• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಲ್ಲಿ ರಾಹುಲ್ ಗಾಂಧಿ ಬಸವಣ್ಣನವರ ವಚನ ಪಾಲಿಸಲು ಹೇಳ್ತಾರೆ, ಇಲ್ಲಿ ಮೊಯ್ದೀನ್ ಬಾವ…….!!

Hanumantha Kamath Posted On February 28, 2018


  • Share On Facebook
  • Tweet It

ಶಾಸಕ ಮೊಯ್ದೀನ್ ಬಾವ ಮನೆಮನೆಗೆ ಹೋಗಿ ಸೀರೆ ಹಂಚುತ್ತಿದ್ದಾರೆ. ತಾವು ಹೋದ ಕಡೆಯಲ್ಲೆಲ್ಲ ಪುಗಸಟ್ಟೆ ಪ್ರಚಾರ ಪಡೆದುಕೊಳ್ಳುತ್ತಾ ಅದರ ಫೋಟೋ, ವಿಡಿಯೋ ತೆಗೆಯಲು ಅಲ್ಲಿದ್ದ ಯಾರ ಕೈಯಲ್ಲಾದರೂ ಮೊಬೈಲ್ ಕೊಟ್ಟು ಅದನ್ನು ತಮ್ಮ ಫೇಸ್ ಬುಕ್ಕಿನಲ್ಲಿ ಅಪಲೋಡ್ ಮಾಡುತ್ತಿದ್ದಾರೆ. ಅದು ಅವರ ಈ ಕ್ಷಣದ ಅನಿವಾರ್ಯತೆ ಆಗಿರುವುದರಿಂದ ಮಾಡಲಿ ಅದರಲ್ಲಿ ನಾವ್ಯಾರೂ ಆಕ್ಷೇಪ ಎತ್ತಲು ಆಗುವುದಿಲ್ಲ. ಒಂದು ವೇಳೆ ನಿಜವಾಗಿಯೂ ತಾನು ಮಂಗಳೂರು ನಗರ ಉತ್ತರ ವಿಧಾನಸಭೆಯನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಎದೆತಟ್ಟಿ ಹೇಳುವ ಶಾಸಕ ಬಾವರಿಗೆ ಸೀರೆ ಹಂಚುವ ಅಗತ್ಯ ಯಾಕೆ ಬಂತೋ ಗೊತ್ತಿಲ್ಲ. ಕೇಳಿದರೆ ಭರ್ತಡೇ ಎನ್ನುತ್ತಾರೆ. ಹುಟ್ಟಿದ ದಿನ ಭರ್ತಡೇ ಆಚರಿಸುವುದು ಗೊತ್ತು. ಆದರೆ ವಾರವೀಡಿ ಹೋದ ಕಡೆಯಲ್ಲೆಲ್ಲ ಸೀರೆ ಕಾರಿನಲ್ಲಿ ತುಂಬಿಸಿ ಹೋಗುವುದು ನೋಡಿದರೆ ಅಪ್ಪಟ ಸೀರೆ ವ್ಯಾಪಾರಿಯಂತೆ ಕಾಣುತ್ತಾರೆ ಶಾಸಕರು.
ಹಿಂದೆ ಇದೇ ಕ್ಷೇತ್ರವನ್ನು ಸುರತ್ಕಲ್ ಎಂದು ಕರೆಯಲಾಗುತ್ತಿತ್ತು. 1989 ಮತ್ತು 1999 ಎರಡು ಬಾರಿ ಇದೇ ಕ್ಷೇತ್ರದಿಂದ ಆಯ್ಕೆಯಾದವರು ಸಜ್ಜನ ರಾಜಕಾರಣಿ ವಿಜಯ ಕುಮಾರ್ ಶೆಟ್ಟಿ. ವಿಜಯ ಕುಮಾರ್ ಶೆಟ್ಟಿ ಅವರು ಪಕ್ಷಕ್ಕಾಗಿ ತನು, ಮನ, ಧನ ಹಾಕಿ ಪಕ್ಷ ಕಟ್ಟಿದ ನಾಯಕರು. ಅದೇ ಕಾರಣಕ್ಕೆ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಕಾರ್ಯದರ್ಶಿ ಮಾಡಲಾಗಿತ್ತು. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಉಸ್ತುವಾರಿ ಕೊಡಲಾಗಿತ್ತು. ಅವರು ಅಲ್ಲಿ ಪಕ್ಷವನ್ನು ಕಟ್ಟಲು ಎಷ್ಟರ ಮಟ್ಟಿಗೆ ತೊಡಗಿಸಿಕೊಂಡಿದರೆಂದರೆ ನೀವು ಇಲ್ಲಿಯೇ ಇದ್ದರೆ ನಿಮ್ಮ ಕ್ಷೇತ್ರದಲ್ಲಿ ಸೋಲುತ್ತೀರಿ. ಅಲ್ಲಿ ಹೋಗಿ ಕೆಲಸ ಮಾಡಿ ಸರ್ ಎಂದು ಆ ಜಿಲ್ಲೆಗಳ ಮುಖಂಡರು ಹೇಳಿದ್ದರು. ಅಷ್ಟರಮಟ್ಟಿಗೆ ವಿಜಯ ಕುಮಾರ್ ಶೆಟ್ಟಿಯವರಿಗೆ ಪಕ್ಷದ ಮೇಲೆ ಪ್ರೀತಿ ಇತ್ತು. ತಾನು ಗೆಲ್ಲುವುದಕ್ಕಿಂತ ಪಕ್ಷ ಬೆಳೆಯಬೇಕು ಎಂದು ಅವರ ಗುರಿಯಾಗಿತ್ತು.

ಸುರತ್ಕಲ್ ಅಭಿವೃದ್ಧಿಯ ಹರಿಕಾರ…

ಅದರಂತೆ ಅವರು ಶಾಸಕರಾಗಿದ್ದ ಅವಧಿಯಲ್ಲಿ ಆದ ಅಬಿವೃದ್ಧಿ ಕಾರ್ಯಗಳು ಜನಮಾನಸವನ್ನು ತಲುಪಿದ್ದವು. ಅದನ್ನು ಜನ ಈಗಲೂ ಮರೆತಿಲ್ಲ. ಅವರು ಆಡಂಬರದ ಬದುಕು ಮೆರೆದಿರಲಿಲ್ಲ. ಪ್ರತಿ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಅವರ ಒಡನಾಟವಿತ್ತು. ಸುಮ್ಮನೆ ತೋರಿಕೆಗೆ ಅವರು ಬೆನ್ನುತಟ್ಟುತ್ತಿರಲಿಲ್ಲ. ಎಂಆರ್ ಪಿಎಲ್ ತಮ್ಮ ಕ್ಷೇತ್ರದಲ್ಲಿ ಬರುವಾಗ ಇಲ್ಲಿ ಭೂಮಿ ಕಳೆದುಕೊಳ್ಳುವವರಿಗೆ, ಉದ್ಯೋಗ ಕೊಡುವುದರಿಂದ ಹಿಡಿದು ಪ್ರತಿಯೊಂದರಲ್ಲಿಯೂ ಅವರ ದೂರದೃಷ್ಟಿಯ ಶ್ರಮವಿತ್ತು. ಅದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ತಪ್ಪು ನಡೆದಿದೆ ಎಂದರೆ ಅವರು ಅದನ್ನು ಸಮರ್ಥಿಸಿಕೊಳ್ಳುತ್ತಿರಲಿಲ್ಲ. ತಮ್ಮ ಪಕ್ಷದ ಮುಖಂಡರಿರಲಿ, ಕಾರ್ಯಕರ್ತರಿರಲಿ ಅಡ್ಡದಾರಿ ಹಿಡಿದರೆ ಅವರು ಅದನ್ನು ಬಹಿರಂಗ ವೇದಿಕೆಯಲ್ಲಿ ವಿರೋಧಿಸುತ್ತಿದ್ದರು. ಬಹುಶ: ಅವರಿಗೆ ಇದೇ ಛಾತಿ ಜನಾರ್ಧನ ಪೂಜಾರಿಯವರಿಂದ ಬಂದಿರಲಿಕ್ಕೂ ಸಾಕು. ಯಾಕೆಂದರೆ ಇವರು ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ಪೂಜಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಬಹುಶ: ನೇರನುಡಿ ಕಾಂಗ್ರೆಸ್ಸಿಗರಿಗೆ ಇತ್ತೀಚಿನ ದಿನಗಳಲ್ಲಿ ಅಪಥ್ಯವಾಗುವಂತೆ ಕಾಣುತ್ತಿದೆ.

2013 ರಲ್ಲಿ ವಿಜಯ ಕುಮಾರ್ ಶೆಟ್ಟಿಯವರಿಗೆನೆ ಮಂಗಳೂರು ನಗರ ಉತ್ತರದಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ ಎನ್ನುವ ವಾತಾವರಣ ಇತ್ತು. ಮೊಯ್ದೀನ್ ಬಾವ ಯಾವ ಎಡ್ಜಸ್ಟಮೆಂಟ್ ಮಾಡಿದರೂ ವಿಜಯ ಕುಮಾರ್ ಶೆಟ್ಟಿ ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ. ಮೊಯ್ದೀನ್ ಬಾವ ಯಾರ ಕೈಯಿಂದ ಹೇಳಿಸಿದರೂ ಶೆಟ್ಟರು ಆಗಲ್ಲ ಎಂದೇ ಹೇಳಿದ್ದರು. ಕೊನೆಯದಾಗಿ ಮಾಜಿ ಕೇಂದ್ರ ರಕ್ಷಣಾ ಸಚಿವ ಎಕೆ ಆಂಟನಿ ರಂಗ ಪ್ರವೇಶ ಮಾಡಬೇಕಾಯಿತು. ಮೇಡಂ ಹೇಳಿ ಕಳುಹಿಸಿದ್ದಾರೆ. ನೀವು ಈ ಬಾರಿ ಎಂಎಲ್ ಎ ಟಿಕೇಟ್ ಅನ್ನು ಮೊಯ್ದೀನ್ ಬಾವ ಅವರಿಗೆ ಬಿಟ್ಟುಕೊಡಬೇಕಂತೆ. ಹಾಗಂತ ನೀವು ಪಕ್ಷಕ್ಕಾಗಿ ಮಾಡಿದ ಸೇವೆಯನ್ನು ಹೈಕಮಾಂಡ್ ಗುರುತಿಸಿದೆ. ನಿಮಗೆ ಮುಂದಿನ ಬಾರಿ ಇದೇ ಭಾಗದಿಂದ ಎಂಎಲ್ ಸಿ ಮಾಡಲಾಗುವುದು ಎಂದು ತೀರ್ಮಾನಿಸಲಾಗಿದೆ. ಈ ಹೊತ್ತಿಗೆ ನೀವು ಮೇಡಂ ಮಾತಿಗೆ ನೋ ಹೇಳಬಾರದು ಎಂದು ಆಂಟನಿ ಹೇಳುತ್ತಿದ್ದಂತೆ ವಿಜಯ ಕುಮಾರ್ ಶೆಟ್ಟಿಯವರಿಗೆ ಮರು ಮಾತನಾಡುವ ಅವಕಾಶವೇ ಇರಲಿಲ್ಲ. ಯಾಕೆಂದರೆ ಮೇಡಂ ಎಂದು ಆಂಟನಿ ಹೇಳುತ್ತಿರುವುದು ಸೋನಿಯಾ ಅವರ ಕುರಿತು. ಸೋನಿಯಾ ಹೇಳಿದ ಮೇಲೆ ಮರು ಮಾತುಂಟೆ. ವಿಜಯ ಕುಮಾರ್ ಶೆಟ್ಟಿ ಸರಿ ಎಂದರು. ಅಲ್ಲಿಗೆ ಮೊಯ್ದೀನ್ ಬಾವ ದಾರಿ ಕ್ಲಿಯರ್ ಆಯಿತು. ಕೃಷ್ಣ ಜೆ ಪಾಲೇಮಾರ್ ಅವರ ಹಿತಶತ್ರುಗಳನ್ನು ಬಳಸಿ ಬಾವ ಗೆದ್ದು ಕೂಡ ಆಯಿತು.

ಇವರ ಸೀಟ್ ಐವನ್ ಡಿಸೋಜಾಗೆ ಹೋಯಿತು…

ಅದರ ನಂತರ ಎಂಎಲ್ ಸಿ ಚುನಾವಣೆ ಬಂತು. ಯಾರನ್ನಾದರೂ ಕರಾವಳಿಯಲ್ಲಿ ವಿಧಾನ ಪರಿಷತ್ತಿನ ನಾಮ ನಿರ್ದೇಶಿತ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂಬ ವಿಷಯ ಬಂದಾಗ ವಿಜಯ ಕುಮಾರ್ ಶೆಟ್ಟಿ ಬಿಟ್ಟರೆ ಬೇರೆ ಆಯ್ಕೆಗಳಿರಲಿಲ್ಲ. ಆದರೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಕ್ರೈಸ್ತ ಮುಖಂಡರು, ಧರ್ಮ ಬೋಧಕರು ವಿಪರೀತ ಒತ್ತಡ ಹಾಕಿ ಐವನ್ ಡಿಸೋಜಾ ಅವರನ್ನು ಎಂಎಲ್ ಸಿ ಮಾಡಿದರು. ಒಂದು ಕಡೆ ಮೊಯ್ದೀನ್ ಬಾವ ಎಂಎಲ್ ಎ ಸ್ಥಾನ ಕಿತ್ತುಕೊಂಡರೆ ಮತ್ತೊಂದೆಡೆ ಐವನ್ ಡಿಸೋಜಾ ವಿಧಾನಪರಿಷತ್ ಸ್ಥಾನ ಕಸಿದುಕೊಂಡರು. ವಿಜಯ ಕುಮಾರ್ ಶೆಟ್ಟಿಯವರಿಗೆ ಕನಿಷ್ಟ ಒಂದು ಮಾತು ಕೂಡ ಈ ಬಾರಿ ಕೇಳಲು ಕಾಂಗ್ರೆಸ್ ಹೈಕಮಾಂಡ್ ಯಾರನ್ನೂ ಕಳುಹಿಸಿರಲಿಲ್ಲ.

ಈಗ ವಿಜಯ ಕುಮಾರ್ ಶೆಟ್ಟಿಯವರನ್ನು ಮೊಯ್ದೀನ್ ಬಾವ ಯಾವ ರೀತಿ ನೋಡಿಕೊಳ್ಳುತ್ತಿದ್ದಾರೆ ಎಂದರೆ ವಿಜಯ ಕುಮಾರ್ ಶೆಟ್ಟಿಯವರಿಗೆ ಒಂದು ಮಾತು ಕೂಡ ಕೇಳದೆ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸ್ಥಾನದಿಂದ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ಒಂದು ಕಿಂಚಿತ್ ನೋಟಿಸ್ ಕೂಡ ಕೊಡಬೇಕೆನ್ನುವ ಸೌಜನ್ಯತೆ ಕಾಂಗ್ರೆಸ್ ಶಾಸಕ ಮೊಯ್ದೀನ್ ಬಾವ ಅವರಿಗೆ ಇಲ್ಲ ಎನ್ನುವುದು ಮೊಯ್ದೀನ್ ಬಾವ ಯಾವ ರೀತಿಯ ಮನಸ್ಥಿತಿ ಹೊಂದಿದ್ದಾರೆ ಎಂದು ತೋರಿಸುತ್ತದೆ. ಮೇಡಂ ಸೋನಿಯಾ ಅವರು ಆವತ್ತು ಭರವಸೆ ಕೊಟ್ಟಿದ್ದಕ್ಕೆ ಹಾಗಾದರೆ ಅರ್ಥವೇ ಇಲ್ಲವಾಯಿತಾ? ಅವರ ಮಾತಿಗೆ ಕಿಮ್ಮತ್ತೆ ಇಲ್ಲವೇ? ಒಬ್ಬ ಮುಖಂಡನನ್ನು ಈ ರೀತಿ ನಡೆಸಿದ್ದು ಸರಿಯಾ? ಇದನ್ನು ಜಾತಿ ಲೆಕ್ಕಾಚಾರ ನೋಡಬಾರದು ಎಂದು ಅಂದುಕೊಂಡರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ, ಕ್ರೈಸ್ತರಿಗೆ ಸಿಗುವ ರಾಜಕೀಯ ಸ್ಥಾನಮಾನ ಜಿಲ್ಲೆಯ ಪ್ರಮುಖ ಪ್ರಬಲ ಜಾತಿ ಬಂಟರಿಗೆ ಸಿಗುತ್ತಿಲ್ಲವಲ್ಲ ಎಂದು ಅನಿಸುತ್ತದೆ. ಅಲ್ಲಿ ಸುಂದರರಾಮ ಶೆಟ್ಟಿಯವರಿಗೆ ಆದ ಅವಮಾನ ಬಂಟರು ಮರೆತಿರಲಿಕ್ಕಿಲ್ಲ. ಈಗ ಮೊಯ್ದೀನ್ ಬಾವ ಹೀಗೆ ಹೀನಾಯವಾಗಿ ವಿಜಯ ಕುಮಾರ್ ಶೆಟ್ಟಿಯವರನ್ನು ನಡೆಸುತ್ತಿದ್ದರೂ ಬಂಟರ ಆತ್ಮಸಾಕ್ಷಿ ಏನೂ ಹೇಳುವುದಿಲ್ಲವೇ. ಒಬ್ಬ ನಿಸ್ವಾರ್ಥ ನಾಯಕ ಅದು ಕೂಡ ಪಕ್ಷಾತೀತವಾಗಿ ನೇತ್ರಾವತಿ, ಎತ್ತಿನಹೊಳೆ ಉಳಿಸಲು ಬೀದಿಗೆ ಇಳಿದದ್ದು ಕಾಂಗ್ರೆಸ್ಸಿನಿಂದ ವಿಜಯ ಕುಮಾರ್ ಶೆಟ್ಟಿಯವರು ಮತ್ತು ಒಂದಿಬ್ಬರು ಬೆರಳೆಣಿಕೆಯ ನಾಯಕರು ಮಾತ್ರ. ಅದೇ ಅವರ ರಾಜಕೀಯ ಭವಿಷ್ಯಕ್ಕೆ ಕುಂದಾಗುವುದಾದರೆ ನೇತ್ರಾವತಿ ನೀರು ಕುಡಿಯುವವರಿಗೂ ಇದು ಆದ ಅವಮಾನ. ಹೋಗಲಿ, ನೀವು ಶಾಸಕ ಸ್ಥಾನ ಕೊಡಲು ಆಗುವುದಿಲ್ಲವಾದರೆ ಕನಿಷ್ಟ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಕೊಡಬಹುದಿತ್ತಲ್ಲ. ಇದೆಲ್ಲ ರಾಹುಲ್ ಗಾಂಧಿಯವರಿಗೆ ಗೊತ್ತಾಗುವುದಿಲ್ಲ. ಅವರು ಬಸವಣ್ಣನವರ ವಚನ ಹೇಳುತ್ತಾ ಸುತ್ತಾಡುತ್ತಿದ್ದಾರೆ. ಅವನು ನಮ್ಮವ…… ಇಲ್ಲಿ ವಿಜಯ ಕುಮಾರ್ ಶೆಟ್ಟಿಯವರನ್ನು ಕಾಂಗ್ರೆಸ್ಸಿಗರು ಇವನ್ಯಾರವ ಎನ್ನುತ್ತಿದ್ದಾರೆ.

  • Share On Facebook
  • Tweet It


- Advertisement -


Trending Now
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Hanumantha Kamath February 3, 2023
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
Hanumantha Kamath February 2, 2023
Leave A Reply

  • Recent Posts

    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
  • Popular Posts

    • 1
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 2
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 3
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 4
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 5
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search