ಸಿದ್ದರಾಮಯ್ಯನವರೇ, ನಿಮ್ಮದೇ ಶಾಸಕನ ಪುತ್ರ ಹಲ್ಲೆ ಮಾಡಿ, ಎಲ್ಲಿ ಅಡಗಿದ್ದಾನೆಂಬುದು ಗೊತ್ತಿಲ್ಲವೇ?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತೆತ್ತಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ ಎನ್ನುತ್ತಾರೆ. ಉತ್ತರ ಪ್ರದೇಶದತ್ತ ಬೆರಳು ಮಾಡಿ ತೋರಿಸುತ್ತಾರೆ. ಆದರೆ ಇದುವರೆಗೂ ಹಿಂದೂಗಳ ಮಾರಣಹೋಮವಾದರೂ ಒಬ್ಬರನ್ನೂ ಬಂಧಿಸಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಶಾಸಕ ಎನ್.ಎನ್.ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ವಿದ್ವತ್ ಎಂಬುವವರ ಮೇಲೆ ಮಾಡಿದ ಹಲ್ಲೆ ಪ್ರಕರಣ ರಾಜ್ಯವನ್ನು ಬೆಚ್ಚಿಬೀಳಿಸಿದೆ.
ಇಷ್ಟಾದರೂ, ಕಾಂಗ್ರೆಸ್ ಶಾಸಕರೊಬ್ಬರ ಪುತ್ರ ಯುಬಿ ಸಿಟಿಯಲ್ಲಿ ವ್ಯಕ್ತಿಯ ಮೇಲೆ ಮಾಡಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆಯೇ ಹೊರತು, ಕ್ರಮ ಕೈಗೊಂಡಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾರಿಸ್ ನ ಐವರು ಸಹಚರರನ್ನು ಬಂಧಿಸಲಾಗಿದೆ. ಆದರೆ ಘಟನೆ ನಡೆದು 24 ಗಂಟೆ ಮೇಲಾದರೂ ಇನ್ನೂ ಶಾಸಕರ ಪುತ್ರನನ್ನು ಬಂಧಿಸಿಲ್ಲ ಎಂಬುದೇ ಹಲವು ಅನುಮಾನ ಮೂಡುವಂತೆ ಮಾಡಿದೆ.
ಹೌದು, ಎಲ್ಲರಿಗೂ ಮಾದರಿಯಾಗಬೇಕಿದ್ದ ಶಾಸಕರ ಪುತ್ರನೇ ಬೇರೊಬ್ಬರ ಮೇಲೆ ಹಲ್ಲೆ ಮಾಡಿದ್ದು ಕಾಂಗ್ರೆಸ್ಸಿಗೆ ತೀರಾ ಮುಜುಗರ ತಂದಿದೆ. ಕ್ರಮದ ನಾಟಕವಾಡುತ್ತಿದೆ. ಇಲ್ಲದಿದ್ದರೆ, ಶಾಸಕರ ಪುತ್ರ ಮೊಹಮ್ಮದ್ ಹ್ಯಾರಿಸ್ ಎಲ್ಲಿದ್ದಾರೆ ಎಂಬುದು ಗೊತ್ತಾಗುತ್ತಿರಲಿಲ್ಲವೇ? ಅವರ ತಂದೆಯನ್ನು ಕೇಳಿದರೂ ಸಾಕಾಗುತ್ತಿರಲಿಲ್ಲವೇ?
ಹಾಗಾದರೆ ಸಿಎಂ ಸಾಹೇಬ್ರು ಏನು ಮಾಡುತ್ತಿದ್ದಾರೆ? ಯಾರನ್ನು ರಕ್ಷಿಸಲು ಹೊರಟಿದ್ದಾರೆ? ಘಟನೆ ನಡೆದು 24 ಗಂಟೆ ಮೇಲಾದರೂ ಒಬ್ಬ ಆರೋಪಿಯನ್ನು ಹಿಡಿಯಲು ಆಗುತ್ತಿಲ್ಲವೆಂದರೆ ಏನರ್ಥ? ಸಾಮಾನ್ಯ ಜನರ ಜೀವಕ್ಕೆ ನಿಮ್ಮ ಪ್ರಕಾರ ಲೆಕ್ಕವೇ ಇಲ್ಲವೇ? ಮೊದಲು ಮೊಹಮ್ಮದ್ ಹ್ಯಾರಿಸ್ ತಂದೆಯವರನ್ನು ಕರೆಸಿ ಚರ್ಚಿಸಿ, ನಿಮ್ಮ ಮಗನನ್ನು ಕಾನೂನಿಗೆ ವಹಿಸಿ ಎಂದು ಒತ್ತಾಯ ಮಾಡಿ. ಆಗ ನಿಮ್ಮ ಮೇಲೆ ರಾಜ್ಯದ ಜನರಿಗೆ ನಂಬಿಕೆ ಬರುತ್ತದೆ. ಬರೀ ಕ್ರಮ ಕೈಗೊಳ್ಳುತ್ತೇವೆ ಎನ್ನುವುದು ಮಂತ್ರಕ್ಕೆ ಮಾವಿನ ಕಾಯಿ ಉದುರಿಸುವ ಪ್ರಯತ್ನವಷ್ಟೇ!
Leave A Reply