ಬಿಜೆಪಿ ಕೋಮುವಾದಿ ಪಕ್ಷವಲ್ಲ, ಜಾತ್ಯತೀತ ಶಕ್ತಿ: ಮುಕುಲ್ ರಾಯ್
Posted On November 4, 2017

ದೆಹಲಿ: ತೃಣಮೂಲ ಪಕ್ಷದ ಮಾಜಿ ನಾಯಕ, ಪಶ್ಚಿಮ ಬಂಗಾಳದ ಮುಕುಲ್ ರಾಯ್ ಬಿಜೆಪಿ ಸೇರಿದ್ದು, ಬಿಜೆಪಿ ಕುರಿತು ಹೊಗಳಿಕೆಯ ಮಾತನಾಡಿದ್ದಾರೆ.
ಬಿಜೆಪಿ ಕೋಮುವಾದಿ ಪಕ್ಷ ಅಲ್ಲವೇ ಅಲ್ಲ, ಇದು ಜಾತ್ಯತೀತ ಪಕ್ಷ. ಇದೇ ನಿಜವಾದ ಜಾತ್ಯತೀತ ಶಕ್ತಿ ಎಂದು ಮುಕುಲ್ ರಾಯ್ ಹೇಳಿದ್ದಾರೆ.
ಬಿಜೆಪಿ ಇರದೇ ಹೋಗಿದ್ದರೆ ತೃಣಮೂಲ ಕಾಂಗ್ರೆಸ್ ಅಸ್ತಿತ್ವ ಸಾಧಿಸುವುದೇ ಸಾಧ್ಯವಾಗುತ್ತಿರಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಮುಂದೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.
ಮುಕುಲ್ ರಾಯ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲಗೈ ಬಂಟ ಎಂದೇ ಖ್ಯಾತಿಯಾಗಿದ್ದರು. ಆದರೆ ಅಕ್ಟೋಬರ್ ನಲ್ಲಿ ಪಕ್ಷ ಹಾಗೂ ಮಮತಾ ಬಣ ತೊರೆದು ಎಲ್ಲ ಸ್ಥಾನಗಳಿಗೂ ರಾಯ್ ರಾಜೀನಾಮೆ ನೀಡಿದ್ದರು.
ಈಗ ದೆಹಲಿಯಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯ ನೇತೃತ್ವದಲ್ಲಿ ರಾಯ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ರಾಯ್ ಆಗಮನದಿಂದ ಪಕ್ಷ ಮತ್ತಷ್ಟು ಬಲವಾಗಲಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
- Advertisement -
Leave A Reply