ನಮ್ಮ ರಾಜ್ಯಕ್ಕೂ ಯೋಗಿ ತರಹದವರು ಬರಬೇಕು ಎಂದು ಅನಿಸುವುದು ಇದೇ ಕಾರಣಕ್ಕೆ!!
ಒಂದು ಕಡೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಚ್ಚ ಭಾರತ್ ಮೂಲಕ ದೇಶದ ಮೂಲೆ ಮೂಲೆಯಲ್ಲಿಯೂ ಅಡಗಿರುವ ವಿವಿಧ ರೀತಿಯ ಕಸವನ್ನು ಸ್ವಚ್ಚಗೊಳಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಸ್ವಚ್ಚ ಉತ್ತರ ಪ್ರದೇಶದ ತಮ್ಮ ಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದಾರೆ. ಅದು ಪೊರಕೆ ಹಿಡಿದ್ದಲ್ಲ. ಗನ್ ಹಿಡಿದು.
ಹೌದು, ಕ್ರಿಮಿನಲ್ ಗಳು ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಇದ್ದಾರೆ. ಕೆಲವು ರಾಜ್ಯಗಳಲ್ಲಿ ಅವರ ಪ್ರಮಾಣ ಸ್ಪಲ್ಪ ಹೆಚ್ಚಿರಬಹುದು.
ಕೆಲವು ರಾಜ್ಯಗಳಲ್ಲಿ ಕಡಿಮೆ ಇರಬಹುದು. ಆದರೆ ಒಂದು ಕಾಲದಲ್ಲಿ ಕ್ರಿಮಿನಲ್ ಗಳು ಎಂದರೆ ಅದಕ್ಕೆ ಪಯರ್ಾಯವಾಗಿ ಉತ್ತರ ಪ್ರದೇಶ, ಬಿಹಾರ ಎನ್ನುವ ಹೆಸರನ್ನು ಹೇಳಲಾಗುತ್ತಿತ್ತು. ಉತ್ತರ ಪ್ರದೇಶ, ಬಿಹಾರದಲ್ಲಿ ಕ್ರಿಮಿನಲ್ ಗಳ ಅಟ್ಟಹಾಸ ಎಷ್ಟರ ಮಟ್ಟಿಗೆ ಇತ್ತು ಎಂದರೆ ಅದರ ಮೇಲೆ ಬಾಲಿವುಡ್ ಲೆವೆಲ್ಲಿನಲ್ಲಿ ಹಾಡುಗಳೇ ರಚನೆಯಾಗಿವೆ. ಅನೇಕ ಸಿನೆಮಾಗಳಲ್ಲಿ ಯುಪಿ, ಬಿಹಾರದ ರೌಡಿಸಂನನ್ನು ವೈಭವಿಕರಿಸಲಾಗಿದೆ. ಬಿಹಾರದ ಬಗ್ಗೆ ಅಲ್ಲಿ ಲಾಲೂ ಪ್ರಸಾದ್ ಯಾದವ್ ಸರಕಾರ ಬದಲಾದ ನಂತರ ಎಷ್ಟರಮಟ್ಟಿಗೆ ರೌಡಿಗಳ ಅಟ್ಟಹಾಸವನ್ನು ಕೊನೆಗಾಣಿಸಲಾಗಿದೆಯೋ ಗೊತ್ತಿಲ್ಲ, ಆದರೆ ಉತ್ತರಪ್ರದೇಶ ಮಾತ್ರ ಇನ್ನು ಕೆಲವು ದಿನಗಳ ಒಳಗೆ ಅಕ್ಷರಶ: ಸ್ವಚ್ಚ ಉತ್ತರ ಪ್ರದೇಶ ಆಗಿ ಪರಿವರ್ತನೆಗೊಳ್ಳಲಿದೆ. ಕಾವಿ ಧರಿಸಿ ಶಾಂತಿ ಬೋಧಿಸುವ ಸಂತರು ಮನಸ್ಸು ಮಾಡಿದರೆ ಗನ್ ಹಿಡಿದು ಊರಿಗೆ ಶಾಂತಿ ತರಬಲ್ಲರು ಎಂದು ಯೋಗಿ ಸಾಬೀತುಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಒಂದು ಕಾಲದಲ್ಲಿ ಪೊಲೀಸ್ ಇಲಾಖೆಗೆ ಗೌರವ ಎನ್ನುವುದೇ ಮರೀಚಿಕೆಯಾಗಿತ್ತು. ಗೂಂಡಾರಾಜ್ಯ ಎನ್ನುವ ಹಣೆಪಟ್ಟಿ ಹೊತ್ತ ರಾಜ್ಯದಲ್ಲಿ ದೇಶಿ ನಿರ್ಮಿತ ಗನ್ ಗಳು ಗೂಡಂಗಡಿಯಲ್ಲಿ ಚಾಕೋಲೇಟ್ ಸಿಗುವಷ್ಟೇ ಸುಲಭವಾಗಿ ಸಿಗುತ್ತಿದ್ದವು.
ರಾಜಕೀಯದಲ್ಲಿ ಇತ್ತು ಕ್ರಿಮಿನಲ್ ಗಳ ಹವಾ…
ಉತ್ತರಪ್ರದೇಶದಲ್ಲಿ ಹಿಂದೆ ಹೆಚ್ಚು ಅಪರಾಧ ಮಾಡಿದವನನ್ನು ಆಯ್ಕೆ ಮಾಡಿ ಶಾಸಕರನ್ನಾಗಿ ಮಾಡಲಾಗುತ್ತಿತ್ತು. ಇಂತಿಷ್ಟು ಕ್ರೈಮ್ ಮಾಡಿದವನಿಗೆ ಸಿಂಗಲ್ ಸ್ಟಾರ್, ಡಬ್ಬಲ್ ಸ್ಟಾರ್ ಎನ್ನುವ ಇಮೇಜ್ ಮೇಲೆ ಆತನ ಪ್ರಭಾವ ರಾಜ್ಯ ಸರಕಾರದಲ್ಲಿ ಇರುತ್ತಿತ್ತು. ರಾಜ್ಯ ಸರಕಾರದಲ್ಲಿ ಅಪರಾಧಿಕ ಹಿನ್ನೆಲೆ ಇಲ್ಲದ ವ್ಯಕ್ತಿಗಳನ್ನು ಹುಡುಕುವುದು ಎಂದರೆ ಹಗಲಿನ ಹೊತ್ತಿನಲ್ಲಿ ನಕ್ಷತ್ರಗಳನ್ನು ಹುಡುಕುವುದಷ್ಟೇ ಕಷ್ಟವಾಗುತ್ತಿತ್ತು. ಹಾಗಂತ ಅಧಿಕಾರಕ್ಕೆ ಬರಲು ಚುನಾವಣೆ ಎದುರಿಸಲು ನಿಲ್ಲುತ್ತಿದ್ದ ಪ್ರತಿ ಪಕ್ಷ ಕೂಡ ನಾವು ಅಧಿಕಾರಕ್ಕೆ ಬಂದರೆ ಗೂಂಡಾಗಳ ಅಟ್ಟಹಾಸವನ್ನು ಕೊನೆಗೊಳಿಸುತ್ತೇವೆ ಎಂದೇ ಹೇಳುತ್ತಿತ್ತು. ಆದರೆ ಅಧಿಕಾರಕ್ಕೆ ಬಂದ ಕೂಡಲೇ ಹೆಚ್ಚು ಚಾರ್ಜ್ ಶೀಟ್ ಹೊತ್ತವರನ್ನೇ ಸಚಿವರನ್ನಾಗಿಸುತ್ತಿತ್ತು. ಯಾವುದೇ ಸರಕಾರ ಬರಲಿ ಇಲ್ಲಿಯ ತನಕ ಗೂಂಡಾಗಳಿಗೆ ಲಕ್ನೋ ವಿಧಾನಸಭೆ ಎನ್ನುವುದು ಮಾವನ ಮನೆಯಂತೆ ಆಗಿತ್ತು. ಬರುವುದು ಬೇಕಾದ ಕೆಲಸ ಮಾಡಿಸಿ ಹೋಗುವುದು ಸಾಮಾನ್ಯವಾಗಿತ್ತು. ಆದರೆ ಪ್ರಪ್ರಥಮ ಬಾರಿಗೆ ಯೋಗಿ ಆದಿತ್ಯನಾಥ ಹೊಸ ಮಂತ್ರ ಜಪಿಸುತ್ತಾ ಕುಳಿತುಕೊಂಡಿದ್ದಾರೆ. ಸಂತನಿಗೆ ಏನು ಆಗುತ್ತೆ ಎಂದವರಿಗೆ ಉತ್ತರ ಕೊಡುತ್ತಿದ್ದಾರೆ. ಅವರು ಈ ಪ್ರಮಾಣದಲ್ಲಿ ಇಡೀ ರಾಜ್ಯದಲ್ಲಿ ಕ್ರಿಮಿನಲ್ ಗಳನ್ನು ಕೊಲ್ಲುತ್ತೇವೆ ಎಂದು ಹೇಳಿದ್ದಾರೋ ಇಲ್ಲವೋ ಆದರೆ ಅವರು ಎಬ್ಬಿಸಿರುವ ಸುನಾಮಿಯಲ್ಲಿ ಗೂಂಡಾಗಳು ತರಗೆಲೆಗಳಂತೆ ಉದುರಿ ಹೋಗುತ್ತಿದ್ದಾರೆ. ಎಲ್ಲಿಯ ತನಕ ಅಂದರೆ ಎನ್ ಕೌಂಟರ್ ಪುಟ ಎಂದು ಅಲ್ಲಿನ ಪತ್ರಿಕೆಗಳು ಪ್ರತ್ಯೇಕ ಪೇಜ್ ಅದಕ್ಕಾಗಿಯೇ ತೆಗೆದಿಡಬೇಕೇನೋ ಎನಿಸುವ ಮಟ್ಟಿಗೆ ಅಲ್ಲಿ ನಿತ್ಯ ಎನ್ ಕೌಂಟರ್ ಗಳು ನಡೆಯುತ್ತಿವೆ. ಪರಿಸ್ಥಿತಿ ಹೇಗಿದೆ ಎಂದರೆ ಎನ್ ಕೌಂಟರ್ ಆಗುವ ವೇಗಕ್ಕೆ ಹೆದರಿ 150 ಕ್ಕೂ ಹೆಚ್ಚು ಪ್ರಖಾಂಡ ಕ್ರಿಮಿನಲ್ ಗಳು ಪೊಲೀಸರ ಕೈಕಾಲು ಹಿಡಿದು ನಮ್ಮನ್ನು ಜೈಲೊಳಗೆ ಬೇಕಾದರೆ ಹಾಕಿ, ರುಬ್ಬಿ, ಹೊರಗೆ ಇರುವುದಕ್ಕೆ ಧೈರ್ಯ ಸಾಕಾಗುವುದಿಲ್ಲ ಎಂದು ಗೋಗರೆದಿದ್ದಾರೆ. ಕೆಲವು ಕ್ರಿಮಿನಲ್ ಗಳು ಹಿಂದಿನ ಸರಕಾರಗಳು ಇದ್ದಾಗ ಜಾಮೀನು ತೆಗೆದುಕೊಂಡು ಹೊರಗೆ ಆರಾಮವಾಗಿ ಸುತ್ತಾಡುತ್ತಿದ್ದವರು ಯೋಗಿ ಸರಕಾರದ ಎನ್ ಕೌಂಟರ್ ಯೋಜನೆ ನೋಡಿ ತಮ್ಮ ಬೇಲ್ ಕ್ಯಾನ್ಸಲ್ ಮಾಡಿ ಜೈಲೊಳಗೆ ಬಂದು ಬದುಕಿದೆಯೋ ಬಡಜೀವವೇ ಎಂದು ಸಮಾಧಾನಪಡುತ್ತಿದ್ದಾರೆ. ಒಂದು ಮೂಲೆಯಿಂದ ಪ್ರಾರಂಭವಾದ ಕ್ಲೀನ್ ಯುಪಿ ಇನ್ನೊಂದು ಮೂಲೆ ತಲುಪುವ ಒಳಗೆ ಒಂದಿಷ್ಟು ಬದಲಾವಣೆ ನಡೆದು ಭವಿಷ್ಯದಲ್ಲಿ ಕೆಟ್ಟ ಇಮೇಜ್ ಟ್ಯಾಗ್ ಹೋಗಿ ದೇಶದಲ್ಲಿ ಗೂಂಡಾರಾಜ್ಯ ಎನ್ನುವ ಬ್ರಾಂಡ್ ಉತ್ತರ ಪ್ರದೇಶದಿಂದ ಬಿಟ್ಟು ಹೋಗಬಹುದು.
(ಹಲ್ಲೆಗೆ ಒಳಗಾಗಿರುವ ವಿದ್ವತ್)
ನಮಗೂ ಯುಪಿ ಮಾದರಿ ಬೇಕು…
ಇದೆಲ್ಲಾ ಹೇಗೆ ಸಾಧ್ಯವಾಗುತ್ತದೆ ಎಂದರೆ ಒಬ್ಬ ಮುಖ್ಯಮಂತ್ರಿಗೆ ಇರುವ ಇಚ್ಚಾಶಕ್ತಿ. ಆತ ಮನಸ್ಸು ಮಾಡಿದರೆ ರಾಜ್ಯವನ್ನು ಎಲ್ಲಿಂದ ಎಲ್ಲಿಗೆ ಕೂಡ ತೆಗೆದುಕೊಂಡು ಹೋಗಬಹುದು ಎಂದು ಸಾಬೀತಾಗಿದೆ. ನಮ್ಮ ರಾಜ್ಯದಲ್ಲಿ ಶಾಸಕನ ಮಗ ಒಬ್ಬ ಪ್ರಭಾವಿ ಉದ್ಯಮಿಯ ಮಗನಿಗೆ ಹೊಡೆದರೆ ಬಂಧನ ಯಾವಾಗ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ತಪ್ಪು ಮಾಡಿದವರು ಯಾರೇ ಮಾಡಲಿ ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸರಕಾರದ ಹೊರಗಿನ ಒಳಗಿನ ಪ್ರತಿಯೊಬ್ಬರು ಹೇಳುತ್ತಿದ್ದಾರೆ. ಆದರೆ ಏನೂ ಆಗುತ್ತಿಲ್ಲ. ಒಂದು ವೇಳೆ ಯೋಗಿ ಸರಕಾರ ಇದ್ದಿದ್ರೆ ಹೊಡೆದ ವ್ಯಕ್ತಿ ಯಾರೇ ಆಗಿರಲಿ ಬಾಲ ಮುದುಡಿ ಒಳಗೆ ಇರುತ್ತಿದ್ದ, ಅದು ಯುಪಿಗೂ, ಕರ್ನಾಟಕಕ್ಕೂ ಸದ್ಯ ಇರುವ ವ್ಯತ್ಯಾಸ!
(ಆರೋಪಿ ಮೊಹಮ್ಮದ್ ಹ್ಯಾರಿಸ್)
Leave A Reply