ಬೇಜಾರು ಕಳೆಯಲು ಮಂಗಳೂರಿನ ಈ ಜಾಗವೇ ಸೂಕ್ತ! ಆ ಜಾಗ ಯಾವುದೆಂದು ನಿಮಗೆ ಗೊತ್ತಾ?
ಅದೆಷ್ಟೋ ಬಾರಿ ನಾವು ಬೇಜಾರಿನಲ್ಲಿದ್ದಾಗ ಯಾರಿಗೋ ಬೈದು ಎಡವಟ್ಟು ಮಾಡಿಕೊಂಡ ಅದೆಷ್ಟೋ ಉದಾಹರಣೆಗಳು ನಮ್ಮಲೇ ಇರುತ್ತವೆ. ಬೇಜಾರಿನಲ್ಲಿ ಸ್ನೇಹವನ್ನು ಕಳೆದು ಕೊಂಡವರು ಇದ್ದಾರೆ. ಅಂತಹ ಸನ್ನಿವೇಶದಲ್ಲಿ ಈ ಜಾಗಕ್ಕೆ ಹೋಗಿ ಕುಳಿತರೆ ನಮ್ಮ ಬೇಜಾರು ಮಾಯವಾಗುತ್ತೆ ಅನ್ನೋ ಅದೆಷ್ಟೋ ಕಾಲೇಜಿನ ಮಕ್ಕಳು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.
ಹೌದು ಮಂಗಳೂರಿನ ಸುಲ್ತಾನ್ ಬತ್ತೇರಿಯ ಬಳಿ ಹೋಗಿ ಕುಳಿತರೆ ಅಲ್ಲಿಯ ವಾತಾವರಣದಿಂದಾಗಿ ನಮ್ಮ ಬೇಜಾರು ದೂರವಾಗುತ್ತಂತೆ. ನಮ್ಮ ತಂಡ ಸುಲ್ತಾನ್ ಬತ್ತೇರಿಯ ಬಳಿ ಒಬ್ಬನೇ ಸುಮ್ಮನೆ ಕುಳಿತ್ತಿದ್ದಹುಡುಗನನ್ನು ಹೀಗೆ ಕೇಳಿತು. ‘ ಅಲ್ಲ, ಸುಮಾರು ಒಂದು ಘಂಟೆಯಿಂದ ನೀವು ಒಬ್ಬರೇ ಇಲ್ಲಿ ಕುತ್ತಿದ್ದೀರಿ ನಿಮಗೆ ಬೇಜಾರು ಆಗಲಿಲ್ಲವೆ ಎಂದು ಕೇಳಿದ್ದೆ ತಡ ಅವನ ಉತ್ತರ ಹೀಗಿತ್ತು ‘ನನಗೆ ಏನೋ ಒಂದು ರೀತಿಯ ಬೇಜಾರಾಗಿದೆ, ಆ ಬೇಸರವನ್ನು ಕಳೆಯಲು ಇಲ್ಲಿ ಬಂದು ಕುಳಿತ್ತಿದ್ದೇನೆ ಮತ್ತು ನನ್ನ ಬೇಜಾರು ಒಂದು ಘಂಟೆಯಲ್ಲಿ ಮಾಯವಾಹಿತು ಎಂದು ಹೇಳಿದನು.
ಈ ಉತ್ತರ ಕೇವಲ ಇವನ ಉತ್ತರ ವಾಗಿರಲಿಲ್ಲ, ಅಲ್ಲಿ ಒಂಟಿಯಾಗಿ ಬಂದ್ಡಿದ ಅದೆಷ್ಟೋ ಹುಡುಗ-ಹುಡುಗಿಯರ ಉತ್ತರವಾಗಿತ್ತು. ನಿಮಗೂ ಬೇಜಾರಾದಾಗ ಸುಲ್ತಾನ್ ಬತ್ತೇರಿಯ ಬಳಿಯಿರುವ ಗುರುಪುರ ನದಿ ದಡದಲ್ಲಿರುವ ಕಟ್ಟೆಯ ಮೇಲೆ ಕೂತು ನಿಮ್ಮ ಬೇಜಾರಿನ ಮನಸನ್ನು ಬದಲಾಯಿಸಿಕೊಳ್ಳಿ.
Leave A Reply