ಇಂದು ಹಿಮಾಚಲ ಪ್ರದೇಶಕ್ಕೆ ಅಮಿತ್ ಶಾ ಭೇಟಿ, ರ್ಯಾಲಿ
Posted On October 30, 2017
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಲೇ ಬಿಜೆಪಿ ಗೆಲುವಿಗೆ ಕಾರ್ಯಪ್ರವೃತ್ತವಾಗಿದ್ದು, ಸೋಮವಾರದಿಂದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎರಡು ದಿನ ಹಿಮಾಚಲ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದಾರೆ.
ಚುನಾವಣೆ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಅಮಿತ್ ಶಾ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಎರಡು ದಿನಗಳ ಅವಧಿಯಲ್ಲಿ ಶಾ 15 ಸಭೆ ನಡೆಸಲಿದ್ದು, ಚುನಾವಣೆ ಗೆಲುವಿಗೆ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ. ಸೋಮವಾರ ಹಲವು ರ್ಯಾಲಿಗಳಲ್ಲೂ ಶಾ ಭಾಗವಹಿಸಲಿದ್ದು, ಡಾಲಿ ಹೌಸ್ ನ ಬಾಲಿಕೇಟ್ ಎಂಬಲ್ಲಿ ನಡೆಯುವ ರ್ಯಾಲಿಯಲ್ಲಿ ಭಾಷಣ ಮಾಡಲಿದ್ದಾರೆ.
ಚುನಾವಣೆ ಮುಗಿಯುವ ವೇಳೆಗೆ ಐದು ದಿನ ಅಮಿತ್ ಶಾ ಹಿಮಾಚಲ ಪ್ರದೇಶ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನವೆಂಬರ್ 9ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
- Advertisement -
Trending Now
ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಿಟಿ ರವಿ ಆ "ಶಬ್ದ" ಹೇಳಿದ್ದು ಹೌದಾ!?
December 19, 2024
ವಿಜಯ ಮಲ್ಯ, ನೀರವ್ ಮೋದಿ ಸೇರಿ 22,280 ಕೋಟಿ ರೂ ಬಾಕಿ ವಸೂಲಿ - ನಿರ್ಮಲಾ
December 18, 2024
Leave A Reply