• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಂಗ್ರಾಜುಲೇಶನ್ ನರೇಶ್ ಶಣೈ. ನೀವು ನೈಜ ಭಕ್ತರೆಂದು ಸಾಭೀತುಪಡಿಸಿದಿರಿ

ಸಂತೋಷ್ ತಮ್ಮಯ್ಯ Posted On October 30, 2017


  • Share On Facebook
  • Tweet It

ಮೋದಿ ಪ್ರಧಾನಿಯಾಗುವ ಮೊದಲು ಮತ್ತು ಪ್ರಧಾನಿಯಾದ ನಂತರ ಏನೆಲ್ಲಾ ಅರೋಪಗಳನ್ನು ಹೊತ್ತುಕೊಳ್ಳಬೇಕಾಯಿತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ಗೋಧ್ರಾ ಎಂದರು, ಅದೂ ನೆಲಕಚ್ಚಿತು. ಅಣೆಕಟ್ಟು ಎಂದರೂ ಅದೂ ಉಲ್ಟಾ ಹೊಡೆಯಿತು. ನಕಲಿ ಎನ್ ಕೌಂಟರ್ ಎಂದರು, ಅದೂ ಯೂಟರ್ನ್ ಹೊಡೆಯಿತು. ಬಂಡವಾಳಶಾಹಿ ಎಂದು ಹುಯಿಲೆಬ್ಬಿಸಿದರು, ಅಭಿವ್ರದ್ಧಿಯ ಓಟದ ಮುಂದೆ ಅದೂ ಮಂಕಾಯಿತು. ಮೋದಿ ಪ್ರಧಾನಿಯಾಗೇಬಿಟ್ಟರು. ಹಸಿದಿದ್ದವರು ರಣಹದ್ದುಗಳಂತೆ ಕಾದು ಕುಳಿತರು. ಆತನ ಕೈಯಲ್ಲಿ ರಕ್ತ ಅಂಟಿದೆ ಎಂಬ ಆಲಾಪದೊಂದಿಗೆ ದಿನ ದೂಡತೊಡಗಿದರು. ಆದರೆ ರಣಹದ್ದುಗಳಿಗೆ ಆಹಾರ ಸಿಗಲೇ ಇಲ್ಲ. ಹಸಿದ ಹೊಟ್ಟೆ ಒದ್ದಾಡಿಸದೆ ಬಿಟ್ಟಿತೇ? ಅಸಹಿಷ್ಣುತೆ ಎಂದರು. ಒಂದಷ್ಟು ದಿನ ಅರಚಿದರು. ದುರದ್ರಷ್ಟಕ್ಕೆ ಅದೂ ಕೈಹತ್ತಲಿಲ್ಲ. ಜೇಬುಗಳ್ಳತನವನ್ನೂ ಜಾಗತಿಕ ಸಮಾಚಾರವೆಂಬಂತೆ ಬಣ್ಣಿಸಿದರು. ಕಡ್ಡಿಯನ್ನು ಬೆಟ್ಟ ಮಾಡಿದರು, ಮೋದಿ ಚುನಾವಣೆಗಳನ್ನು ಗೆದ್ದಾಗಲೆಲ್ಲಾ ಕೀರಲು ದನಿಗಳಿಂದ ಸ್ವರ ಹೊರಡಿಸಿದರು. ಆದರೆ ಮೋದಿ ಬಾಯಿಬಿಡಲಿಲ್ಲ. ನೋಟು ಅಮಾನ್ಯೀಕರಣಗೊಳಿಸಿಯೇಬಿಟ್ಟರು. ಮತ್ತೆ ಅರಚಾಟ, ಹೊರಳಾಟ, ಡೊಂಬರಾಟ. ಕೊನೆಗೆ ಎಂದಿನಂತೆ ಸದ್ದಡಿತು. ಆದರೆ ಹಸಿವು ಮುಕ್ತವಾಗಲಿಲ್ಲ. ಅಲ್ಲಿಂದ ಆರಂಭಗೊಂಡಿದ್ದೇ ಮೋದಿಯ ಭಾಷಣದ ಅಪಹಾಸ್ಯ, ತೊಡುವ ಬಟ್ಟೆಯ ತಮಾಷೆ, ಹೊರಡುವ ಪ್ರವಾಸಗಳ ಅವಹೇಳನಗಳು. ಮೋದಿ ವಿರೋಧಿಗಳೆಷ್ಟು ಬೌದ್ಧಿಕವಾಗಿ ಪಾತಾಳಕ್ಕಿಳಿದುಹೋಗಿದ್ದಾರೆಂದರೆ ಅವರ ಧರ್ಮಸ್ಥಳ ಪ್ರವಾಸವನ್ನೂ ಅಣಕಿಸಿದರು. ಮೋದಿ ವಿದೇಶಕ್ಕೂ ಹೋಗಬಾರದು ಧರ್ಮಸ್ಥಳಕ್ಕೂ ಹೋಗಬಾರದೆಂದರೆ ಅವರಿನ್ನೇನು ಪಣಂಬೂರು ಬೀಚಿನಲ್ಲಿ ಸೂರ್ಯಾಸ್ತ ನೋಡುತ್ತಾ ಇರಬೇಕೇ? ಅಥವಾ ಬಿಬಿ ಅಲಾಬಿ ರೋಡಿನ ಶಾಂತಿ ಪ್ರಕಾಶನದಲ್ಲೇ ಕಾಲ ಕಳೆಯಬೇಕೇ ಎಂದು ಅವರೇ ಕೇಳಬೇಕು.
ನರೇಂದ್ರ ಮೋದಿಯವರು ಧರ್ಮಸ್ಥಳಕ್ಕೆ ಬರುವ ಮೊದಲೇ ಟೀಕಾಕಾರರು ಎಲ್ಲವನ್ನೂ ಸಿದ್ಧಪಡಿಸಿಟ್ಟಂತಿತ್ತು. ದೇವಸ್ಥಾನದೊಳಗೆ ಚಪ್ಪಲಿ ಧರಿಸಿ ಪ್ರವೇಶಿಸಿದ್ದಾರೆ ಎಂದು ಸುದ್ಧಿ ಹಬ್ಬಿಸಿದರು. ದೇವಸ್ಥಾನದ ಬಗ್ಗೆ ಎಂದೂ ಇರದಿದ್ದ ಕಾಳಜಿ ಈಗೇಕೆ? ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಅಣಕಿಸುವ ಹೊತ್ತಿಗೆ ಬುದ್ಧಿಜೀವಿಗಳು ಮತ್ತೊಂದು ವರಸೆ ತೆಗೆದರು. ಸೌಜನ್ಯ ಕೊಲೆ ಮತ್ತೆ ಹೊರತೆಗೆದರು. ಹೆಗ್ಗಡೆಯವರ ಮೇಲೆ ಜನ ಇನ್ನೂ ಸಂಶಯ ಹೊಂದಿದ್ದಾರೆ. ಮೋದಿ ಅಂಥವರನ್ನು ಸನ್ಮಾನಿಸಿದ್ದಾರೆ ಎಂದು ಬೊಬ್ಬೆ ಹೊಡೆದರು. ಸೌಜನ್ಯ ಪ್ರಕರಣದ ತನಿಖೆ ಕನ್ನಡಿಯಂತೆ ಸ್ಪಷ್ಟವಾಗಿದ್ದರೂ ಮೋದಿ ಭೇಟಿಯ ಹೊತ್ತಲ್ಲಿ ಅದನ್ನು ಹೊರತೆಗೆದ ಉದ್ದೇಶವೇನಿತ್ತು? ಬುದ್ಧಿಜೀವಿಗಳೆಲ್ಲಾ ಸೇರಿ ಅರಚುತ್ತಿದ್ದಾಗಲೇ ಅತ್ತ ಮೋದಿ ಇನ್ನೂ ಮೂರು ಕಾರ್ಯಕ್ರಮಗಳನ್ನು ಮುಗಿಸಿ ದೆಹಲಿಗೆ ತೆರಳಿದ್ದರು. ಮತ್ತೂ ಒಂದು ತಮಾಷೆಯೆಂದರೆ ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈ ಧರ್ಮಸ್ಥಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮತ್ತು ವಿಐಪಿ ಪ್ರವೇಶ ಪತ್ರ ಕೊಟ್ಟಿದ್ದರ ಬಗ್ಗೆ.
ನರೇಶ್ ಶೆಣೈ ಮೋದಿ ಕಾರ್ಯಕ್ರಮದ ಬದಲು ಪಿಎಫ್ ಐ ಸಮಾವೇಷಕ್ಕೆ ಹೋಗಿದ್ದರೆ ಅದು ವಿವಾದವಾಗುತಿತ್ತೇ? ಅಸಲಿಗೆ ನರೇಶ್ ಶೈಣೈ ನಮೋ ಬ್ರಿಗೇಡ್ ಬದಲಿ ಡಿವೈಎಫ್ ಕಾರ್ಯಕರ್ತರಾಗಿದ್ದರೆ ಅವರ ಹೆಸರು ಒಂದು ದಿನವೂ ಪತ್ರಿಕೆಯಲ್ಲಿ ಬರುತ್ತಿರಲಿಲ್ಲ, ಅವರನ್ನು ಈ ಸ್ಥಾನದಲ್ಲಿ ನಿಲ್ಲಿಸುತ್ತಿರಲಿಲ್ಲ. ಏಕೆಂದರೆ ಕೇರಳದಲ್ಲಿ ಸರಣಿ ಕೊಲೆಗಳಲ್ಲಿ ಪಾಲ್ಗೊಂಡ ಯಾರ ಹೆಸರೂ ನಮಗೆ ಗೊತ್ತಿಲ್ಲ. ವಿನಾಯಕ್ ಬಾಳಿಗ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಅದನ್ನು ತೀರ್ಮಾನಿಸುವುದು ನ್ಯಾಯಾಲಯ. ಬಾಳಿಗ ಹತ್ಯೆಗೆ ನ್ಯಾಯ ಒದಗಿಸುವುದು ನ್ಯಾಯಾಲಯದ ಕೆಲಸ. ಯಾವುದೇ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಬರುವವರೆಗೆ ಯಾರನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಾರದು ಎಂಬುದು ಆರನೇ ಕ್ಲಾಸು ಪಾಸುಮಾಡಿದ ಯಾವನಿಗಾದರೂ ಗೊತ್ತಿರುವ ಸಂಗತಿ. ಬೆಂಗಳೂರು ಶ್ರೀರಾಂಪುರದಲ್ಲಿ ಕಪ್ಪು ಹಣದೊಂದಿಗೆ ಸಿಕ್ಕಿಹಾಕಿಕೊಂಡ ನಾಗನನ್ನೂ ಅಡ್ಡ ಹೆಸರಿನಿಂದ ಕರೆಯಬಾರದೆಂದು ನ್ಯಾಯಾಲಯ ತಿಳಿಸುತ್ತದೆ! ಆದರೆ ವಿನಾಯಕ ಬಾಳಿಗ ಪ್ರಕರಣದ ತೀರ್ಪು ಬರುವ ಮೊದಲೇ ನರೇಶ್ ಶೈಣೈರಿಗೆ ಅನಾವಶ್ಯಕ ಕೊಲೆಗಾರನ ಪಟ್ಟ! ಬುದ್ಧಿಜೀವಿಗಳು ಬಯ್ಯುವ ಭರದಲ್ಲಿ ತಮ್ಮ ಚಿಂತನೆಯನ್ನೇ ಕಳೆದುಕೊಂಡಿದ್ದಾರೆಯೇ? ನರೇಶರನ್ನು ಟೀಕಿಸಲು ಹತ್ಯೆಯಾದ ವಿನಾಯಕ್ ಬಾಳಿಗರ ಮೇಲೆ ಅನುಕಂಪ ಮೂಡುವುದು ಎಷ್ಟು ಅಸಹ್ಯಕರವೋ ಮೋದಿ ಟೀಕೆಗಾಗಿ ನರೇಶ್ ಶೈಣೈರನ್ನು ಟೀಕಿಸುವುದೂ ಅಷ್ಟೇ ಅಸಹ್ಯಕರ ಮತ್ತು ಬುದ್ಧಿಜೀವಿಗಳ ಚಿಂತನಾಮಟ್ಟದ ದೀವಾಳಿತನಕ್ಕೂ ಸಾಕ್ಷಿ.
ದಿವಂಗತ ಗೌರಿ ಲಂಕೇಶ್ ಅವರ ಮೇಲೆ ಸುಮಾರು ೫೦ಕ್ಕೂ ಹೆಚ್ಚಿನ ಕೇಸುಗಳಿದ್ದವು. ಒಂದು ಪ್ರಕರಣದಲ್ಲಂತೂ ಆಕೆಗೆ ಜೈಲು ಶಿಕ್ಷೆಯಾಗಿತ್ತು. ಆದರೂ ಅವರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ರಾಷ್ಟ್ರೀಯ ಸಾಹಿತ್ಯ ಗೋಷ್ಠಿಗಳಿಗೆ ಹತ್ತುತ್ತಿದ್ದರು. ದೇಶದ ಹಲವು ನಾಯಕರೂ ಅವರಿಗೆ ಆಪ್ತರಾಗಿದ್ದರು. ಈಗ ಅವೆಲ್ಲಾ ಮರೆತುಹೋದವೇ? ಅಷ್ಟಕ್ಕೂ ಅವರೇಕೆ ಮೋದಿ ಕಾರ್ಯಕ್ರಮಕ್ಕೆ ಹೋಗಬಾರದು? ವಿಐಪಿ ಪಾಸನ್ನು ಪಡೆಯಬಾರದು. ಮೋದಿ ಪ್ರಧಾನಿಯಾಗಲು ಸಂಘಟನೆ ಕಟ್ಟಿ ಮೋದಿಯಿಂದ ಶ್ಲಾಘನೆಗೊಳಗಾದ ಯುವಕ ತನ್ನ ಉದ್ದೇಶ ಈಡೇರಿದ್ದನ್ನು ಕಂಡು ಸಂಭ್ರಮಿಸಬಾರದೇ? ಮತ್ತೊಂದು ತಮಾಷೆಯೆಂದರೆ ಟೀಕಾಕಾರರಿಗೆ ವಿಐಪಿ ಪಾಸಿನ ಬಗ್ಗೆಯೇ ತಿಳಿದಿಲ್ಲ. ಯಾವುದೇ ಕಾರ್ಯಕ್ರಮದಲ್ಲಿ ವಿಐಪಿಗಳಾರು, ವಿವಿಐಪಿಗಳಾರು ಎಂದು ನಿರ್ಧರಿಸುವುದು ಪೊಲೀಸರಲ್ಲ. ಆಯೋಜಕರ ಸಲಹೆಯ ಮೇರೆಗೆ ವ್ಯವಸ್ಥೆ ಮತ್ತು ರಕ್ಷಣೆಯ ದ್ರಷ್ಟಿಯಿಂದ ಪೊಲೀಸ್ ಇಲಾಖೆ ತಮ್ಮ ಮೊಹರನ್ನು ಪಾಸುಗಳಿಗೆ ಒತ್ತುತ್ತದೆ. ಆದರೆ ಬುದ್ಧಿಜೀವಿಗಳು ಪೊಲೀಸರೇ ಪಾಸನ್ನು ನರೇಶ್ ಶೈಣೈಗೆ ಒದಗಿಸಿದ್ದಾರೆ ಎಂದು ಹಾಸ್ಯಾಸ್ಪದ ಟೀಕೆ ಮಾಡುತ್ತಿದ್ದಾರೆ. ಸಮಾಜದ ನಡುವೆ ಕೆಲಸ ಮಾಡುವ ಎಲ್ಲರಿಗೂ ಆರೋಪಗಳು ಸಾಮಾನ್ಯ. ಕೆಲವೊಂದು ಆರೋಪಗಳು ಸಮಾಜಕಾರ್ಯದಿಂದ ವಿಮುಖರನ್ನಾಗಿಸುವ ಹುನ್ನಾರಗಳೇ ಆಗಿರುತ್ತವೆ. ಬುದ್ಧಿಜೀವಿಗಳೆನ್ನುವಂತೆ ಆರೋಪ ಹೊತ್ತುಕೊಂಡವರು ವೇದಿಕೆಯ ಸಮೀಪ ಕೂಡ ಸುಳಿಯಬಾರದು ಎಂಬ “ನಿಯಮ” ಇದ್ದಿದ್ದರೆ ನರೇಂದ್ರ ಮೋದಿಯಷ್ಟೇ ಅಲ್ಲ ಜವಾಹರ ಲಾಲ್ ನೆಹರೂ, ವಿಪಿ ಸಿಂಗ್, ರಾಜೀವ್ ಗಾಂಧಿ ಸಮೇತ ಯಾರೂ ಪ್ರಧಾನಿಯಾಗುತ್ತಿರಲಿಲ್ಲ. ಅಷ್ಟೇಕೆ ಭಾರತಕ್ಕೆ ಸ್ವಾತಂತ್ರ್ಯ ಕೂಡಾ ಬರುತ್ತಿರಲಿಲ್ಲ. ಸವಾಲುಗಳಿಂದ ಮೇಲೆದ್ದು ಬರುವ ಅಸಾಮಾನ್ಯ ಮಾತ್ರ ಸಮಾಜದಲ್ಲಿ ಮಾಧರಿಯಾಗಿ ಬದುಕಬಲ್ಲ. ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಅದಿನ್ನೂ ತಿಳಿದಿಲ್ಲವೇನೋ. ಏನೇ ಇರಲಿ, ಮೋದಿಯವರತ್ತ ಹೂಡಿದ ಬಾಣಗಳು ನರೇಶ್ ಶೈಣೈ ಅವರತ್ತ ಬಂದಿವೆ. ಬಹುಷ ನರೇಶ್ ಶೈಣೈ ಮೋದಿ ನಿಂದಾಸ್ತ್ರಗಳಿಗೆ ನಾನು ಕವಚವಾದೆ ಎಂದು ಹೆಮ್ಮೆಪಡುತ್ತಿರಬಹುದು. ನಮಗಂತೂ ಹಾಗನಿಸುತ್ತಿದೆ. ನೂರಾರು ಹೂವುಗಳು ಅರಳಿ, ಬಾಡಿಹೋಗುತ್ತವೆ. ಆದರೆ ದೇವರ ಪಾದಕ್ಕೆ ಅರ್ಪಿಸುವ ಹೂವು ತಾನೇ ಧನ್ಯ ಎಂದುಕೊಳ್ಳುತ್ತದಲ್ಲಾ ಹಾಗೆ. ದೇವರತ್ತ ರಾಕ್ಷಸರೆಸೆದ ಬಾಣಕ್ಕೆ ತಾನು ಎದೆಯೊಡ್ಡಿ ಧನ್ಯನಾದೆ ಎನ್ನುವ ಭಕ್ತನಾದೆ ಎನ್ನುವಂತೆ ನರೇಶ್ ಶೆಣೈ ನಮಗೆ ಕಾಣುತ್ತಾರೆ. ಕಂಗ್ರಾಜುಲೇಶನ್ ನರೇಶ್ ಶೈಣೈ. ನೀವು ನೈಜ ಭಕ್ತರೆಂದು ಸಾಭೀತುಪಡಿಸಿದಿರಿ.
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
ಸಂತೋಷ್ ತಮ್ಮಯ್ಯ May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
ಸಂತೋಷ್ ತಮ್ಮಯ್ಯ May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search