• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅಬ್ದುಲ್‌ ಕರೀಂ ತೆಲಗಿ ಸಾವು

TNN Correspondent Posted On October 26, 2017
0


0
Shares
  • Share On Facebook
  • Tweet It

ಛಾಪಾ ಕಾಗದ ಪ್ರಕರಣದ ಪ್ರಮುಖ ಆರೋಪಿ ಕರೀಂಲಾಲಾ ತೆಲಗಿ ಅಲಿಯಾಸ್‌ ಅಬ್ದುಲ್‌ ಕರೀಂ ತೆಲಗಿ ಹೆಸರೇ ಸಾಕಷ್ಟು ಜನರಿಗೆ ಮರೆತುಹೋಗಿತ್ತು. ಆದರೆ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದ ತೆಲಗಿ ಅಕ್ಟೋಬರ್‌ ೨೬ರಂದು (ಇಂದು) ಮೃತಪಟ್ಟಿದ್ದಾನೆ. ಅನಾರೋಗ್ಯ ನಿಮಿತ್ತ ಒಂದು ವಾರದ ಹಿಂದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತು.


ಮೂಲತಃ ಖಾನಾಪುರದವನಾದ ತೆಲಗಿ, ಎಂಟು ವರ್ಷ ದುಬೈನಲ್ಲಿದ್ದು ಭಾರತಕ್ಕೆ ಮರಳಿದ ನಂತರ ನಕಲಿ ಪಾಸ್‌ಪೋರ್ಟ್, ಛಾಪಾಕಾಗದ ತಯಾರಿಸುವುದರಲ್ಲಿ ತೊಡಗಿಕೊಂಡ. ನಕಲಿ ಛಾಪಾಕಾಗದದ ಉದ್ಯಮವನ್ನು ಈತ ಎಷ್ಟು ದೊಡ್ಡದಾಗಿ ಬೆಳೆಸಿದ್ದ ಅಂದರೆ ಈತ ೩೫೦ ಜನರನ್ನು ಇದೇ ಕೆಲಸಕ್ಕಾಗಿ ನೇಮಿಸಿಕೊಂಡಿದ್ದ. ಇವರು ಬ್ಯಾಂಕ್‌, ವಿಮಾ ಕಂಪೆನಿಗಳು ಸೇರಿದಂತೆ ವಿವಿಧೆಡೆ ನಕಲಿ ಛಾಪಾಕಾಗದಗಳನ್ನು ಮಾರಾಟ ಮಾಡುತ್ತಿದ್ದರು. ೨೦೦ ಕೋಟಿ ರು. ಮೌಲ್ಯದ ಛಾಪಾಕಾಗದ ಮಾರಾಟ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಈ ನಕಲಿ ದಂಧೆಯಲ್ಲಿ ಸರಕಾರಿ ನೌಕರರು ಹಾಗೂ ಪೊಲೀಸ್ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೦೧ರ ನವೆಂಬರ್‌ನಲ್ಲಿ ಈತನನ್ನು ರಾಜಸ್ಥಾನದ ಅಜ್ಮೇರ್‌ನಲ್ಲಿ ಬಂಧಿಸಲಾಗಿತ್ತು. ಅಂದಿನಿಂದಲೂ ಈತ ಜೈಲಿನಲ್ಲಿಯೇ ಇದ್ದ. ಈತನೊಂದಿಗೆ ಸಾಕಷ್ಟು ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂಬ ಸುದ್ದಿ ಇತ್ತಾದರೂ, ಯಾರ ಹೆಸರೂ ಹೊರಗೆ ಬರಲಿಲ್ಲ.
ಅಬ್ದುಲ್‌ ಕರೀಂ ತೆಲಗಿಗೆ ಏಡ್ಸ್ ಸೇರಿದಂತೆ ಹಲವು ರೋಗಗಳಿದ್ದವು ಎಂಬುದು ಈ ಹಿಂದೆಯೇ ವರದಿಯಾಗಿತ್ತು. ಐದಾರು ವರ್ಷಗಳ ಹಿಂದೆಯೇ ಈತನಿಗೆ ಏಡ್ಸ್ ಇರುವ ಸಂಗತಿ ಬಹಿರಂಗವಾಗಿ, ದೊಡ್ಡ ಸುದ್ದಿಯಾಗಿತ್ತು.

0
Shares
  • Share On Facebook
  • Tweet It


Telagi


Trending Now
Fortune Clock Casino No Deposit Bonus Codes
Tulunadu News May 19, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • Fortune Clock Casino No Deposit Bonus Codes
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • Fortune Clock Casino No Deposit Bonus Codes

  • Privacy Policy
  • Contact
© Tulunadu Infomedia.

Press enter/return to begin your search