ಹಿಂದೂಪರ ಇರುವ ಪಕ್ಷಗಳಿಗೆ ಮತ ಹಾಕಬೇಡಿ ಎಂದು ಕರೆ ಕೊಟ್ಟ ಚರ್ಚ್, ಇದರ ಉದ್ದೇಶವೇನು, ಯಾರ ಪರ ಈ ಚರ್ಚ್?
ಗುವಾಹಟಿ: ದೇಶದಲ್ಲಿ ಹಿಂದೂಗಳಿಗೆ ಈ ಚರ್ಚ್ ಗಳು ಬರೀ ಮತಾಂತರ ರೂಪದಲ್ಲಿ ಮಾತ್ರ ಅಪಾಯಕಾರಿ ಅಲ್ಲ, ಚುನಾವಣೆ ಮತಗಳನ್ನು ಹಾಕುವಾಗಲೂ ಅಪಾಯಕಾರಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ನಾಗಾಲೆಂಡ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಕ್ರಿಶ್ಚಿಯನ್ನರು ಸೇರಿ ಹಿಂದೂಯೇತರರು ಯಾರೂ ಹಿಂದೂಗಳ ಪರ ಇರುವ ಪಕ್ಷಗಳಿಗೆ ಮತ ಹಾಕಬೇಡಿ ಎಂದು ನಾಗಾಲೆಂಡ್ ಬ್ಯಾಪಿಸ್ಟ್ ಚರ್ಚ್ ಕೌನ್ಸಿಲ್ ಕರೆ ನೀಡಿದೆ.
ಜನರು ತ್ರಿಶೂಲ ಮತ್ತು ಕ್ರಿಸ್ತನ ನಡುವಿನ ವ್ಯತ್ಯಾಸ ಅರಿಯಬೇಕು. ಯಾರು ಅಭಿವೃದ್ಧಿಗಾಗಿ ಹಣ ನೀಡುತ್ತಾರೋ ಅವರಿಗೆ ಮತ ನೀಡಬೇಕು. ಹಿಂದೂಯೇತರಿಗೆ ಬೆಂಬಲ ನೀಡುವವರಿಗೆ ಮತ ಹಾಕಬೇಕು ಎಂದು ನೂತನ ಪ್ರಚಾರ ಆರಂಭಿಸಿದೆ.
ಭಾರತ 2015-17ರ ಅವಧಿಯಲ್ಲಿ ಅತಿ ಕೆಟ್ಟ ಘಟನೆಗಳಿಗೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಬಿಜೆಪಿ, ಆರೆಸ್ಸೆಸ್ ತಮ್ಮ ಸಿದ್ಧಾಂತ ಬಿಟ್ಟುಕೊಡುವುದಿಲ್ಲ. ಇದರಿಂದ ನಮ್ಮ ಸಮುದಾಯಗಳಿಗೆ ತೊಂದರೆಯಾಗುತ್ತದೆ. ಚುನಾವಣೆಯಲ್ಲಿ ಮತ ನೀಡುವಾಗ ಇಂತಹ ಅಂಶಗಳನ್ನು ವಿಮರ್ಶಿಸಿ ಎಂದು ತಿಳಿಸಿದೆ.
ವಿದೇಶದ ಹಣ ತಿಂದು, ಭಾರತದ ಹಿಂದೂಗಳಿಗೆ ಹಲವು ಆಮಿಷ ಒಡ್ಡಿ ಮತಾಂತರಗೊಳಿಸುತ್ತಿದ್ದ ಚರ್ಚ್ ಗಳು ಈಗ ಹಣ, ಧರ್ಮಕ್ಕಾಗಿ ರಾಜಕೀಯ ಪಕ್ಷಗಳ ಜತೆಯೂ ಒಪ್ಪಂದ ಮಾಡಿಕೊಂಡಿವೆಯಾ ಎಂಬ ಅನುಮಾನ ಹುಟ್ಟುತ್ತಿದ್ದು, ಹಿಂದೂಗಳು ಎಚ್ಚರದಿಂದ ಇರುವುದು ಒಳಿತು.
Leave A Reply