ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪೊಲೀಸರು, ಭದ್ರತಾ ಸಿಬ್ಬಂದಿ ನೆನೆದ ಮೋದಿ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ 38ನೇ ಸರಣಿಯಲ್ಲಿ ಮೋದಿ ಅವರು 2008ರ 26/11ರ ಉಗ್ರರ ದಾಳಿಯನ್ನು ಸ್ಮರಿಸಿದ್ದು, ಉಗ್ರರ ವಿರುದ್ಧ ಹೋರಾಡಿ ಮಡಿದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯನ್ನು ನೆನೆದಿದ್ದಾರೆ.
2008ರಲ್ಲಿ ಮುಂಬೈ ಮೇಲೆ ಉಗ್ರರು ಮಾಡಿದ ದಾಳಿಯನ್ನು ದೇಶದ ಜನ ಮರೆಯುವಂತಿಲ್ಲ. ದಾಳಿ ವೇಳೆ ಮಡಿದ ಪೊಲೀಸರು, ಶೂರ ನಾಗರಿಕರು, ಭದ್ರತಾ ಸಿಬ್ಬಂದಿ ತ್ಯಾಗ ಎಂದಿಗೂ ಸ್ಮರಣಾರ್ಹ.
ಭಾರತ 1971ರ ವೇಳೆಯಲ್ಲೇ ಭಯೋತ್ಪಾದನೆ ವಿರುದ್ಧ ಮಾತನಾಡಿತ್ತು. ಆದರೆ ಆಗ ವಿಶ್ವದ ಎಲ್ಲ ರಾಷ್ಟ್ರಗಳೂ ನಿರ್ಲಕ್ಷ್ಯ ವಹಿಸಿದವು. ಪ್ರಸ್ತುತ ಭಯೋತ್ಪಾದನೆಯ ವಿಶ್ವರೂಪ ಪ್ರದರ್ಶನವಾಗುತ್ತಿರುವ ಹಿನ್ನೆಲೆ ಎಲ್ಲ ರಾಷ್ಟ್ರಗಳೂ ಎಚ್ಚೆತ್ತುಕೊಂಡಿವೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಡಿ.4ರಂದು ನೌಕಾಪಡೆ ದಿನ ಆಚರಿಸುವ ಹಿನ್ನೆಲೆಯಲ್ಲಿ ಭಾರತೀಯ ನೌಕಾ ಪಡೆಯ ಕೊಡುಗೆ, ಅವರ ತ್ಯಾಗ, ಹೋರಾಟವನ್ನು ಸಹ ಮೋದಿ ಸ್ಮರಿಸಿದ್ದಾರೆ.
26/11 ಸಂವಿಧಾನ ಸ್ವೀಕಾರ ದಿನವಾದ್ದರಿಂದ ಪ್ರಧಾನಿ ಮೋದಿ ಅವರು ಸ್ಮರಿಸಿದ್ದು, ಅಂಬೇಡ್ಕರ್ ಅವರನ್ನು ನೆನಪಿಸಿದ್ದಾರೆ.
ಕಾಂಗ್ರೆಸ್ ನರೇಂದ್ರ ಮೋದಿ ಅವರು ಚಾಯ್ ವಾಲಾ ಎಂದು ಅಣಕಿಸಿದ ಕಾರಣ ಮೋದಿ ಈ ಬಾರಿಯ ರೇಡಿಯೋ ಕಾರ್ಯಕ್ರಮದ ಟ್ಯಾಗ್ ಲೈನ್ ಅನ್ನು “ಮನ್ ಕೀ ಬಾತ್, ಚಾಯ್ ಕೆ ಸಾಥ್” ಎಂದು ಬದಲಾಯಿಸಿಕೊಳ್ಳುವ ಮೂಲಕ ಕಾಂಗ್ರೆಸ್ಸಿಗೆ ಟಾಂಗ್ ನೀಡಿದ್ದಾರೆ.
Leave A Reply