ಜಿಎಸ್ಟಿ ವಿರೋಧಿಗಳೇ, ವಿಶ್ವ ಬ್ಯಾಂಕ್ ಅಧ್ಯಕ್ಷರೇ ಜಿಎಸ್ಟಿ ಕುರಿತು ಏನು ಹೇಳಿದ್ದಾರೆ ಕೇಳಿ
ಕೇಂದ್ರ ಸರ್ಕಾರ ತೆರಿಗೆ ಸುಧಾರಣೆಗಾಗಿ ಜಿಎಸ್ಟಿ ಜಾರಿಗೊಳಿಸುತ್ತಲೇ ಕೆಲವು ಅತೃಪ್ತ ಆತ್ಮಗಳು ಬಾಯಿಗೆ ಬಂದ ಹಾಗೆ ಮಾತನಾಡಿದವು. ಇದು ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವ, ಬಡವರ ದುಡ್ಡು ಹೀರುವ ಯೋಜನೆ ಎಂದು ಜರಿದರು. ಇನ್ನೂ ಕೆಲವರು ಹತ್ತು ರೂಪಾಯಿ ಕೊಟ್ಟು ಕುಡಿಯುವ ಕಾಫಿಯನ್ನು ಕಾಫಿ ಡೇನಲ್ಲಿ ಕುಡಿದು 150 ರೂಪಾಯಿ ಜತೆ ಸೇರಿದ ಜಿಎಸ್ಟಿ ಬಿಲ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಯೋಜನೆ ವಿರುದ್ಧ ಮಾತನಾಡಿದರು. ಆದರೆ ಜಿಎಸ್ಟಿಯಿಂದ ಯಾವಾಗ ತೆರಿಗೆದಾರರು ಹೆಚ್ಚಾದರು, ತೆರಿಗೆ ಸಂಗ್ರಹ ಹೆಚ್ಚಾಯಿತು ಎಂದು ವರದಿಗಳು ಬಿಡುಗಡೆಯಾದವೋ ಒಬ್ಬೊಬ್ಬರೇ ಬಾಯಿಮುಚ್ಚಿಕೊಂಡರು.
ಆದರೆ ಕೆಲವರು ತಮ್ಮ ಬಾಯಿಗೆ ಬೀಗ ಹಾಕಿಕೊಂಡಿರಲಿಲ್ಲ. ಈಗ ಅವರೂ ಸುಮ್ಮನಾಗುವ ಪರಿಸ್ಥಿತಿ ಬಂದೊದಗಿದೆ.
ಹೌದು, ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಅವರೇ ಸರಕು ಮತ್ತು ಸೇವಾ ತೆರಿಗೆ ಕುರಿತು ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಭಾರತವನ್ನು ಮೆಚ್ಚಿಸಲು ಅಲ್ಲ, ವಾಸ್ತವ ಬಿಚ್ಚಿಟ್ಟಿದ್ದು, ಜಿಎಸ್ಟಿಯಿಂದ ಭಾರತದ ಆರ್ಥಿಕತೆ ಏಳಿಗೆ ಕಾಣುತ್ತಿದೆ ಎಂದಿದ್ದಾರೆ.
ವಿಶ್ವಬ್ಯಾಂಕ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಭಾರತ ಹಲವು ಸವಾಲುಗಳನ್ನು ಮೆಟ್ಟಿನಿಲ್ಲುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಜಿಎಸ್ಟಿಯಂಥ ಯೋಜನೆ ಜಾರಿಗೊಳಿಸುವ ಮೂಲಕ ದೇಶದ ಆರ್ಥಿಕ ಸ್ಥಿತಿಯನ್ನು ಮೇಲೆತ್ತುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಮೋದಿ ಕುರಿತು ಸಹ ಮಾತನಾಡಿದ್ದು, ನರೇಂದ್ರ ಮೋದಿ ನನಗೆ ವೈಯಕ್ತಿಕವಾಗಿ ಗೊತ್ತು. ಅವರು ಅಭಿವೃದ್ಧಿ ಕುರಿತು ಇಟ್ಟುಕೊಂಡ ಬದ್ಧತೆ ನನಗೆ ಇಷ್ಟ. ಭಾರತದಲ್ಲಿ ಪ್ರತಿಯೊಬ್ಬರಿಗೂ ಅವಕಾಶ ಸೃಷ್ಟಿಸಲು ಅವರು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ ಎಂದಿದ್ದಾರೆ.
ವಿಶ್ವಬ್ಯಾಕ್ ನಂಥ ಅಂತಾರಾಷ್ಟ್ರೀಯ ಬ್ಯಾಂಕಿನ ಅಧ್ಯಕ್ಷರೇ ಜಿಎಸ್ಟಿ ಬಗ್ಗೆ ಹೊಗಳುತ್ತಿರುವಾಗ ನಮಲ್ಲಿರುವ ಅತೃಪ್ತ ಆತ್ಮಗಳು ಏಕೆ ಬಾಯಿ ಬಡಿದುಕೊಳ್ಳುತ್ತಾವೋ ಗೊತ್ತಿಲ್ಲ. ಇನ್ನು ಮುಂದೆ ಅದನ್ನು ನಿಲ್ಲಿಸದೆ ಬೇರೆ ದಾರಿಯಿಲ್ಲ.
Leave A Reply