ಸಿಎಂ ಸಿದ್ದರಾಮಯ್ಯ ಮಂಡಿಸಿದ್ದು ರಾಜ್ಯ ಬಜೆಟ್ ಅಲ್ಲ, ಅಲ್ಪಸಂಖ್ಯಾತರ ಬಜೆಟ್!
ಬೆಂಗಳೂರು: ಸಮಾಜವಾದ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುತ್ತಲೇ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು, ಸಿಎಂ ಪದವಿಗೇರುತ್ತಲೇ ಅಹಿಂದ ಪರ ವಾಲಿದರು, ಹಿಂದೂಗಳ ಹತ್ಯೆಯಾದರೂ ಸುಮ್ಮನಾದರು, ಹಿಂದೂಗಳ ಸಂಪ್ರದಾಯಕ್ಕೆ ಮೌಢ್ಯದ ಲೇಪನ ಹಚ್ಚಿದರು, ಮಠಗಳನ್ನು ಸರ್ಕಾರದ ಸುಪರ್ದಿಗೆ ಒಯ್ಯಲು ಯತ್ನಿಸಿದರು.
ಇದರ ಜತೆಗೆ ಅಲ್ಪಸಂಖ್ಯಾತರಿಗೆ ಹೆಚ್ಚಿನ ಒಲವು ತೋರಿಸಿದರು. ಮುಸ್ಲಿಮರಿಗಾಗಿಯೇ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದು ಟೀಕೆಗೊಳಗಾದರು. ಟಿಪ್ಪು ಜಯಂತಿ ಆಚರಿಸಿ ಮುಸ್ಲಿಮರ ಓಲೈಕೆಗೆ ನಿಂತರು. ಹಲವು ಗಲಾಟೆಗಳಲ್ಲಿ ದಾಖಲಾದ ಪ್ರಕರಣ ಹಿಂಪಡೆಯುವಾಗ, ಹಿಂದೂಗಳನ್ನು ಮರೆತು, ಬರೀ “ಮುಗ್ಧ ಅಲ್ಪಸಂಖ್ಯಾತರ” ವಿರುದ್ಧದ ಪ್ರಕರಣ ಹಿಂಪಡೆಯಲು ಹೊರಟು ಟೀಕೆಗೊಳಗಾದರು.
ಇಂತಿಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಬಜೆಟ್ ನಲ್ಲಿಯೂ ಅಲ್ಪಸಂಖ್ಯಾತರ ಪರವಾಗಿಯೇ ನಿಂತಿದ್ದಾರೆ. ಖಂಡಿತವಾಗಿಯೂ ಅಲ್ಪಸಂಖ್ಯಾತರಿಗೆ ಯೋಜನೆ ನೀಡಬೇಕು, ಆದರೆ ಮುಖ್ಯಮಂತ್ರಿಯವರು ಅಲ್ಪಸಂಖ್ಯಾತರಿಗಷ್ಟೇ ಹಣ ಮೀಸಲಿಟ್ಟದ್ದಾರೆ ಎನ್ನುವ ಮಟ್ಟಿಗೆ ಬಜೆಟ್ ನ್ನು ಅಲ್ಪಸಂಖ್ಯಾತಮಯಗೊಳಿಸಿದ್ದಾರೆ.
ನಾನು ಹಿಂದೂ ಎನ್ನುವ ಸಿಎಂ ಬಜೆಟ್ಟಿನಲ್ಲಿ ಎಲ್ಲಿಯೂ ಹಿಂದೂಗಳಿಗೆ ಇಷ್ಟು ಅನುದಾನ ಅಂತ ಕೊಟ್ಟಿಲ್ಲ. ಬಜೆಟ್ ಕಾಪಿ ಹುಡುಕಾಡಿದರೂ ಸಿಗುವುದಿಲ್ಲ. ಹಾಗಾದರೆ ಬರೀ ಅಲ್ಪಸಂಖ್ಯಾತರಿಗಷ್ಟೇ ಮುಖ್ಯಮಂತ್ರಿಯವರು ಜಾರಿಗೆ ತಂದ ಯೋಜನೆ ಯಾವುದು, ಅವರಿಗಷ್ಟೇ ಎಷ್ಟು ಹಣ ನೀಡಿದ್ದಾರೆ ಎಂಬುದನ್ನು ನೀವೇ ನೋಡಿ ಹಾಗೂ ಸಿದ್ದರಾಮಯ್ಯನವರ ಹಿಂದೂ ವಿರೋಧಿ ಮನಸ್ಥಿತಿಯನ್ನು ಅರಿಯಿರಿ.
- ಬೆಂಗಳೂರಿನ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಅಲ್ಪ ಸಂಖ್ಯಾತರ ಅಧ್ಯಯನ ಪೀಠ ಸ್ಥಾಪನೆ
- ಅಲ್ಪಸಂಖ್ಯಾತ ಮಹಿಳೆಯರಿಗೆ ಸ್ಟಾರ್ಟ್ ಅಪ್ ಕೈಗೊಳ್ಳಲು ಬೇಕಾದ ಸಾಲಕ್ಕೆ 15 ಕೋಟಿ ರೂ. ಮಂಜೂರು.
- ಕರ್ನಾಟಕ ವಕ್ಫ್ ಪರಿಷತ್ತಿನ ಕಾರ್ಪಸ್ ಫಂಡಿಗೆ 20 ಕೋಟಿ ರೂ. ಅನುದಾನ.
- ಅಲ್ಪಸಂಖ್ಯಾತರ ವಸತಿ ನಿಲಯ, ಶಾಲೆ, ಕಾಲೇಜುಗಳಲ್ಲಿ ದುರ್ಘಟನೆಗೊಳಗಾದ ಅಲ್ಪಸಂಖ್ಯಾತರಿಗೆ ಪರಿಹಾರ.
- ಮದರಸಾಗಳಿಗೆ 15 ಕೋಟಿ ರೂಪಾಯಿ ಸಹಾಯಧನ ಮಂಜೂರು.
- ಅಲ್ಪಸಂಖ್ಯಾತರಿಗೆ ಸಾಲ ನೀಡಲು ಹೊಸ ಯೋಜನೆ ಘೋಷಣೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ವೃತ್ತಿ ಕೈಗೊಳ್ಳಲು ಸಾಲ ಯೋಜನೆಗಾಗಿ 30 ಕೋಟಿ ರೂ. ಮಂಜೂರು.
- ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ 200 ಕೋಟಿ ರೂಪಾಯಿ ಮುಂಗಡಪತ್ರದಲ್ಲಿ ಮಂಜೂರು.
ಹೀಗೆ ಸಾಲು ಸಾಲಾಗಿ ಮುಖ್ಯಮಂತ್ರಿಯವರು ಅಲ್ಪಸಂಖ್ಯಾತರಿಗೆ ಬಜೆಟ್ಟಿನಲ್ಲಿ ಯೋಜನೆ, ಹಣ ನೀಡಿದ್ದಾರೆ. ಆದರೆ ಹಿಂದೂ ಎನ್ನುವ ಸಿಎಂ ಸಾಹೇಬ್ರು ಹಿಂದೂಗಳಿಗಾಗಿ ಏನು ಮಾಡಿದ್ದಾರೆ? ಸಿದ್ದರಾಮಯ್ಯನವರು ಇದಕ್ಕೆ ಉತ್ತರಿಸಬೇಕು.
Leave A Reply