ಮುಂದುವರೆದ ಮಮತಾ ಬ್ಯಾನರ್ಜಿ ಹಿಂದೂ ವಿರೋಧಿ ಮನಸ್ಥಿತಿ, ಆರೆಸ್ಸೆಸ್ಸಿನ 125 ಶಾಲೆ ಮುಚ್ಚಲು ಮುಂದಾದ ದೀದಿ!

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರ ವಿರುದ್ಧ ಆಜೀವ ಪರ್ಯಂತ ಹೋರಾಡಿ ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ ಕಮ್ಯುನಿಸ್ಟರಿಗಿಂತ ಹೆಚ್ಚಾಗಿ ಹಿಂದೂಗಳನ್ನು ದ್ವೇಷಿಸಲು ಆರಂಭಿಸಿದರು. ಅದಕ್ಕೆ ದುರ್ಗಾ ಪೂಜೆಗೆ ಅಡ್ಡಿಯಾದ ರೀತಿ, ಕೋಮುವಾದ ಸೃಷ್ಟಿ ಸೇರಿ ಹಲವು ಕಾರಣಗಳನ್ನು ನೀಡಬಹುದು.
ಇಂತಹ ಮಮತಾ ಬ್ಯಾನರ್ಜಿ ಹಿಂದೂಗಳನ್ನು ವಿರೋಧಿಸಲು ಈಗ ಹೊಸದೊಂದು ಅಸ್ತ್ರ ಬಳಸಿದ್ದು, ಪಶ್ಚಿಮ ಬಂಗಾಳದಲ್ಲಿ ಆರೆಸ್ಸೆಸ್ ನಡೆಸುತ್ತಿದ್ದ 125 ಶಾಲೆಗಳನ್ನು ಮುಚ್ಚಲು ತೀರ್ಮಾನಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಡೆಸುತ್ತಿರುವ 125 ಶಾಲೆಗಳನ್ನು ಮುಚ್ಚಬೇಕು ಎಂದು ರಾಜ್ಯ ಶಿಕ್ಷಣ ಸಚಿವ ಪಾರ್ಥ ಸಚಿವ ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೆ ಸುಮಾರು 493 ಶಾಲೆಗಳನ್ನು ಮುಚ್ಚಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪಾರ್ಥ ಚಟರ್ಜಿ ತಿಳಿಸಿದ್ದಾರೆ.
ಇದಕ್ಕೆ ರಾಜ್ಯ ಸರ್ಕಾರ ಹಲವು ನೆಪವೊಡ್ಡಿದ್ದು, ಆರೆಸ್ಸೆಸ್ ನಡೆಸುತ್ತಿರುವ ಶಾಲೆಗಳಲ್ಲಿ ಅಹಿಂಸೆಗೆ ಪ್ರಚೋದನೆ, ಧರ್ಮ ಧರ್ಮಗಳ ನಡುವೆ ಅಸಹಿಷ್ಣುತೆ ಬಿತ್ತುತ್ತಿದೆ ಎಂದು ಆರೋಪಿಸಲಾಗಿದ್ದು, ಹಿಂದೂಗಳನ್ನು, ಅದರಲ್ಲೂ ಆರೆಸ್ಸೆಸ್ಸನ್ನು ಮಟ್ಟಹಾಕಲು ದೀದಿ ಈ ಕುತಂತ್ರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿವೆ.
ಒಟ್ಟಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬಂದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಹಿಂದೂಗಳನ್ನು ದಮನ ಮಾಡುತ್ತಲೇ ಇದ್ದು, ಈಗಂತೂ ಇದು ಅತಿರೇಕಕ್ಕೆ ಹೋಗಿದೆ. ಅದೇ ಮದ್ರಸಾಗಳನ್ನು ಮುಚ್ಚುವ ಧೈರ್ಯ ಬ್ಯಾನರ್ಜಿ ಅವರು ಮಾಡುತ್ತಾರೆಯೇ? ಎಂಬ ಪ್ರಶ್ನೆ ಸಹ ಉದ್ಭವಿಸಿದೆ.
Leave A Reply