ಪಂಜಾಬಿನಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆ ಹಿಂದಿರುವ ಉಗ್ರ ಸಂಘಟನೆ ಯಾವುದು ಗೊತ್ತಾ?
ಚಂಡೀಗಡ: ಕರ್ನಾಟಕವೂ ಸೇರಿ ದೇಶದ ಹಲವೆಡೆ ದಿನೇದಿನೆ ಆರೆಸ್ಸೆಸ್, ಬಿಜೆಪಿ ಕಾರ್ಯಕರ್ತರ ಹತ್ಯೆಯ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇದೆ ಎಂಬ ಶಂಕೆಯ ಬೆನ್ನಲ್ಲೇ, ಪಂಜಾಬಿನಲ್ಲಿ ನಡೆದ ಹತ್ಯೆಗಳ ಹಿಂದೆ ಉಗ್ರ ಸಂಘಟನೆಯೊಂದರ ಉಪಟಳ ಇದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಪಂಜಾಬಿನಲ್ಲಿ ಆರೆಸ್ಸಸ್ ಕಾರ್ಯಕರ್ತರ ಹತ್ಯೆಯ ಹಿಂದೆ ಐಸಿಸ್ ಉಗ್ರ ಸಂಘಟನೆ ಇದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಮಾಹಿತಿ ನೀಡಿದ್ದು, ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ.
ಕಳೆದ ಅಕ್ಟೋಬರ್ ನಲ್ಲಿ ಪಂಜಾಬಿನಲ್ಲಿ ಆರೆಸ್ಸೆಸ್ ಮುಖಂಡ ರವೀಂದರ್ ಗೋಸೈನ್ ಎಂಬುವವರನ್ನು ಹತ್ಯೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದು, ಎನ್ಐಎ ಅಧಿಕಾರಿಗಳನ್ನು ಅವರನ್ನು ವಿಚಾರಿಸಿದಾಗ ಹತ್ಯೆಗಳ ಹಿಂದೆ ಐಸಿಸ್ ಉಗ್ರ ಸಂಘಟನೆ ಕೈವಾಡ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಐಸಿಸ್ ಉಗ್ರ ಸಂಘಟನೆ ಮುಖಂಡರು ಪಂಜಾಬಿನ ಖಲಿಸ್ತಾನ ಉಗ್ರರನ್ನು ಬಳಸಿಕೊಂಡು ಆರೆಸ್ಸೆಸ್ ಕಾರ್ಯಕರ್ತರನ್ನು ಹತ್ಯೆ ಮಾಡಿಸಲಾಗುತ್ತಿದೆ ಎಂದು ಬಂಧಿತರು ಒಪ್ಪಿಕೊಂಡಿದ್ದಾರೆ. ಇಬ್ಬರೂ ಖಲಿಸ್ತಾನ ಉಗ್ರ ಸಂಘಟನೆಯ ಸದಸ್ಯರಾಗಿದ್ದಾರೆ.
2016ರಲ್ಲೂ ಜಗದೀಶ್ ಗಗ್ನೇಜ ಹಾಗೂ ಅಮಿತ್ ಶರ್ಮಾ ಎಂಬ ಇಬ್ಬರು ಆರೆಸ್ಸೆಸ್ ಮುಖಂಡರ ಹತ್ಯೆಯಲ್ಲೂ ಭಾಗಿಯಾಗಿದ್ದಾರೆ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ದೇಶಾದ್ಯಂತ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯ ಹಿಂದೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಒಂದೆಡೆಯಾದರೆ, ಉಗ್ರರೂ ಇರುವುದು ಭಯದ ವಾತಾವರಣ ನಿರ್ಮಾಣವಾಗುವಂತಾಗಿದೆ.
Leave A Reply