ಅಣ್ಣಾ ಹಜಾರೆ ಕನಸು ಶೀಘ್ರ ಈಡೇರಿಸಲಿದ್ದಾರಾ ಮೋದಿ?
ದೆಹಲಿ: ಗಾಂಧಿವಾದಿ ಅಣ್ಣಾಹಜಾರೆ ನೇತೃತ್ವದಲ್ಲಿ ನವ ಚಳವಳಿ ಮೂಲಕ ಸಂಚಲನ ಮೂಡಿಸಿದ ಲೋಕಪಾಲ್ ಚಳವಳಿಯ ಆಶಯಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು, ಭ್ರಷ್ಟರಿಗೆ ಬಲೆ ಹಾಕುವ ಲೋಕಪಾಲ್ ನೇಮಕದ ದಿನಗಳು ಹತ್ತಿರವಾದಂತಿವೆ.
ಐದು ವರ್ಷಗಳಿಂದ ನೆನೆಗುದಿಗೆ ಬಿದಿರುವ ಮಹತ್ವದ ಲೋಕಪಾಲ್ ನೇಮಕಕ್ಕೆ ನರೇಂದ್ರ ಮೋದಿ ಸರ್ಕಾರ ಮುಂದಾಗಿರುವ ಲಕ್ಷಣ ಗೋಚರಿಸಿವೆ. ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಲೋಕಪಾಲ ಕುರಿತು ವಿವರವಾದ ಮಾಹಿತಿ ನೀಡಿದೆ.
ಸರ್ಕಾರೇತರ ಸಂಸ್ಥೆ ‘ಕಾಮನ್ ಕಾಸ್’ ಸಲ್ಲಿಸಿದ್ದ ಅರ್ಜಿಯನ್ನು ಫೆ 23 ರಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೇಂದ್ರ ಸರಕಾರಕ್ಕೆ ವಿವರಣೆ ಕೇಳಿತ್ತು. ವಿವರಣೆ ನೀಡಿರುವ ಕೇಂದ್ರ ಸರ್ಕಾರ ಮಾರ್ಚ್ 1ರಂದು ಲೋಕಪಾಲ್ ನೇಮಕ ಸಮಿತಿಯ ಸಭೆ ನಡೆಯಲಿದೆ ಎಂದು ತಿಳಿಸಿದೆ.
ಕೇಂದ್ರ ಸರಕಾರದ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಲೋಕಪಾಲ ಸಮಿತಿಯಲ್ಲಿ, ಸಿಜೆಐ ದೀಪಕ್ ಮಿಶ್ರಾ, ಪ್ರಧಾನಿ ಮೋದಿ ಮತ್ತು ಸಂಸತ್ತಿನ ಉಭಯ ಸದನಗಳ ಪ್ರತಿಪಕ್ಷದ ನಾಯಕರುಗಳು ಸದಸ್ಯರಾಗಿದ್ದಾರೆ.
ವಿರೋಧ ಪಕ್ಷಗಳಲ್ಲಿ ನಾಯಕರ ಕೊರತೆ ಎಂಬ ಕಾರಣಕ್ಕೆ ಲೋಕಪಾಲ ನೇಮಕ ಪ್ರಕ್ರಿಯೆ ವಿಳಂಬವಾಗಬಾರದೆಂದು ಏಪ್ರಿಲ್ ನಲ್ಲೇ ಸರ್ವೋಚ್ಚ ನ್ಯಾಯಾಲಯ ಕೇಂದ್ರಕ್ಕೆ ಸೂಚನೆ ನೀಡಿತ್ತು. ಕಾಂಗ್ರೆಸ್ ಅಥವಾ ಇತರ ವಿರೋಧ ಪಕ್ಷಗಳ ನಾಯಕರು ಇಲ್ಲದಿದ್ದರೂ ಲೋಕಪಾಲ್ ನೇಮಿಸಿ ಎಂದು ನ್ಯಾಯಾಲಯ ಸೂಚನೆ ನೀಡಿತ್ತು. 2014ರಲ್ಲಿ ಮೋದಿ ಸರಕಾರಕ್ಕೆ ಅಧಿಕಾರಕ್ಕೆ ಬಂದ ನಂತರ, ವಿರೋಧ ಪಕ್ಷದಲ್ಲಿ ನಾಯಕರೇ ಇಲ್ಲ ಎಂದು ಕೋರ್ಟಿಗೆ ಹೇಳಿತ್ತು.
Leave A Reply