ಮುಸ್ಲಿಂ ಯುವಕ ಹಿಂದೂ ಧರ್ಮಕ್ಕೆ ಮತಾಂತರವಾಗುವ ತನಕ ಮದುವೆಯಾಗಲ್ಲ ಎಂದ ದಿಟ್ಟೆ ಯಾರು ಗೊತ್ತಾ?
ಜೈಪುರ: ಕೇರಳ, ಮುಂಬೈ ಸೇರಿ ದೇಶದ ಹಲವೆಡೆ ಹಿಂದೂ ಯುವತಿಯರನ್ನು ಮತಾಂತರಗೊಳಿಸಿ ಮದುವೆಯಾಗುವ, ಅವರಿಗೆ ಕಿರಕುಳ ನೀಡುವ ಸೇರಿ ಹಲವು ಜಿಹಾದ್ ಪ್ರಕರಣ ಸುದ್ದಿಯಾಗುತ್ತಿರುವ ಬೆನ್ನಲ್ಲೇ, ರಾಜಸ್ಥಾನದ ಜೋಧ್ ಪುರದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯತಮ ಹಿಂದೂ ಧರ್ಮಕ್ಕೆ ಮತಾಂತರವಾಗದ ಹೊರತು ಆತನನ್ನು ಮದುವೆಯಾಗುವುದಿಲ್ಲ ಎಂದು ದಿಟ್ಟತನ ಮೆರೆದಿದ್ದಾಳೆ.
20 ವರ್ಷದ ಪೂಜಾ ಜೋಷಿ ಹಾಗೂ ಟ್ಯಾಕ್ಸಿ ಡ್ರೈವರ್ ಮೊಹ್ಶಿನ್ ಖಾನ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರೂ ಕಾಣೆಯಾಗಿದ್ದು, ಇದು ಲವ್ ಜಿಹಾದ್ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಪೂಜಾ ತಂದೆ ನೀಡಿದ ದೂರಿನ ಅನ್ವಯ ಬಿಕಾನೆರ್ ಎಂಬಲ್ಲಿ ಇಬ್ಬರೂ ಪ್ರಣಯ ಪಕ್ಷಿಗಳನ್ನು ಪೊಲೀಸರು ಬಂಧಿಸಿದ್ದು, ಏನಾಗಿದೆ ಎಂದು ವಿಚಾರಣೆ ನಡೆಸಿದ್ದಾರೆ. ಇದು ಲವ್ ಜಿಹಾದ್ ಎಂದು ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಇಬ್ಬರನ್ನೂ ವಿಚಾರಿಸಿದ ಬಳಿಕ ಎಸಿಪಿ ಪೂಜಾ ಯಾದವ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, “ಮುಸ್ಲಿಂ ಯುವಕ ಹಿಂದೂ ಧರ್ಮಕ್ಕೆ ಮತಾಂತರಾಗುವವರೆಗೂ ಆತನನ್ನು ಮದುವೆಯಾಗುವುದಿಲ್ಲ ಎಂದು ಪೂಜಾ ಜೋಷಿ ತಿಳಿಸಿದ್ದಾರೆ” ಎಂದಿದ್ದಾರೆ.
ಅಲ್ಲದೆ, ಆತ ಮತಾಂತರವಾಗುವವರೆಗೂ ತನ್ನ ಸಂಬಂಧಿಕರ ಮನೆಯಲ್ಲೇ ವಾಸವಾಗಿರುವುದಾಗಿ ತಿಳಿಸಿದ್ದು, ಆಕೆ ಇನ್ನೂ ಬಾಲಕಿಯಲ್ಲದ ಹಾಗೂ ಆಕೆ ಎಲ್ಲಾದರೂ ವಾಸಿಸುವ ಹಕ್ಕು ಹೊಂದಿದ್ದಾಳೆ ಎಂದು ಎಸಿಪಿ ಹೇಳಿದ್ದಾರೆ.
ಒಟ್ಟಿನಲ್ಲಿ ಲವ್ ಜಿಹಾದ್ ಬಲೆಗೆ ಬಿದ್ದು ಜೀವನ ಪೂರ್ತಿ ನರಕ ಅನುಭವಿಸುವವರಿಗಿಂತ, ಆತ ಪ್ರೀತಿಗಾಗಿ ಮತಾಂತರವಾಗುವವರೆಗೂ ಮದುವೆಯಾಗಲ್ಲ ಎಂದು ಪೂಜಾ ಜೋಷಿ ಹಠ ಹಿಡಿದಿರುವುದು ದಿಟ್ಟತನವಾಗಿದ್ದು, ಯುವಕ ಯಾವ ಹಾದಿ ತುಳಿಯಲಿದ್ದಾನೆ ಎಂಬುದು ಕುತೂಹಲ ಕೆರಳಿಸಿದೆ.
Leave A Reply