ಸಿಎಂ ಸಿದ್ದರಾಮಯ್ಯ ಮೈಯಲ್ಲಿ ಹರಿಯುತ್ತಿರುವುದು ಟಿಪ್ಪು ರಕ್ತ: ಈಶ್ವರಪ್ಪ
ಮಂಗಳೂರು: ನನ್ನ ಮೈಯಲ್ಲಿ ಪಕ್ಕಾ ಕುರುಬರ ರಕ್ತ ಹರಿಯುತ್ತಿದೆ. ಆದರೆ ಹಠಕ್ಕೆ ಬಿದ್ದು ಟಿಪ್ಪು ಜಯಂತಿಯನ್ನು ಆಚರಿಸಿದ ಮುಖ್ಯಮಂತ್ರಿ ಮೈಯಲ್ಲಿ ಹರಿಯುತ್ತಿರುವುದು ಟಿಪ್ಪು ಸುಲ್ತಾನ್ ರಕ್ತ, ಹಾಗಾಗಿ ಅವರು ಟಿಪ್ಪು ಎಂದು ಹೆಸರಿಟ್ಟುಕೊಳ್ಳುವುದು ಒಳಿತು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮಂಗಳೂರಿನ ಬಂಟ್ವಾಳದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ ಹಿನ್ನೆಲೆ ಬಿಸಿ ರೋಡ್ ಬಳಿಯ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಂದ ಜನರ ಮನಸ್ಸು ಗೆಲ್ಲಲು ಆಗದ ಸಿದ್ದರಾಮಯ್ಯ ಜಾತಿಯಿಂದ ಗೆಲ್ಲಲು ಹೊರಟಿದ್ದಾರೆ ಎಂದು ಜರಿದರು.
ತಾಕತ್ತಿದ್ದರೆ ಸುನ್ನತ್ ನಿಷೇಧಿಸಿ
ಮೂಢ ನಂಬಿಕೆ ನಿಷೇಧ ಕಾಯಿದೆ ಜಾರಿಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಮುಸ್ಲಿಮರ ಸುನ್ನತ್ (ಪುರುಷರ ಮರ್ಮಾಂಗದ ಮುಂದೊಗಲು ಕತ್ತರಿಸುವುದು) ನಿಷೇಧಿಸಿ. ಅಲ್ಪಸಂಖ್ಯಾತರ ವೋಟು ತಪ್ಪುತ್ತವೆ ಎಂದು ಬರೀ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಎಲ್ಲ ನಾಯಕರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
Leave A Reply