ಭಾರತ ಸಹಕಾರಕ್ಕೆ ಮಾದರಿ ಉದಾಹರಣೆ ಎಂದ ಇರಾನ್ ಅಧ್ಯಕ್ಷ ಹಸನ್ ರೌಹಾನಿ
ಹೈದರಾಬಾದ್: ವಿಭಿನ್ನ ಧಾರ್ಮಿಕ ಮತ್ತು ಜನಾಂಗೀಯ ಜನರ ಮಧ್ಯೆ ಪರಸ್ಪರ ಸಹಕಾರ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿರುವ ಭಾರತವನ್ನು ನೋಡಿ ಷಿಯಾ ಮತ್ತು ಸುನ್ನಿಗಳು ಕಲಿಯಬೇಕು ಎಂದು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಹೇಳಿದ್ದಾರೆ. ಇರಾನ್ ನಲ್ಲಿ ಉಂಟಾಗಿರುವ ಜನಾಂಗೀಯ ದ್ವೇಷಕ್ಕೆ ಭಾರತ ಸೇರಿ ಎಲ್ಲ ರಾಷ್ಟ್ರಗಳು ಮದ್ದು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಮೂರು ದಿನಗಳ ಭಾರತ ಭೇಟಿಗೆ ಬಂದಿರುವ ಹಸನ್ ರೌಹಾನಿ ಹೈದರಾಬಾದ್ ನಲ್ಲಿ ನಡೆದ ಇಸ್ಲಾಂ ಮುಖಂಡರ ಮತ್ತು ಶಾಲೇ ಕಾಲೇಜು ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿ, ಷಿಯಾ ಸುನ್ನಿಗಳು ಜಗಳವನ್ನು ಬಿಟ್ಟು ನಾನಾ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಬೇಕು. ಭಾರತ ಸಹಕಾರ, ಸಹಬಾಳ್ವೆಯ ಪುಣ್ಯತಾಣವಿದಂತೆ. ಇದು ಹಲವು ಶತಮಾನಗಳಿಂದ ಕಾಪಾಡಿಕೊಂಡು ಬಂದಿರುವುದು ಭಾರತದ ಹೆಮ್ಮೆ ಎಂದು ಹೇಳಿದರು.
ಷಿಯಾ, ಸುನ್ನಿ, ಸಿಖ್ ಮತ್ತೀತರ ಧರ್ಮದವರು ಭಾರತದಲ್ಲಿ ಭಾವೈಕ್ಯದಿಂದ ಬಾಳುತ್ತಿದ್ದಾರೆ. ಶಾಂತಿ, ಸೌಹಾರ್ದತೆಗೆ ಭಾರತ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ. ಭಾರತ ಮತ್ತು ಇರಾನ್ ಐತಿಹಾಸಿಕ ಸಾಂಸ್ಕೃತಿಕ ಸಂಬಂಧವನ್ನು ಹೊಂದಿದೆ.
Leave A Reply