ಪೊಲೀಸ್ ಪೇದೆ ಅಮಾನತು, ಇದು ಸರ್ವಾಧಿಕಾರವಲ್ಲವೇ ಸಿದ್ದರಾಮಯ್ಯನವರೇ?
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ಮಾತನಾಡುವ ಭರದಲ್ಲಿ ಅವರು ಸರ್ವಾಧಿಕಾರಿ ಎಂದು ವಿನಾಕಾರಣ ಟೀಕಿಸುತ್ತಾರೆ. ಆದರೆ ಅದೇ ಸಿದ್ದರಾಮಯ್ಯ ಅವರು, ಫೇಸ್ ಬುಕ್ ನಲ್ಲಿ ಬೆಳ್ತಂಡಿಯ ಪೊಲೀಸ್ ಪೇದೆಯೊಬ್ಬರು ತಮ್ಮನ್ನು ಛೇಡಿಸುವ ರೀತಿ ಪೋಸ್ಟ್ ಹಾಕಿದ್ದಕ್ಕೆ ಅಮಾನತುಗೊಳಿಸಿದ್ದಾರೆ.
ರಾಜ್ ಶಿವಪ್ಪ ಎಂಬ ಪೇದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಂಸ, ಮೀನು ತಿಂದು ಧರ್ಮಸ್ಥಳಕ್ಕೆ ತೆರಳಿದ್ದಾರೆ. ಆದರೆ ಅದೇ ನರೇಂದ್ರ ಮೋದಿ ಉಪವಾಸ ಇದ್ದು, ಸಂಸ್ಕಾರಭರಿತರಾಗಿ ಧರ್ಮಸ್ಥಳಕ್ಕೆ ತೆರಳಿದ್ದಾರೆ ಎಂಬರ್ಥದ ಎರಡು ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದರು.
ಆದರೆ ಇದನ್ನು ಸಹಿಸದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಪೇದೆಯನ್ನು ಅಮಾನತುಗೊಳಿಸಿದೆ.
ಇದೇ ಸಿಎಂ ಅಭಿವ್ಯಕ್ತಿ ಸ್ವಾತಂತ್ರ್ಯ, ಸರ್ವಾಧಿಕಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಪೇದೆಯೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಮಾತ್ರಕ್ಕೆ ಅಮಾನತುಗೊಳಿಸುವುದು ಸರ್ವಾಧಿಕಾರದ ಸಂಕೇತವಲ್ಲವೇ? ಪೇದೆಯನ್ನು ಅಮಾನತುಗೊಳಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವೇ ಅಲ್ಲವೇ?
ರಾಜ್ ಶಿವಪ್ಪ ಅವರು ಬಾಗಲಕೋಟೆಯವರಾಗಿದ್ದು, ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಅವರು 6 ವರ್ಷಗಳ ಹಿಂದೆ ಪೇದೆಯಾಗಿ ಆಯ್ಕೆಯಾಗಿದ್ದು, ಮಂಗಳೂರಿನ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.
Leave A Reply