• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಐಸಿಸ್ ಸೇರಿದ್ದ ಫಿಎಫ್ ಐ ಕಾರ್ಯಕರ್ತನ ಹತ್ಯೆ

TNN Correspondent Posted On January 20, 2018
0


0
Shares
  • Share On Facebook
  • Tweet It

ಕಣ್ಣೂರು: ಮೂಲಭೂತವಾದಕ್ಕೆ ಮಾರು ಹೋಗಿ ಐಸಿಸ್ ಸೇರಿದ್ದ, ಪಿಎಫ್ ಐ ಕಾರ್ಯಕರ್ತನಾಗಿದ್ದ  ಕೇರಳದ ಯುವಕನ್ನನ್ನು ಸಿರಿಯಾದಲ್ಲಿ ಹತ್ಯೆ ಮಾಡಲಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

30 ವರ್ಷದ ಯುವಕ ಅಬ್ದುಲ್‌ ಮುನಾಫ್‌ ಉಗ್ರರ ಕ್ರೂರತನಕ್ಕೆ ಬಲಿಯಾದ ಯುವಕ. ಜನವರಿ 17ರಂದು ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಕಣ್ಣೂರಿನಲ್ಲಿರುವ ಆತನ ಕುಟುಂಬ ಸದಸ್ಯರಿಗೆ ಆ್ಯಪ್‌ ಮೂಲಕ ಸಂದೇಶ ತಲುಪಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಕೇರಳದ ವಲಿಪಟ್ಟಿನಮ್ ಮೂಲದ ಯುವಕನ ಕುಟುಂಬಕ್ಕೆ ಟೆಲಿಗ್ರಾಮ್ ಮೂಲಕ ಜ.17ರಂದು ಸಾವಿಗಿಡಾಗಿದ್ದಾನೆ ಎಂಬ ಸಂದೇಶ ಬಂದಿದೆ. 2017ರ ನವೆಂಬರ್ ನಲ್ಲಿ ಐಸಿಸ್ ಸೇರಿದ್ದ ಯುವಕ ಮುನಾಫ್ ಸಾವಿನ ಬಗ್ಗೆ ಆತನ ಗೆಳೆಯ, ಸಿರಿಯಾದಲ್ಲಿ ಐಸಿಸ್ ಸೇರಿರುವ ಖಯಾಮ್ ಮಾಹಿತಿ ನೀಡಿದ್ದಾನೆ ಎಂದು ಡೆಪ್ಯುಟಿ ಸುಪರಿಂಟೆಡ್ ಆಫ್ ಪೊಲೀಸ್  ಪಿಪಿ ಸದಾನಂದನ್ ತಿಳಿಸಿದ್ದಾರೆ.

ಮನಾಫ್ ಕೇರಳದ ಮೂಲದ ಫಿಎಫ್ಐ ಸದಸ್ಯನಾಗಿದ್ದ. ಐಸಿಸ್ ಸೇರುವ ಮುಂಚಿನ ಕೆಲವು ದಿನಗಳಲ್ಲಿ ದೆಹಲಿಯಲ್ಲಿ ಪಿಎಫ್ಐ ಕಚೇರಿಯ ಕಾರ್ಯದರ್ಶಿಯಾಗಿ ನಿರ್ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

2009ರಲ್ಲಿ ಸಿಪಿಐ(ಎಂ) ಕಾರ್ಯಕರ್ತನ ಕೊಲೆಯಲ್ಲೂ ಮನಾಫ್ ಭಾಗಿಯಾಗಿದ್ದ ಎನ್ನಲಾಗಿದೆ. ಸುಳ್ಳು ದಾಖಲೆಗಳನ್ನು ನೀಡಿ, ಪಾಸಪೋರ್ಟ್ ಸಿದ್ಧಪಡಿಸಿ ಸಿರಿಯಾಕೆ ಹೋಗಿದ್ದ. ಈತ ಹೋಗಿದ್ದ ಸಮಯದಲ್ಲೇ ಕೇರಳದಿಂದ ಸುಮಾರು 15 ಜನರು ಐಸಿಸ್ ಸೇರಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ ಸುಮಾರು 100 ಯುವಕರು ಧರ್ಮಕ್ಕಾಗಿ ಹೋರಾಡುತ್ತೇನೆ ಎಂದು ಸಿರಿಯಾ, ಇರಾಕ್ ಗೆ ಹೋಗಿದ್ದಾರೆ. ಇವರು ಮನೆ ಬಿಟ್ಟಿರುವ ಕುರಿತು ಅವರ ಕುಟುಂಬದವರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

0
Shares
  • Share On Facebook
  • Tweet It




Trending Now
ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
Tulunadu News March 3, 2026
ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
Tulunadu News March 2, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
  • Popular Posts

    • 1
      ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • 2
      ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • 3
      ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • 4
      ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

  • Privacy Policy
  • Contact
© Tulunadu Infomedia.

Press enter/return to begin your search