆ ಘಟನೆ ಕುರಿತು ವಾಟ್ಸ್ ಆ್ಯಪ್ ಮೂಲಕ ಸಂದೇಶ ರವಾನಿಸಿದ್ದಾರೆ.
ಕೊನೆಗೆ ಈ ವಿಷಯ ಅಲೀಗಡ ವಿವಿ ಜಿಹಾದಿಗಳಿಗೆ ತಿಳಿದಿದೆ. ಬಳಿಕ ವಿವಿಯ ಸುಮಾರು 500 ವಿದ್ಯಾರ್ಥಿಗಳು ಅಲೀಗಡ ರೈಲು ನಿಲ್ದಾಣಕ್ಕೆ ಆಗಮಿಸಿ ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರೇ ತಿಳಿಸಿದ್ದಾರೆ.
ವಿಶ್ವವಿದ್ಯಾಲಯಗಳು ಎಂದರೆ ಜ್ಞಾನದ ತವರೂರು, ಉನ್ನತ ಶಿಕ್ಷಣದ ದ್ವಾರಬಾಗಿಲು, ನಾಗರಿಕತ್ವದ ಸಂಕೇತ ಎಂಬ ಮಾತಿದೆ. ಆದರೆ ಈ ಜವಾಹರ ಲಾಲ್ ನೆಹರೂ ಹಾಗೂ ಅಲಿಗಡ ವಿಶ್ವವಿದ್ಯಾಲಯಗಳನ್ನು ನೋಡಿದರೆ, ಇವೇ ದೇಶಕ್ಕೆ, ಜನರಿಗೆ ಮಾರಕ ಎನಿಸುತ್ತವೆ.
-
ಅವಿನಾಶ್ ವಾಡೇಕರ್, ಉಡುಪಿ
Leave A Reply