ಕಳ್ಳರನ್ನು ಬೆಂಬಲಿಸುವೆ ಎನ್ನುವ ನೀವೆಂಥ ಕಳ್ಳರು ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್…
ಕೈ ಕಾಲು ನೆಟ್ಟಗಿದ್ದರೂ ಮೀಸಲಾತಿ ಬೇಕು ಎನ್ನುವ ಈತ, ಕಾಲೇಜಿಗೆ ಚಕ್ಕರ್ ಹಾಕಿ ಬಿ.ಕಾಂನಲ್ಲಿ ಕೇವಲ ಶೇ.50ರಷ್ಟು ಅಂಕ ಪಡೆದ ಹೆಡ್ಡ, ಮೀಸಲಾತಿ ಹೋರಾಟದ ಮೂಲಕವೇ ನಾಯಕ ಎಂಬ ಪಟ್ಟ ಕಟ್ಟಿಕೊಂಡಿರುವ ಜಲ ಉದ್ಯಮಿ ಒಂದು ಹೇಳಿಕೆ ನೀಡಿದ್ದಾರೆ…
ಕಾಂಗ್ರೆಸ್ ಕಳ್ಳರ ಪಕ್ಷ, ಬಿಜೆಪಿ ಮಹಾ ಕಳ್ಳರ ಪಕ್ಷ. ನನ್ನ ಬೆಂಬಲ ಕಳ್ಳರಿಗೇ ಎಂದಿದ್ದಾರೆ…
ಅಲ್ಲ ಸ್ವಾಮಿ ಯಾವ ಆಧಾರದ ಮೇಲೆ ಬಿಜೆಪಿಯನ್ನು ಕಳ್ಳರ ಪಕ್ಷ ಎಂದು ಹಾರ್ದಿಕ್ ಪಟೇಲ್ ಹೇಳುತ್ತಾರೆ. ಕಾಂಗ್ರೆಸ್ಸಿನ ಹಾಗೆ ಬಿಜೆಪಿಯೇನು ಬೋಫೋರ್ಸ್ ಹಗರಣ ಮಾಡಿದೆಯೇ? 1.76 ಲಕ್ಷ ಕೋಟಿ ರೂ. 2ಜಿ ಹಗರಣದಲ್ಲಿ, ಕಲ್ಲಿದ್ದಿಲು ಹಗರಣದಲ್ಲಿ 1.86 ಲಕ್ಷ ಕೋಟಿ ರೂ. ಎಗರಿಸಿದ ಆರೋಪ ಹೊತ್ತಿರುವ ಕಾಂಗ್ರೆಸ್ಸಿನಂತೆ ಬಿಜೆಪಿ ಹಣ ಎಗರಿಸಿದೆಯೇ? ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದೆಯೇ?
ಯಾವ ಸಾಕ್ಷಿಯಿದೆ ಹಾರ್ದಿಕ್ ಪಟೇಲ್ ಬಳಿ. ಮತ್ತೆ ಕಳ್ಳರಿಗೇ ಬೆಂಬಲ ನೀಡುವೆ ಎನ್ನುವ ಹಾರ್ದಿಕ್ ಪಟೇಲ್ ಎಂಥ ಕಳ್ಳ? ಕಳ್ಳರನ್ನು ಬೆಂಬಲಿಸುವೆ ಎನ್ನುವವನು ಏನಾದಾನು? ಅವನನ್ನು ಜನ ಏನೆನ್ನುತ್ತಾರೆ? ಹೀಗೆ ಹೇಳಿಕೆ ನೀಡುವ ಮೂಲಕ ಯಾವ ನೈತಿಕತೆ ಉಳಿಸಿಕೊಂಡಿದ್ದಾರೆ ಹಾರ್ದಿಕ್ ಪಟೇಲ್?
2011ರಲ್ಲಿ ಪಾಟಿದಾರ್ ಅನಾಮತ್ ಆದೋಲನ ಸಮಿತಿ (ಪಿಎಎಎಸ್) ರಚಿಸಿದ ಹಾರ್ದಿಕ್ ಪಟೇಲ್, ಗುಜರಾತಿನಲ್ಲಿ ಶ್ರೀಮಂತರು, ಉದ್ಯಮಿಗಳಾಗಿರುವ ಪಟೇಲರಿಗೆ ಮೀಸಲಾತಿ ನೀಡಬೇಕು ಎಂದು ಪ್ರತಿಭಟನೆಗಿಳಿದರು. ಪ್ರತಿಭಟನೆಯ ಹೆಸರಲ್ಲಿ ಖ್ಯಾತಿಯಾದರು. ಸುಮ್ಮನಿದ್ದ ಜನರಿಗೆ ಮೀಸಲಾತಿ ಬೀಜ ಬಿತ್ತಿದರು. ಆದರೆ ಹೋರಾಟದಲ್ಲಿ ಮಡಿದವರು, ಪೊಲೀಸರಿಂದ ಏಟು ತಿಂದವರು ಯಾರೋ? ಹಾರ್ದಿಕ್ ಮಾತ್ರ ನಾಯಕರಾದರು…
ಅಷ್ಟಕ್ಕೂ ಪಟೇಲ್ ಕಳ್ಳರನ್ನು ಬೆಂಬಲಿಸುವೆ ಎಂದಿದ್ದೇಕೆ?
ಪ್ರಸ್ತುತ ಹಾರ್ದಿಕ್ ಪಟೇಲ್ ಹೋರಾಟದಿಂದಲೂ ಸುದ್ದಿಯಲ್ಲಿಲ್ಲ, ಮೀಸಲಾತಿ ಹೋರಾಟಕ್ಕೂ ಮನ್ನಣೆ ಸಿಗಲಿಲ್ಲ. ಬಳಿಕ ಮಾಡಲು ಹೊರಟ ರಾಜಕೀಯದಲ್ಲೂ ಮುನ್ನಡೆ ಸಾಧಿಸಲಿಲ್ಲ. ಹಾಗಾಗಿ ಪ್ರಸ್ತುತ ಹಾರ್ದಿಕ್ ಪಟೇಲ್ ಗೆ ರಾಜಕೀಯ ಸ್ಥಾನಮಾನ ಬೇಕು, ಸುದ್ದಿಯಲ್ಲಿರಬೇಕು. ಹಾಗಾಗಿಯೇ ಇಂಥ ಹೇಳಿಕೆ ನೀಡಿದ್ದಾರೆ. ಇವರಿಗೆ ಕಾಂಗ್ರೆಸ್ಸಿನಿಂದ ಕರೆ ಬಂತು ಎಂಬ ಕಾರಣಕ್ಕೆ ರಾಹುಲ್ ಗಾಂಧಿ ಇದ್ದ ಹೋಟೆಲಿಗೆ ರಾತ್ರೋರಾತ್ರಿ ತೆರಳಿ ನನ್ನ ಬೆಂಬಲ ಕಾಂಗ್ರೆಸ್ಸಿಗೆ ಎಂದಿದ್ದಾರೆ.
ಇನ್ನೇನು ಗುಜರಾತಿನಲ್ಲಿ ಚುನಾವಣೆ ಬಂತಲ್ಲ…
ಅಷ್ಟೇ ಅಲ್ಲ, ಈ ಹಾರ್ದಿಕ್ ಪಟೇಲ್ ಎಂಥ ಅವಕಾಶವಾದಿ, ಎಂಥ ಇಬ್ಬಂದಿ ಹಾಗೂ ರಾಜಕೀಯ ಸ್ಥಾನಮಾನದ ಹಪಾಹಪಿ ಹೊಂದಿದ್ದಾರೆ ಎಂಬುದನ್ನು ತಿಳಿಯಬೇಕು. ಯಾವುದೇ ರಾಜ್ಯದಲ್ಲಿ ಚುನಾವಣೆ ಬಂದರೂ, ಆ ಪಕ್ಷದ ಪರ ಹಾರ್ದಿಕ್ ಪಟೇಲ್ ಮಾತನಾಡುತ್ತಾರೆ.
ಪ್ರಸಕ್ತ ವರ್ಷದಲ್ಲಿ ಗುಜರಾತ್ ಚುನಾವಣೆ ನಡೆಯುವುದರಿಂದ ಎಚ್ಚೆತ್ತಿದ್ದ ಹಾರ್ದಿಕ್ ಶಿವಸೇನೆ ಪರ ಮಾತನಾಡಿದ್ದರು. ಇದೇ ಕಾರಣಕ್ಕೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಗುಜರಾತಿನಲ್ಲಿ ಹಾರ್ದಿಕ್ ಪಟೇಲ್ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಘೋಷಿಸಿದ್ದರು. ಅಷ್ಟೇ ಅಲ್ಲ, ಮೀಸಲಾತಿ ಹೋರಾಟದಿಂದ ಜೈಲುಪಾಲಾಗಿ ಬಿಡುಗಡೆಯಾದ ಬಳಿಕ ಆಮ್ ಆದ್ಮಿ ಪಕ್ಷದ ಪರ ಮಾತನಾಡಿದ್ದರು. ಇನ್ನೇನು ಹಾರ್ದಿಕ್ ಆಪ್ ಸೇರಲಿದ್ದಾರೆ ಎಂದೇ ಸುದ್ದಿ ಹಬ್ಬಿಸಲಾಗಿತ್ತು. ಆದರೆ ಯಾವ ಪಕ್ಷವೂ ಹಾರ್ದಿಕ್ ಗೆ ಮಣೆ ಹಾಕಲಿಲ್ಲ. ಹಾರ್ದಿಕ್ ಮೀಸಲಾತಿ ನಾಯಕನಾದನೇ ಹೊರತು, ರಾಜಕೀಯ ನಾಯಕನಾಗಲಿಲ್ಲ.
ಈಗ ಗುಜರಾತಿನಲ್ಲಿ ಚುನಾವಣೆ ನಡೆಯುವುದರಿಂದ ಎಚ್ಚೆತ್ತ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪರ ಮಾತನಾಡುತ್ತಿದ್ದಾರೆ. ಕಳ್ಳರಾಗಿದ್ದರೂ ಕಾಂಗ್ರೆಸ್ಸನ್ನೇ ಬೆಂಬಲಿಸುವೆ ಎಂದು ನೈತಿಕ ಅಧಃಪತನ ಪ್ರದರ್ಶಿಸಿದ್ದಾರೆ. ಆ ಮೂಲಕ ತಾವೂ ಕಳ್ಳರೇ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇಂಥ ಕಳ್ಳನ ಮಾತು ಸೀರಿಯಸ್ಸಾಗಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ.
Leave A Reply