1999ರಲ್ಲೇ ಕಾರ್ಗಿಲ್ ಯುದ್ಧದಲ್ಲಿ ಇಸ್ರೇಲ್ ಭಾರತಕ್ಕೆ ಸಹಾಯ ಮಾಡಿತ್ತು, ಆ ಸ್ನೇಹ ಮೋದಿ ಅವಧಿಯಲ್ಲಿ ಇಮ್ಮಡಿಯಾಯಿತು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶಿಷ್ಟಾಚಾರ ಬದಿಗೊತ್ತಿ ವಿಮಾನ ನಿಲ್ದಾಣಕ್ಕೇ ಹೋಗಿ ಸ್ವಾಗತಿಸಿದ್ದಾರೆ. ನರೇಂದ್ರ ಮೋದಿ ಹಾಗೂ ಬೆಂಜಮಿನ್ ನೆತನ್ಯಾಹು ಅವರ ಭೇಟಿ ವೇಳೆ ಉಭಯ ರಾಷ್ಟ್ರಗಳ ನಡುವೆ ಒಪ್ಪಂದಗಳಾಗಿವೆ.
ಅಷ್ಟೇ ಏಕೆ ಮೋದಿ ಅವರು ಇಸ್ರೇಲಿಗೆ ಹೋದಾಗಲೂ ಬೆಂಜಮಿನ್ ಇಂಥಾದ್ದೊಂದು ಬೆಚ್ಚಗಿನ ಸ್ವಾಗತ ನೀಡಿದ್ದರು. ಅಷ್ಟೇ ಏಕೆ, ದಶಕಗಳ ನಂತರ ಇಸ್ರೇಲಿಗೆ ಹೋದ ಮೊದಲಿಗ ಎಂಬ ಖ್ಯಾತಿಯೂ ನರೇಂದ್ರ ಮೋದಿ ಅವರದ್ದಾಯಿತು.
ಅಷ್ಟಕ್ಕೂ ಭಾರತವೇಕೆ ಇಸ್ರೇಲಿಗೆ ಇಷ್ಟೊಂದು ಮಹತ್ವ ಕೊಡುತ್ತಿದೆ? ಪ್ರಧಾನಿ ನರೇಂದ್ರ ಮೋದಿ ಅವರೇಕೆ ಇಸ್ರೇಲ್ ಜತೆ ಉತ್ತಮ ಸಂಬಂಧ ವೃದ್ಧಿಸುತ್ತಿದ್ದಾರೆ? ದಶಕಗಳ ನಂತರ ಇಸ್ರೇಲಿಗೆ ಹೋಗಿ ಆ ದೇಶದೊಂದಿಗೆ ಒಪ್ಪಂದ ಮಾಡಿಕೊಂಡು ಬಂದಿದ್ದಾರೆ? ಇಸ್ರೇಲ್ ಜತೆಗಿನ ಸಂಬಂಧ ಹೇಗೆ ಭಾರತಕ್ಕೆ ಪ್ರಾಮುಖ್ಯ ಹಾಗೂ ಅವಶ್ಯಕ?
ಅದು 1999ರ ಕಾರ್ಗಿಲ್ ಯುದ್ಧ. ಹಿಂದಿನ ಯುದ್ಧಗಳಲ್ಲಿ ಸೋತು ಸುಣ್ಣವಾಗಿದ್ದ ಪಾಕಿಸ್ತಾನ ಈ ಬಾರಿ ಭಾರತದ ವಿರುದ್ಧ ಗೆಲ್ಲುವ ತವಕದಲ್ಲಿತ್ತು. ಭಾರತ ಆಪರೇಷನ್ ವಿಜಯ್ ಕೈಗೊಳ್ಳುವ ಮುನ್ನ ಪಾಕಿಸ್ತಾನ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಯುದ್ಧಾಸ್ತ್ರ ನೋಡಿ ಬೆಚ್ಚಿಬೀಳುವ ಹಾಗಾಗಿತ್ತು.
ಆ ವೇಳೆ ಭಾರತದ ನೆರವಿಗೆ ಬಂದಿದ್ದೇ ಇಸ್ರೇಲ್. ಅದಾಗಲೇ ಇಸ್ರೇಲಿಗೆ ಯುದ್ಧ ಎಂದರೆ ಕ್ರಿಕೆಟ್ ಪಂದ್ಯಾವಳಿಯಂತೆ ಆಗಿತ್ತು. ಆ ಕಾರಣದಿಂದ ಭಾರತಕ್ಕೆ ಅಪಾರ ಪ್ರಮಾಣದ ಮೋರ್ಟಾರ್ ಶೆಲ್ ಸೇರಿ ಹಲವು ಶಸ್ತ್ರಾಸ್ತ್ರ ನೀಡಿತು. ಅದರ ಪರಿಣಾಮವಾಗಿಯೇ ಭಾರತ ಯುದ್ಧದಲ್ಲಿ ಗೆಲ್ಲಲು ಸಾಧ್ಯವಾಯಿತು ಎಂಬ ಮಾತುಗಳು ಕೇಳಿಬಂದವು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಸ್ರೇಲ್ ಜತೆ ಉತ್ತಮ ಬಾಂಧವ್ಯ ಹೊಂದಿದ್ದಕ್ಕೆ ಸಾಕ್ಷಿ.
ಅಷ್ಟೇ ಅಲ್ಲ, ಇಸ್ರೇಲ್ ಭಾರತಕ್ಕೆ ಶಸ್ತ್ರಾಸ್ತ್ರದ ಸಹಾಯ ಮಾಡುತ್ತಿದೆ ಎಂದು ತಿಳಿದಾಗ ಅಮೆರಿಕ ಮಧ್ಯಸ್ಥಿಕೆ ವಹಿಸಲು, ಮೂಗು ತೂರಿಸಲು ಬಂದಿತು. ಕಡೇ ಪಕ್ಷ ತಡವಾಗಿಯಾದರೂ ಭಾರತಕ್ಕೆ ಶಸ್ತ್ರಾಸ್ತ್ರ ಎಂದು ಕೋರಿತ್ತು. ಆದರೂ ಇಸ್ರೇಲ್ ಸಕಾಲಕ್ಕೆ ಭಾರತಕ್ಕೆ ಯುದ್ಧಾಸ್ತ್ರ ನೀಡಿದ ಪರಿಣಾಮ ಭಾರತಕ್ಕೆ ಮುನ್ನಡೆ ಸಿಕ್ಕಿತು.
ಹೀಗೆ ಯುದ್ಧದಲ್ಲಿ ಇಸ್ರೇಲ್ ಸಹಾಯ ಮಾಡಿದ ಕಾರಣಕ್ಕಾಗಿಯೇ 2000ನೇ ಇಸವಿಯಲ್ಲಿ ಅಂದಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಮತ್ತು ಗೃಹಸಚಿವ ಲಾಲ್ ಕೃಷ್ಣ ಆಡ್ವಾಣಿ ಅವರನ್ನು ಇಸ್ರೇಲಿಗೆ ಕಳುಹಿಸಿದ್ದರು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ.
1999ರಲ್ಲಿ ಭಾರತದ ಪ್ರಧಾನಿ ವಾಜಪೇಯಿ ಅವರು ಗಳಿಸಿದ ಇಸ್ರೇಲಿನೊಂದಿಗಿನ ಸ್ನೇಹ, ವಿಶ್ವಾಸವನ್ನು ಉಳಿಸಲು ಹಾಗೂ ಅದನ್ನು ವೃದ್ಧಿಸಲು ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಪಾಕಿಸ್ತಾನ ಬಾಲ ಬಿಚ್ಚಿದರೆ ರಷ್ಯಾದಂತೆ, ಇಸ್ರೇಲ್ ಸಹ ಭಾರತದ ನೆರವಿಗೆ ಬರುವ ವಿಶ್ವಾಸ ಮೂಡಿದೆ ಎಂದರೆ ಅದಕ್ಕೆ ಮೋದಿ ಅವರ ರಾಜತಾಂತ್ರಿಕ ಕೌಶಲವೇ ಕಾರಣ. ವಾಜಪೇಯಿ ಅವರಿಗಿದ್ದ ದೂರದೃಷ್ಟಿ ಮೋದಿ ಅವರಿಗೂ ಇದೆ ಎಂಬುದು ಇದಕ್ಕಿಂತ ಉದಾಹರಣೆ ಬೇಕಿಲ್ಲ.
Leave A Reply