• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಂಸದ, ಶಾಸಕನಿಗೆ ಪೆನ್ಷನ್ ಅವನ ಪಕ್ಷವೇ ಕೊಡಲಿ, ಫೋನಿಗೆ 399/- ಪ್ಯಾಕ್ ಹಾಕಿಸಲಿ!!

Hanumantha Kamath Posted On February 21, 2018


  • Share On Facebook
  • Tweet It

ನಾನೇ ಕೆಲಸಕ್ಕೆ ಬರುತ್ತೇನೆ, ನೀವು ನನಗೆ ಕೆಲಸ ಕೊಡಬೇಕು. ಐದು ವರ್ಷ ದುಡಿಯುತ್ತೇನೆ. ನಿಮಗೆ ಒಳ್ಳೆಯದಾಗಿ ಕೆಲಸ ಮಾಡಿಕೊಡುತ್ತೀದ್ದೇನೆ ಎಂದು ಅನಿಸಿದರೆ ಇನ್ನೊಂದು ಅವಧಿಗೆ ಬೇಕಾದರೆ ವಿಸ್ತರಿಸಿ. ನಿಮ್ಮ ಇಷ್ಟ. ಹತ್ತು ವರ್ಷ ಆದ ನಂತರವೂ ನಿಮಗೆ ಬೇರೆ ಯಾರೂ ಕೆಲಸದವನು ಸಿಗದಿದ್ದಲ್ಲಿ ನನ್ನನ್ನೇ ಮುಂದುವರೆಸಿಕೊಂಡು ಹೋಗಬಹುದು. ಸಂಬಳ ತಿಂಗಳಿಗೆ ಐವತ್ತು ಸಾವಿರ ಕೊಡಬೇಕು. ಒಂದು ಕಚೇರಿ, ನನಗೆ ಸಹಾಯಕರು ಇರಬೇಕು. ಸಹಾಯಕರ ಸಂಬಳ ನೀವೆ ಕೊಡಬೇಕು. ಒಂದು ವೇಳೆ ಐದು ವರ್ಷ ಬಳಿಕ ನಿಮಗೆ ನಾನು ಬೇಡವಾದ್ದಲ್ಲಿ ಕೆಲಸದಿಂದ ತೆಗೆಯಿರಿ. ಆದರೆ ಪ್ರತಿ ತಿಂಗಳು ಪೆನ್ಷನ್ ಮಾತ್ರ ತಪ್ಪದೆ ಕೊಡಬೇಕು ಎಂದು ಒಬ್ಬ ವ್ಯಕ್ತಿ ನಿಮ್ಮ ಹತ್ತಿರ ಬಂದು ಹೇಳಿದರೆ ನೀವೆನೂ ಮಾಡುತ್ತೀರಿ. ಎಂತದ್ದು ಮಾರಾಯಾ, ನಿನ್ನನ್ನು ಒಮ್ಮೆ ಕೆಲಸಕ್ಕೆ ಇಟ್ಟ ಮೇಲೆ ನಿನ್ನ ಕೆಲಸ ಸರಿ ಆಗದಿದ್ದರೆ ನಾನು ಐದು ವರ್ಷ ತೆಗೆಯಲು ಆಗುವುದಿಲ್ಲ. ಅಂದರೆ ನೀನು ಕೆಲಸ ಮಾಡು, ಲಂಚ ತಿನ್ನು, ಕಮೀಷನ್ ಹೊಡೆ, ಆರಾಮವಾಗಿ ಸುತ್ತಾಡಿ ಯಾರ್ಯಾರೋ ಕರೆಯುವ ವೇದಿಕೆ ಮೇಲೆ ಕುಳಿತು ಸ್ಮರಣಿಕೆ ಸ್ವೀಕರಿಸಿ, ಹಾರ ಹಾಕಿಸಿ, ಶಾಲು ಹೊದೆಸಿಕೊಂಡು ಎರಡು ಲಾಟ್ ಪುಟ್ ಭಾಷಣ ಮಾಡಿ ಐದು ವರ್ಷ ಕಳೆದ ಮೇಲೆ ನೀನು ಬೇಡಾ ಎಂದು ನಾನು ಕೆಲಸದಿಂದ ತೆಗೆದು ಹಾಕಿದರೆ ಅದರ ನಂತರ ನಿನಗೆ ಮತ್ತೆ ಪೆನ್ಷನ್ ಬೇರೆ ಕೊಡಬೇಕಾ? ಹೋಗು ಮಾರಾಯ, ನಿನ್ನನ್ನು ಐದು, ಹತ್ತು ವರ್ಷ ಸಾಕಿದ್ದೇ ದೊಡ್ಡದು, ನೀನು ಮಾಡಿದ ಕೆಲಸ ಅಷ್ಟರಲ್ಲಿಯೇ ಇದೆ. ನಿನಗೆ ಪೆನ್ಷನ್ ಕೊಟ್ಟು ಸಾಯುವ ತನಕ ಸಾಕುವುದು ಬೇರೆ ಕೇಡು, ಅದರ ಮೇಲೆ ನಿನ್ನ ಹೆಂಡತಿಗೂ ಪೆನ್ಷನ್ ಕೊಡಬೇಕಾಗುತ್ತದೆ. ನೀನು ಕೆಲಸಕ್ಕೆ ಬರುವುದು ಬೇಡಾ, ಎಲ್ಲಿಂದ ಬಂದಿದೆಯೋ ಅಲ್ಲಿಗೆ ಹೋಗು ಎಂದು ನೀವು ಹೇಳಲ್ವಾ?


ಜನಪ್ರತಿನಿಧಿ ಜನಸೇವಕ ಎಂದ ಮೇಲೆ ಪೆನ್ಷನ್ ಯಾಕೆ?

ಈಗ ಕೆಲಸ ಕೇಳಿ ಬಂದವನ ಸ್ಥಾನದಲ್ಲಿ ನಿಮ್ಮ ಸಂಸದನನ್ನು ಕಲ್ಪಿಸಿಕೊಳ್ಳಿ ಅಥವಾ ನಿಮ್ಮ ಕ್ಷೇತ್ರದ ಶಾಸಕನನ್ನು ಕಲ್ಪಿಸಿಕೊಳ್ಳಿ. ಇಬ್ಬರು ನಿಮ್ಮ ಬಳಿಯೇ ಕೆಲಸ ಕೇಳಿ ಬಂದವರು. ಅವರು ಸರಿಯಾಗಿ ಕೆಲಸ ಮಾಡಿದ್ದಾರಾ, ಇಲ್ವಾ ನೀವು ಅವರನ್ನು ಐದು ವರ್ಷ ಸಹಿಸಿಕೊಂಡಿರಿ. ಮುಂದಿನ ಬಾರಿಯಾದರೂ ಸರಿಯಾಗಿ ಕೆಲಸ ಮಾಡಬಹುದು ಎಂದು ಎಚ್ಚರಿಕೆ ಕೊಟ್ಟು ಇನ್ನೊಂದು ಅವಧಿಗೆ ಉಳಿಸಿಕೊಂಡಿರಿ. ಆತನಿಗೆ ಅಷ್ಟೂ ಅವಧಿಯಲ್ಲಿ ಬೇಕಾದಷ್ಟು ಸಂಬಳ, ಸೌಲಭ್ಯ, ವಿಮಾನ, ರೈಲು ಪ್ರಯಾಣ ಎಲ್ಲದಕ್ಕೆ ಉಚಿತ ವ್ಯವಸ್ಥೆ ಮಾಡಿದ್ದೀರಿ. ಅವನು ಸರಿಯಿಲ್ಲ ಎನ್ನುವ ಕಾರಣಕ್ಕೆ ನಂತರ ಬೇಡಾ ಎಂದಿರುತ್ತೀರಿ. ಆದರೆ ಅವನನ್ನು ಇಡೀ ಜೀವನ ಪರ್ಯಂತ ಸಾಕುವುದಕ್ಕೆ ಹೋಗುವ ಅವಶ್ಯಕತೆ ಇದೆಯಾ? ಒಂದು ವೇಳೆ ಅವನ ಮೇಲೆ ಅಷ್ಟು ಪ್ರೀತಿ ಇದ್ದರೆ ಅವನ ಪಕ್ಷವೇ ಅವನನ್ನು ಸಾಕಲಿ. ಪಕ್ಷಕ್ಕಾಗಿ ಫಂಡ್ ಒಟ್ಟು ಮಾಡಿಕೊಳ್ಳಲು ಎಂಪಿ, ಎಂಎಲ್ ಎ ಆಗುವವರು, ರಾಜ್ಯ ಸಭೆ, ಲೋಕಸಭೆ, ವಿಧಾನಪರಿಷತ್, ವಿಧಾನಸಭೆಗೆ ಎದುರಿನ, ಹಿಂದಿನ ಬಾಗಿಲಿನಿಂದ ಹೋಗುವವರು, ಪಕ್ಷದ ಉನ್ನತ ನಾಯಕರ ಕೈ, ಕಾಲು ನೆಕ್ಕಿ ಅದನ್ನೇ ಜನಸೇವೆ ಎಂದು ಅಂದುಕೊಳ್ಳುವವರು, ಜನಪ್ರತಿನಿಧಿ ಆಗುವ ಮೊದಲು ಸೈಕಲ್ ಗೆ ಎಷ್ಟಾಗುತ್ತದೆ ಎಂದು ವಿಚಾರಿಸುತ್ತಿದ್ದವರು ಕೆಲವೇ ವರ್ಷಗಳಲ್ಲಿ ನಮ್ಮ ಮನೆಯ ಬಾತ್ ರೂಂಗೆ ಮೂರು ಕೋಟಿ ಖರ್ಚಾಯಿತು ಎಂದು ಆಪ್ತರ ಬಳಿ ಹೇಳುವ ಮಟ್ಟಿಗೆ ಬೆಳೆದರೆ ಅವರಿಗೆ ಮತ್ತೆ ನಾವೇ ಪೆನ್ಷನ್ ಕೊಟ್ಟು ಸಾಕಬೇಕು ಎಂದು ಹೇಳುವುದು ಎಷ್ಟು ಸರಿ? ನೀವೆ ಯೋಚಿಸಿ. ನೀವು ಒಂದು ರೌಂಡ್ ನಮ್ಮ ಕರ್ನಾಟಕದ ಎಲ್ಲಾ ಶಾಸಕರು(ವಿಧಾನಪರಿಷತ್, ವಿಧಾನಸಭೆ ಸೇರಿ), ಸಂಸದರು (ಲೋಕಸಭೆ, ರಾಜ್ಯಸಭೆ ಸೇರಿ) ನೋಡಿ ಬನ್ನಿ. ಅವರು ಚುನಾವಣೆಗೆ ನಿಂತಾಗ ಆಸ್ತಿಪಾಸ್ತಿಯ ವಿವರ ಕೊಡುತ್ತಾರಲ್ಲ, ಅದನ್ನು ನೋಡಿ. ಅದರಲ್ಲಿ ಎಷ್ಟು ಮಂದಿಗೆ ಪೆನ್ಷನ್ ಕೊಡಬೇಕು ಎಂದು ಜನರೇ ನಿರ್ಧರಿಸಲಿ. ಅಧಿಕಾರದಲ್ಲಿದ್ದಷ್ಟು ಅವಧಿ ಪಕ್ಷಕ್ಕೆ ಹಣ ಸಂಗ್ರಹಿಸಿ ಕೊಟ್ಟವರಿಗೆ, ತನ್ನ ತಿಜೋರಿ ತುಂಬಿದವರಿಗೆ ಮತ್ತೆ ನಾವು ಯಾಕೆ ಪೆನ್ಷನ್ ಕೊಡಬೇಕು? ಯೋಚಿಸಿ. ಅದೇ ಹಣವನ್ನು ಪಾಪದವರಿಗೆ ಹಂಚೋಣ. ಪಕ್ಷವೇ ತನಗೋಸ್ಕರ ದುಡಿದವರನ್ನು ಸಾಯುವ ತನಕ ಬೇಕಾದರೆ ಸಾಕಲಿ.

ಪ್ಯಾಕ್ ಹಾಕಿ 399/_…

ಪೆನ್ಷನ್ ಬಗ್ಗೆ ಬರೆಯುತ್ತಿದ್ದಂತೆ ಇನ್ನೊಂದು ನೆನಪಾಯಿತು. ದಿನಕ್ಕೆ ಹತ್ತು ಸಲ ಮೊಬೈಲಿಗೆ ಮೇಸೆಜ್ ಬರುತ್ತದೆ. ತಿಂಗಳಿಗೆ 399/- ರೂಪಾಯಿ ಕರೆನ್ಸಿ ಹಾಕಿ ಬೇಕಾದಷ್ಟು ಮಾತನಾಡಿ. ನನಗೆ ಬರುವ ಮೇಸೆಜ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವ ಟೆಲಿಫೋನ್ ಕಂಪೆನಿಯವರು ಕೂಡ ಕಳುಹಿಸಲ್ವಾ? ಯಾಕೆಂದರೆ ನಾನು ಈಗ ಸಂಸದರ, ಶಾಸಕರ ಸಂಬಳದೊಂದಿಗೆ, ಸೌಲಭ್ಯದ ಲೆಕ್ಕದಲ್ಲಿ ಕೊಡುವ ಟೆಲಿಫೋನ್ ಖರ್ಚಿನ ಬಗ್ಗೆ ಕೂಡ ಹೇಳಬೇಕಾಗಿದೆ. ಒಬ್ಬ ಸಂಸದನಿಗೆ ತಿಂಗಳಿಗೆ ಫೋನ್ ಖರ್ಚು ಎಂದೇ 3000 ರೂಪಾಯಿ ಕೊಡಲಾಗುತ್ತದೆ. ಬೇರೆ ಬೇರೆ ರಾಜ್ಯದ ಶಾಸಕನಿಗೂ ಹೆಚ್ಚು ಕಡಿಮೆ ಅಷ್ಟೇ ಹಣ ಫೋನ್ ಗೆ ಎಂದು ಇರುತ್ತದೆ. ನನ್ನ ಪ್ರಶ್ನೆ ಸಿಂಪಲ್. ಇಷ್ಟು ಹಣ ಫೋನ್ ಗಾಗಿ ವಿನಿಯೋಗಿಸುವುದು ಯಾಕೆ? ಹೆಚ್ಚಿನ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ಫೋನ್ ಮಾಡುವುದು ನಾವೇ. ಅವರು ಬರಿ ಸ್ವೀಕರಿಸುವುದು. ಕೆಲವೊಮ್ಮೆ ಅದು ಕೂಡ ಮಾಡುವುದಿಲ್ಲ. ಅವರಿಗೆ ತುಂಬಾ ಜನರಿಗೆ ಫೋನ್ ಮಾಡಲು ಇರುತ್ತದೆ ಎಂದೇ ಇಟ್ಟುಕೊಳ್ಳೋಣ. ಅದಕ್ಕೆ ಅಲ್ವಾ ಬೇರೆ ಬೇರೆ ಕಂಪೆನಿಗಳು 399/_ ಸ್ಕೀಮ್ ಇಟ್ಟು ನಮಗೆ ಮೇಸೆಜ್ ಮಾಡುತ್ತಾ ಇರುವುದು. ಬೇಕಾದರೆ ಕೇಂದ್ರ, ರಾಜ್ಯ ಸರಕಾರಗಳು ಟೆಂಡರ್ ಕರೆಯಲಿ. ಕಡಿಮೆ ಬಿಡ್ ಮಾಡಿದವರಿಗೆ ಕೊಡಲಿ. ಹಣ ಉಳಿಸೋಣ. ಅದು ಬಿಟ್ಟು ಪೆನ್ಷನ್ ಕೊಡುವುದು, ಫೋನ್ ಖರ್ಚಿಗೆ ಇಷ್ಟು ಕೋಟಿ ಇಡುವುದು ಎಲ್ಲಾ ಮಾಡಿದರೆ ಹಣ ಎಲ್ಲಿ ಉಳಿಸುವುದು!

  • Share On Facebook
  • Tweet It


- Advertisement -


Trending Now
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Hanumantha Kamath February 3, 2023
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
Hanumantha Kamath February 2, 2023
Leave A Reply

  • Recent Posts

    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
  • Popular Posts

    • 1
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 2
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 3
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 4
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 5
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search