ಕ್ರಿಸ್ಪಿ ಫ್ರೈಡ್ ಚಿಕನ್
Posted On January 12, 2017
ಬೇಕಾಗುವ ಪದಾರ್ಥಗಳು…
- ಚಿಕನ್ ಲೆಗ್ – 6
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
- ಹಸಿ ಮೆಣಸಿನಕಾಯಿ – 6
- ಕಪ್ಪು ಮೆಣಸಿನ ಪುಡಿ – 1 ಚಮಚ
- ನಿಂಬೆ ರಸ – 2 ಚಮಚ
- ಮೈದಾಹಿಟ್ಟು – 1 ಬಟ್ಟಲು
- ಮೊಟ್ಟೆ ಬಿಳಿ – ಎರಡು ಮೊಟ್ಟೆಯದ್ದು
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಪುದೀನಾ ಸೊಪ್ಪು – ಸ್ವಲ್ಪ
- ನೀರು -ಅರ್ಧ ಬಟ್ಟಲು
- ಬ್ರೆಡ್ ಚೂರು – 1 ಬಟ್ಟಲು
- ಎಣ್ಣೆ – ಕರಿಯಲು
- ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
- ಮೊದಲು ಚಿಕನ್ ಲೆಗ್ ಪೀಸ್ ಗಳನ್ನು ಚೆನ್ನಾಗಿ ತೊಳೆದು ಅದರ ಮೇಲೆ ಚಾಕುವಿನಿಂದ ಗೆರೆಗಳನ್ನು ಎಳೆಯಬೇಕು. ಇದರಿಂದ ಮಸಾಲೆ ಚಿಕನ್ ಒಳಗೆ ಹೋಗಿ ರುಚಿ ಕೊಡುತ್ತದೆ. ನಂತರ ಚಿಕನ್ ಪೀಸ್ ಗಳಿಗೆ ಉಪ್ಪುನ್ನು ಸವರಬೇಕಿ.
- ಇದಕ್ಕೆ ನಿಂಬೆ ರಸ, ಶುಂಠಿ ಬೆಳ್ಳುಳ್ಳಿ ಪೋಸ್ಟ್, ಹಸಿ ಮೆಣಸಿನ ಕಾಯಿ ಪೇಸ್ಟ್, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪಿನ ಪೇಸ್ಟ್ ಹಾಕಿ 1 ಗಂಟೆಗಳ ಕಾಲ ನೆನೆಯಲು ಬಿಡಬೇಕಿ.
- ನಂತರ ಮೈದಾ ಹಿಟ್ಟಿಗೆ ಮೊಟ್ಟೆಯ ಬಿಳಿ ಭಾಗ, ಹಸಿ ಮೆಣಸಿನಕಾಯಿ ಪೇಸ್ಟ್, ಕಪ್ಪು ಮೆಣಸಿನ ಪುಡಿ ಮತ್ತು ಸ್ವಲ್ಪ ಬಿಸಿ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ಒಲೆಯ ಮೇಲೆ ಬಾಣಲೆಯಿಟ್ಟು ಇದಕ್ಕೆ ಸ್ವಲ್ಪ ಎಣ್ಣೆ ಹಾಕಬೇಕು. ಎಣ್ಣೆ ಕಾದನಂತರ ಮಸಾಲೆಯಲ್ಲಿ ನೆನೆದ ಲೆಗ್ ಪೀಸ್ ಗಳನ್ನು ಮೈದಾ ಹಿಟ್ಟಿನ ಮಸಾಲೆಯೊಂದಿಗೆ ಅದ್ದಿ, ಬ್ರೆಡ್ ಚೂರಿನಲ್ಲಿ ಹೊರಳಾಡಿಸಿ ಎಣ್ಣೆಗ ಹಾಕಿ ಡೀಪ್ ಫ್ರೈ ಮಾಡಿದರೆ ರುಚಿಕರವಾದ ಕ್ರಿಸ್ಬೀ ಫ್ರೈಡ್ ಚಿಕನ್ ಸವಿಯಲು ಸಿದ್ಧವಾಗುತ್ತದೆ.
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply