ಇಲ್ಲಿ ಕರ್ನಾಟಕ ಕಾಂಗ್ರೆಸ್ಸಿಗರ ಗೂಂಡಾಗಿರಿ, ಅಲ್ಲಿ ಆಂಧ್ರಪ್ರದೇಶ ಕಾಂಗ್ರೆಸ್ಸಿಗರ ಲೈಂಗಿಕಗಿರಿ!

ಹೈದರಾಬಾದ್: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಆಪ್ತರು, ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್, ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಸೇರಿ ಹಲವು ಕಾಂಗ್ರೆಸ್ಸಿಗರು ರಾಜ್ಯದಲ್ಲಿ ಗೂಂಡಾಗಿರಿ ಪ್ರದರ್ಶಿಸುತ್ತಿದ್ದರೆ, ಅತ್ತ ಹೈದರಾಬಾದಿನಲ್ಲಿ ಕಾಂಗ್ರೆಸ್ ಮುಖಂಡನೊಬ್ಬ ಲೈಂಗಿಕಗಿರಿ ಪ್ರದರ್ಶನಕ್ಕೆ ಮುಂದಾಗಿದ್ದಾನೆ.
ಹೌದು, ಹೈದರಾಬಾದಿನಲ್ಲಿರುವ ಯುವ ಕಾಂಗ್ರೆಸ್ ಮುಖಂಡ ಮಿರ್ಜಾ ಮೌಜಮ್ ಬೇಗ್ ಎಂಬಾಂತ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಈಗ ಜೈಲುಪಾಲಾಗಿದ್ದಾನೆ.
ವೃತ್ತಿಯಲ್ಲಿ ವಕೀಲನೂ ಆಗಿರುವ ಈತ, ಹಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಂದಿಗೆ ಸ್ನೇಹ ಗಳಿಸಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೆ ಆಕೆಯ ಸ್ನೇಹ ಬೆಳೆಸಿದ್ದು, ಆ ಸ್ನೇಹವನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಅಲ್ಲದೆ ಯುವತಿಯು ತನ್ನ ಜತೆ ಲೈಂಗಿಕವಾಗಿ ಸಹಕಾರ ನೀಡುವಂತೆ ಫೇಸ್ ಬುಕ್ಕಿನಲ್ಲಿ ಪ್ರಸ್ತಾಪಿಸಿದ್ದು, ಅದಕ್ಕೆ ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಆತ ಅಶ್ಲೀಲ ಭಾಷೆ ಪ್ರಯೋಗ, ಚಿತ್ರಗಳನ್ನು ಕಳುಹಿಸುವುದು, ಬೈಯ್ಯುವುದು ಮಾಡಿದ್ದಾನೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಫೆಬ್ರವರಿ 18ರಂದು ಯುವತಿಯೊಬ್ಬರು ದೂರು ನೀಡಿದ್ದು, ವ್ಯಕ್ತಿಯು ಆಕೆಯ ಜತೆಗೆ, ಆಕೆ ಸ್ನೇಹಿತರಿಗೂ ಕೆಟ್ಟ ಸಂದೇಶ ಕಳುಹಿಸಿದ್ದಾನೆ, ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯುವತಿ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಲಂಗರ್ ಹೌಜ್ ಪೊಲೀಸ್ ಠಾಣೆ ಪಿಎಸ್ಐ ಮಾಹಿತಿ ನೀಡಿದ್ದಾರೆ.
Leave A Reply