ಕೇಂದ್ರದ ರೈಲ್ವೆ ಆಧುನೀಕರಣ ಯೋಜನೆ ಯಶಸ್ಸಿಗೆ ಮುನ್ನುಡಿ, ರೈಲು ಪ್ರಯಾಣಿಕರಲ್ಲಿ 6.5ರಷ್ಟು ಏರಿಕೆ
Posted On November 28, 2017
0
ಅದು 2017 ರ ಬಜೆಟ್…
- ರೈಲು ನಿಲ್ದಾಣಗಳ ಆಧುನಿಕರಣ
- ರೈಲುಗಳಲ್ಲಿ ಪರಿಸರ ಸ್ನೇಹಿ ಶೌಚಾಲಯ
- ಆನ್ ಲೈನ್ ರೈಲು ಟಿಕೆಟ್ ಬುಕ್ಕಿಂಗ್ ದರ ಕಡಿತ
ಹೀಗೆ ಕೇಂದ್ರ ಸರ್ಕಾರ ರೈಲ್ವೆ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಮೀಸಲಿಟ್ಟಿತ್ತು. ಅದರಂತೆ ದೇಶದ ಹಲವು ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿತು. ಈಗ ಈ ಯೋಜನೆ ಯಶಸ್ಸಿಗೆ ಮುನ್ನುಡಿಯೊಂದು ದೊರೆತಿದ್ದು, ಕೇಂದ್ರ ಸರ್ಕಾರದ ಮಾಹಿತಿಯಂತೆ ರೈಲು ಪ್ರಯಾಣಿಕರಲ್ಲಿ ಶೇ.6.58ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಕಳೆದ ಏಪ್ರಿಲ್ ನಿಂದ ನ.20ರವರೆಗೆ ಇಷ್ಟು ಪ್ರಮಾಣದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬರೋಬ್ಬರಿ 2.1 ದಶಲಕ್ಷ, ಅಂದರೆ 2.1 ಕೋಟಿ ಜನ ರೈಲು ಹತ್ತಿದ್ದಾರೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ರೈಲುಗಳ ಅಭಿವೃದ್ಧಿಯೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದ್ದು, ಬಸ್, ವಿಮಾನಕ್ಕಿಂತ ದರ ಕಡಿಮೆ ಹಾಗೂ ಉತ್ಕೃಷ್ಟ ಸೌಲಭ್ಯ ಒದಗಿಸಿದ್ದು ಅನುಕೂಲವಾಗಿದೆ. ಅಲ್ಲದೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ 1,579 ಕೋಟಿ ರೂಪಾಯಿ ಲಾಭ ಗಳಿಸಿದೆ.
Trending Now
ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
January 16, 2026
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
January 12, 2026









