• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜಮ್ಮು-ಕಾಶ್ಮೀರಕ್ಕೆ ಒಳನುಸುಳಲು ಐಎಸ್ಐ ತರಬೇತಿ ಪಡೆದ 386 ಉಗ್ರರು ಹೂಡಿರುವ ತಂತ್ರ ಎಂಥಾದ್ದು?

TNN Correspondent Posted On January 30, 2018
0


0
Shares
  • Share On Facebook
  • Tweet It

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಎಂದಿಗೂ ಉಗ್ರರ ಉಪಟಳ ಜಾಸ್ತಿಯಿದ್ದು, ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಉಗ್ರರ ವಿರುದ್ಧ ಕಾರ್ಯಾಚಾರಣೆ ಕೈಗೊಂಡ ಬಳಿಕ ಬಾಲ ಸುಟ್ಟ ಕೋತಿಯಂತಾಗಿದ್ದ ಪಾಕಿಸ್ತಾನಿ ಉಗ್ರರು ಈಗ ಮತ್ತೊಂದು ಸಂಚು ರೂಪಿಸಿದ್ದಾರೆ.

ಪಾಕಿಸ್ತಾನಿ ಆಂತರಿಕ ಸೇವೆಗಳ ಗುಪ್ತಚರ ಇಲಾಖೆ (ಐಎಸ್ಐ) ಯಿಂದ ವಿಶೇಷ ತರಬೇತಿ ಪಡೆದಿರುವ ಸುಮಾರು 386 ಉಗ್ರರು ಜಮ್ಮು-ಕಾಶ್ಮೀರಕ್ಕೆ ಒಳನುಸುಳಲು ಸಂಚು ರೂಪಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದ್ದು, ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದ 13 ಸ್ಥಳಗಳಿಂದ ಭಾರತದೊಳಕ್ಕೆ ಅಕ್ರಮವಾಗಿ ನುಸುಳಲು ವಿಶೇಷ ಕಾರ್ಯಾಚರಣೆ ಪಡೆಯೊಂದು ಪಾಕಿಸ್ತಾನ ತಯಾರಿಸಿದ್ದು, ಅದರಲ್ಲಿ 386 ಉಗ್ರರು ಸೇರಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಕೇಲ್, ಸರ್ದಿ, ದುಧ್ ನಿಯಾಲ್, ಅತ್ಮುಕಂ, ಜುರಾ, ಲಿಪಾ, ಪಚ್ಚಿಬನ್, ಫಾರ್ವರ್ಡ್ ಕುತಾ, ಕೋತ್ಲಿ, ಕುರೈತ, ನಿಕೈಲ್, ಚಮನ್ ಕೋಟ್ ಮತ್ತು ಜಾಂಕೋಟೆ ಎಂಬ ಪ್ರದೇಶಗಳಿಂದ ಒಳನುಸುಳಲು ಸಂಚು ರೂಪಿಸಿದ್ದು, ಅದರಲ್ಲಿ ಉಗ್ರರ ಜತೆಗೆ ಪಾಕಿಸ್ತಾನಿ ಸೈನಿಕರೂ ಇದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿದ್ದಾಗ ಇಂಡಿಯಾ ಟುಡೇ ವರದಿ ಮಾಡಿದೆ.

ಇದಕ್ಕೆ ಪ್ರತಿಯಾಗಿ ಭಾರತವೂ ಶಸ್ತ್ರಸಜ್ಜಿತ ಹಾಗೂ ಹಲವು ತಂತ್ರಗಳಿಂದ ಸನ್ನದ್ಧವಾಗಿದ್ದು, ಉಗ್ರರು ಒಳನುಸುಳಲು ಉದ್ದೇಶಿಸಿರುವ ಪ್ರತಿ ಪ್ರದೇಶ ಗುರುತಿಸಿ, ಅಲ್ಲೆಲ್ಲ ವಿಶೇಷ ಪಡೆ ನಿಯೋಜಿಸಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ಭಾರತೀಯ ಸೈನಿಕರು ಕಾರ್ಯಾಚರಣೆ ಕೈಗೊಂಡು ಸುಮಾರು 213ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿದ ಹಿನ್ನೆಲೆಯಲ್ಲಿ ಜೈಷೆ ಮೊಹಮ್ಮದ್ ಸೇರಿ ಹಲವು ಉಗ್ರ ಸಂಘಟನೆಗಳ ಬೆಂಬಲ ಪಡೆದಿರುವ ಪಾಕಿಸ್ತಾನ, ತನ್ನ ಸೈನಿಕರು ಹಾಗೂ ಉಗ್ರರನ್ನು ಕಾಶ್ಮೀರದೊಳಕ್ಕೆ ಬಿಟ್ಟು ಅರಾಜಕತೆ ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದಾಗ್ಯೂ ಭಾರತವೂ ಪಾಕಿಸ್ತಾನದ ತಂತ್ರಕ್ಕೆ ಪ್ರತಿತಂತ್ರ ಹೆಣೆದಿರುವುದು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ.

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • 1
      ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್

  • Privacy Policy
  • Contact
© Tulunadu Infomedia.

Press enter/return to begin your search