ಕೇರಳದಲ್ಲಿ ಆರೆಸ್ಸೆಸ್ ಕಚೇರಿ, ದೇಗುಲದ ಮೇಲೆ ಸ್ಟೀಲ್ ಬಾಂಬ್ ದಾಳಿ, ಕಮ್ಯುನಿಸ್ಟರ ಕೈವಾಡ ಶಂಕಿಸಿ ದೂರು
ತಿರುವನಂತಪುರ: ಕೇರಳದ ಕಣ್ಣೂರು ಜಿಲ್ಲೆ ಕೂತುಪರಂಬ ಪಟ್ಟಣದಲ್ಲಿ ಆರೆಸ್ಸೆಸ್ ಕಚೇರಿ ಹಾಗೂ ನಾರಾಯಣ ಗುರು ದೇವಾಲಯದ ಮೇಲೆ ಸ್ಟೀಲ್ ಬಾಂಬ್ ದಾಳಿ ಮಾಡಿದ್ದು, ಇದು ಕಮ್ಯುನಿಸ್ಟರ ಕೃತ್ಯ ಎಂದು ಆರೆಸ್ಸೆಸ್ ಆರೋಪಿಸಿ ದೂರು ನೀಡಿದೆ.
ಮೊದಲು ಆರೆಸ್ಸೆಸ್ ಕಚೇರಿ ಮೇಲೆ ಎರಡು ಸ್ಟೀಲ್ ಬಾಂಬ್ ದಾಳಿ ಮಾಡಿದ್ದು, ವರಾಂಡ ಹಾನಿಯಾಗಿದೆ. ಬಳಿಕ ನಾರಾಯಣ ಗುರು ದೇವಾಲಯದ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದಾರೆ. ಇದು ಸಿಪಿಎಂ ಕಾರ್ಯಕರ್ತರ ಕೃತ್ಯ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಲ್ಲದೇ, ಸಿಪಿಎಂ ವಿರುದ್ಧ ಪ್ರತಿಭಟನೆ ಸಹ ನಡೆಸಲಾಗಿದೆ.
ದೇವಾಲಯಕ್ಕೆ ಮಾಡಿದ ದಾಳಿಯಲ್ಲಿ, ದೇವರ ಅಂಗಗಳನ್ನು ಧ್ವಂಸ ಮಾಡಲಾಗಿದೆ. ಗೋಡೆಗೆ ಹಾನಿ ಮಾಡಲಾಗಿದೆ. ಇದು ಸಿಪಿಎಂ ಕಾರ್ಯಕರ್ತರ ಕೃತ್ಯವಾಗಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೇರಳದಲ್ಲಿ ಲವ್ ಜಿಹಾದ್, ಮತಾಂತರ, ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಿರಂತರವಾಗಿ ನಡೆಯುತ್ತಿದ್ದು ಈ ಕುರಿತು ಸರ್ಕಾರವೂ ಕ್ರಮ ಕೈಗೊಂಡಿಲ್ಲ ಹಾಗೂ ಯಾವ ಪ್ರಕಾಶ್ ರೈ ಸಹ ಧ್ವನಿ ಎತ್ತಿಲ್ಲ. ಇಬ್ಬಂದಿತನದ ಮುಂದೆ ಕಣ್ಣಿಗೆ ತಪ್ಪಿನ ಎಲ್ಲ ಆಯಾಮಗಳು ಮಂಕಾಗುತ್ತವೆ ಎಂಬುದಕ್ಕೆ ಇದೇ ಸಾಕ್ಷಿ.
Leave A Reply