ನಗರಸಭೆ ಮಾಜಿ ಸದಸ್ಯ, ಮುಸ್ಲಿಂ ವ್ಯಕ್ತಿಯಿಂದ 5 ಮದುವೆ, ಹೆಂಡತಿಯೊಬ್ಬಳನ್ನು ಬೀದಿಗೆ ತಳ್ಳಿದ ಆರೋಪ
Posted On November 11, 2017

ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ನಗರಸಭೆ ಮಾಜಿ ಸದಸ್ಯ ಶಾಮಿದ್ ಮುನಿಯಾರ್ ಎಂಬಾತ ಬರೋಬ್ಬರಿ ಐದು ಮದುವೆಯಾಗಿದ್ದು, ಈಗ ಅವರಲ್ಲಿ ಒಬ್ಬರನ್ನು ಮನೆಯಿಂದ ಹೊರಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿವೆ. ಅಲ್ಲದೆ ಮುಸ್ಲಿಮರಿಗೆ ಬಹುಪತ್ನಿತ್ವಕ್ಕೆ ಅವಕಾಶ ಮಾಡಿಕೊಟ್ಟ ಕಾರಣ ಮುಸ್ಲಿಂ ಮಹಿಳೆಯರು ನರಳುವಂತಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯಪಟ್ಟಿದ್ದಾರೆ.
ಶಾಮೀದ್ ನಾಲ್ಕು ಮದುವೆಯಾಗಿದ್ದು, 2013ರಲ್ಲಿ ಈಗಾಗಲೇ ಮೂವರಿಗ ತಲಾಖ್ ನೀಡಿದ್ದೇನೆ ಎಂದು ನಂಬಿಸಿ ಗೋವಾ ಮೂಲದ ಫರ್ವಿನ್ ಎಂಬ ಯುವತಿಯನ್ನು ಮದುವೆಯಾಗಿದ್ದ ಎಂದು ತಿಳಿದುಬಂದಿದ್ದ.
ಈಗ ಶಾಮಿದ್ ನಿಂದ ಕಿರುಕುಳಕ್ಕೊಳಗಾಗಿರುವ ಫರ್ವಿನ್ ಮಾಧ್ಯಮದವರೊಂದಿಗೆ ಅಳಲು ತೋಡಿಕೊಂಡಿದ್ದು, ಮದುವೆಯಾದ ಬಳಿಕ ಕೊಪ್ಪಳದಲ್ಲಿ ಮನೆ ಮಾಡಿ ಇರಿಸಿದ್ದ. ಬಳಿಕ ರೌಡಿಗಳನ್ನು ಬಿಟ್ಟು ನನ್ನ ಮೇಲೆ ಹಲ್ಲೆ ಮಾಡಿಸಿದ್ದಾನೆ. ಈತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೂ ಯತ್ನಿಸಿದ್ದೇನೆ ಎಂದು ತಿಳಿಸಿದ್ದಾರೆ.
ಈತ ಶಾಸಕ ಇಕ್ಬಾಲ್ ಅನ್ಸಾರಿ ಆಪ್ತ ಎಂಬ ಆರೋಪ ಕೇಳಿಬಂದಿವೆ.
- Advertisement -
Leave A Reply