ಅಪ್ಪ,ಅಮ್ಮನ ಪರಿಚಯ ಇಲ್ಲದವರೇ ವಿಚಾರವಾದಿಗಳು- ಅನಂತ ಕುಮಾರ್ ಹೆಗ್ಡೆ
ತಮ್ಮನ್ನು ತಾವು ಜಾತ್ಯಾತೀತವಾದಿಗಳು ಎಂದು ಕರೆಸಿಕೊಳ್ಳುವವರ ಕುರಿತು ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ಸರಿಯಾಗಿ ಝಾಡಿಸಿ ಮಾತನಾಡಿದ್ದಾರೆ. ಒಬ್ಬ ವ್ಯಕ್ತಿ ತನ್ನದು ಈ ಜಾತಿ, ಈ ಧರ್ಮ ಎಂದು ಸ್ಪಷ್ಟವಾಗಿ ಹೇಳಿದರೆ ಅದರಲ್ಲಿ ತಮಗೆ ಆತನ ಬಗ್ಗೆ ಅಭಿಮಾನ ಮೂಡುತ್ತದೆ. ಆದರೆ ಅದೇ ತಮ್ಮ ಜಾತಿ, ಧರ್ಮದ ಬಗ್ಗೆ ಹೆಮ್ಮೆ ಇಲ್ಲದೆ ಕೇವಲ ಬೇರೆಯವರನ್ನು ವಿರೋಧಿಸಲು ಅಥವಾ ಟೀಕೆ ಮಾಡಲು ತಮ್ಮನ್ನು ತಾವು ಜಾತ್ಯಾತೀತತೆಯ ಮುಖವಾಡ ಹಾಕಿ ಅದರ ಹಿಂದೆ ತಮ್ಮ ಬೇಳೆ ಬೇಯಿಸಿಕೊಳ್ಳುವ ಜನರ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕು. ಒಬ್ಬ ಒಳ್ಳೆಯ ಮುಸ್ಲಿಂ, ಒಳ್ಳೆಯ ಕೈಸ್ತ ಅಥವಾ ಒಳ್ಳೆಯ ಲಿಂಗಾಯಿತ ಆದರೆ ಅಂತವರ ಕಾಲಿಗೆ ಬಿದ್ದು ನಮಸ್ಕರಿಸಬಹುದು. ಆದರೆ ತಾನು ಜಾತ್ಯಾತೀತ ವ್ಯಕ್ತಿ ಎಂದು ಹೇಳಿಕೊಳ್ಳುವವರಿಗೆ ತಮ್ಮ ರಕ್ತದ ಪರಿಚಯ ಇಲ್ಲದೆ ಇರುವುದರಿಂದ ಅವರು ಹೀಗೆ ಹೇಳಿಕೊಳ್ಳುತ್ತಾರೆ ಎಂದು ಅನಂತ್ ಕುಮಾರ್ ಹೆಗ್ಡೆ ಹೇಳಿದರು.
ಅವರ ಮಾತಿನ ಸಾರಾಂಶ ಈ ರೀತಿ ಇದೆ “ನೀವು ಹೆಮ್ಮೆಯಿಂದ ಮುಸ್ಲಿಮ್ ಎಂದು ಹೇಳಿಕೊಳ್ಳಿ. ಬೇಕಾದರೆ ಕ್ರೈಸ್ತ ಎಂದು ಹೇಳಿಕೊಳ್ಳಿ, ಲಿಂಗಾಯತ ಎಂದು ಹೇಳಿಕೊಳ್ಳಿ. ಅದರ ಅರ್ಥ ನಿಮಗೆ ನಿಮ್ಮ ರಕ್ತದ ಬಗ್ಗೆ ಹೆಮ್ಮೆ ಇದೆ ಮತ್ತು ಗೊತ್ತಿದೆ. ಅದೇ ಜಾತ್ಯಾತೀತರು ಎಂದು ಕರೆಸಿಕೊಳ್ಳುವವರನ್ನು ಯಾರು ಎಂದು ಕರೆಯಬೇಕು ಎಂದು ಗೊತ್ತಾಗುವುದಿಲ್ಲ. ನಿಮಗೆ ನಿಮ್ಮ ಕುಲದ, ಜಾತಿಯ ರಕ್ತದ ಪರಿಚಯ ಇದ್ರೆ ನಿಮ್ಮ ಮುಂದಿನ ತಲೆಮಾರಿಗೂ ಅದು ಗೊತ್ತಾಗುತ್ತದೆ. ಅದೇ ಜಾತ್ಯಾತೀತರು ಎಂದು ಹೇಳಿಕೊಳ್ಳುವವರಿಗೆ ತಮ್ಮ ರಕ್ತದ ಗುರುತೇ ಇರುವುದಿಲ್ಲ. ಅಪ್ಪ, ಅಮ್ಮನ ರಕ್ತದ ಗುರುತು ಇವರಿಗೆ ಇರುವುದಿಲ್ಲ. ಅಂತವರೇ ತಮ್ಮನ್ನು ವಿಚಾರವಾದಿಗಳು ಎಂದು ಹೇಳಿಕೊಳ್ಳುತ್ತಾರೆ. ಸಂವಿಧಾನ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಮುಂದೆ ಕೂಡ ಬದಲಾಗಲಿದೆ. ಸ್ಮತಿ ಎಂದರೆ ಆಯಾ ಕಾಲದ ಸಂವಿಧಾನ ಅಥವಾ ಶಾಸನ. ಈಗ ನಡೆಯುತ್ತಿರುವುದು ಅಂಬೇಡ್ಕರ್ ಸ್ಮೃತಿ. ಯಾವುದೋ ಕಾಲಕ್ಕೆ ಇದ್ದದ್ದು ಮನು ಸ್ಮೃತಿ. ಅದನ್ನೇ ಹಿಡಿದುಕೊಂಡು ವಿಚಾರವಾದಿಗಳು ತಿಕ್ಕಾಡುತ್ತಾರೆ. ಅವರೆಲ್ಲ ಇತಿಹಾಸ ಗೊತ್ತಿಲ್ಲದ ಮೂರ್ಖರು. ಈ ಸಂಪ್ರದಾಯ, ಪರಂಪರೆ, ಸ್ಮೃತಿ ಇದರ ಐತಿಹಾಸಿಕ ಹೆಜ್ಜೆಗಳ ಗುರುತೇ ನಿಮಗೆ ಗೊತ್ತಿಲ್ಲ. ಈಗ ಹೊಸ ಸಂಪ್ರದಾಯ ಪ್ರಾರಂಭವಾಗಿದೆ. ಮಾಡಿದ್ದು ತಾನು ತಪ್ಪು, ಆದರೆ ಬೇರೆಯವರಿಗೆ ಬೆಣ್ಣೆ ಒರೆಸುವುದು.
Leave A Reply