ಕೃಷ್ಣ, ರಾಮರ ಅಸ್ತಿತ್ವವನ್ನೇ ಪ್ರಶ್ನಿಸಿದ ಕಾಂಗ್ರೆಸ್ ಮುಖಂಡರು ದೇವಸ್ಥಾನಗಳಿಗೆ ಏಕೆ ಭೇಟಿ ನೀಡುತ್ತಿದ್ದಾರೆ?: ಯೋಗಿ
ದೆಹಲಿ: ಯುಪಿಎ ಸರಕಾರ ಭಗವಾನ್ ಶ್ರೀಕೃಷ್ಣ ಮತ್ತು ಶ್ರೀರಾಮರ ಅಸ್ತಿತ್ವವನ್ನೇ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿತ್ತು. ಅವರು ಕಾಲ್ಪನಿಕ ವ್ಯಕ್ತಿಗಳು ಎಂದು ವಾದ ಮಂಡಿಸಿತ್ತು. ಹಾಗಾದ್ರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಏಕೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ? ದೇವಸ್ಥಾನಗಳಿಗೆ ನೀಡುವ ಭೇಟಿ ಕೇವಲ ನಾಟಕವೇ. ರಾಹುಲ್ ಗಾಂಧಿ ಅವರ ಢೋಂಗಿತನ ಯಾವುದೆ ಪ್ರಭಾವ ಬೀರದು ಎಂದು ಹೇಳಿದರು.
ಒಂದೆಡೆ ದೇವಾಲಯಗಳಿಗೆ ಭೇಟಿ ನೀಡುವುದು ಮತ್ತೊಂದೆಡೆ ದೇವರ ಅಸ್ತಿತ್ವವನ್ನು ಪ್ರಶ್ನಿಸುವುದು ಕಾಂಗ್ರೆಸ್ ನ ಇಬ್ಬಂದಿತನಕ್ಕೆ ಸಾಕ್ಷಿ. ರಾಹುಲ್ ದೇವಾಲಯಗಳಿಗೆ ಭೇಟಿ ನೀಡುವ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ದೇವಾಲಯಗಳ ಭೇಟಿ ನೀಡುವುದರ ಮಹತ್ವವನ್ನು ತಿಳಿಸಿದ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾತನಾಡುವಂತೆ ಮಾಡಿದ ಶ್ರೇಯಸ್ಸು ಗುಜರಾತ್ ಜನರಿಗೆ ಸಲ್ಲಬೇಕು ಎಂದು ಹೇಳಿದರು.
‘ಗುಜರಾತ್ ಚುನಾವಣೆಯಲ್ಲಿ ಜನರು ರಾಹುಲ್ ಗೆ ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಮಾತನಾಡುವುದನ್ನು ಕಲಿಸಿದ್ದಾರೆ. ಇಂತಹ ಎರಡು ಮಹತ್ತರ ಕೆಲಗಳನ್ನು ಕಲಿಸಿದ ಗುಜರಾತ್ ಜನರಿಗೆ ಧನ್ಯವಾದ ಸಲ್ಲಿಸುವ ಮೂಲಕ ಕಾಂಗ್ರೆಸ್ ನಾಯಕರ ಕಾಲೆಳೆದರು.
ಈ ಬಾರಿ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ಹಲವು ದೇಗುಲಗಳಿಗೆ ಸರಣಿ ಭೇಟಿ ನೀಡುತ್ತಿದ್ದಾರೆ. ಕಾಂಗ್ರೆಸ್ ಪಾಕಿಸ್ತಾನದ ಜತೆ ಕೈಜೋಡಿಸಿದೆ ಎಂಬ ಪ್ರಧಾನಿ ಮೋದಿ ಅವರ ಆರೋಪಕ್ಕೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Leave A Reply