ದೇಶಾದ್ಯಂತ ಏಕಕಾಲದಲ್ಲೇ ಚುನಾವಣೆ ನಡೆಸಲು ಮೋದಿ, ಅಮಿತ್ ಷಾ ಮಾಡಿರುವ ಯೋಜನೆ ಏನು ಗೊತ್ತಾ?
ದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ರಚನೆಯಾದ ಮೇಲೆ ಭಾರತದಲ್ಲಿ ಮಹತ್ತರ ಹಾಗೂ ದಿಟ್ಟ ಬದಲಾವಣೆಗಳಾಗುತ್ತಿರುವ ಬೆನ್ನಲ್ಲೇ, ನರೇಂದ್ರ ಮೋದಿ ಹಾಗೂ ಅಮಿತ್ ಷಾ ಜೋಡಿ, ಮತ್ತೊಂದು ಮಹತ್ವದ ಬದಲಾವಣೆಗೆ ಸಜ್ಜಾಗಿದೆ ಎಂದು ತಿಳಿದುಬಂದಿದೆ.
ಹೌದು, ದೇಶದಲ್ಲಿ ಒಂದು ದೇಶ, ಒಂದು ಚುನಾವಣೆ ಎಂಬ ಕಲ್ಪನೆ ಮೂಡಿಸಿ, ಅದನ್ನು ಸಾಕಾರಗೊಳಿಸಲು ಈ ಜೋಡಿ ಮುಂದಾಗಿದ್ದು, ಈ ಕುರಿತು ಚರ್ಚಿಸಲು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸುವ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಮುಂಬರುವ ಲೋಕಸಭೆ ಚುನಾವಣೆ ಮೇಲೂ ಮೋದಿ-ಶಾ ಕಣ್ಣಿಟ್ಟಿದ್ದು, ಗೆಲುವಿಗೆ ತಂತ್ರ ರೂಪಿಸುವ ಕುರಿತು ಮುಖ್ಯಮಂತ್ರಿಗಳ ಅಭಿಪ್ರಾಯ ಸಂಗ್ರಹಿಸುತ್ತದೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲ, ಜನರ ಕಲ್ಯಾಣಕ್ಕಾಗಿ ಯಾವ ಯೋಜನೆ ಜಾರಿಗೊಳಿಸಬೇಕು, ಬಡವರ ಪರ ಆಡಳಿತ ನೀಡಲು ಯಾವ ಯೋಜನೆ ಸಹಕಾರಿ? ಅಭಿವೃದ್ಧಿಗಾಗಿ ಏನು ಮಾಡಬೇಕು? ಇದುವರೆಗೂ ಜಾರಿಗೆ ತಂದ ಯೋಜನೆಗಳು ಎಷ್ಟರಮಟ್ಟಿಗೆ ಪರಿಣಾಮ ಬೀರಿವೆ? ಆಗಬೇಕಾದ ಸುಧಾರಣೆಗಳಾವವು? ಎಂಬುದರ ಕುರಿತು ಚರ್ಚೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.
ಈ ಎಲ್ಲ ಅಂಶಗಳಲ್ಲಿ ಮಹತ್ತರವಾಗಿ ದೇಶಾದ್ಯಂತ ಏಕಕಾಲದಲ್ಲೇ ಚುನಾವಣೆ ನಡೆಸುವ ಕುರಿತು ಚರ್ಚೆ ಮಾಡಲಾಗುತ್ತದೆ ಎಂಬ ಅಂಶ ಗಮನ ಸೆಳೆದಿದ್ದು, ಅದಕ್ಕಾಗಿ ಸರ್ಕಾರ ಯಾವ ನಡೆ ಇಡುತ್ತದೆ? ಹೇಗೆ ಸಿದ್ಧತೆ ಮಾಡುತ್ತದೆ ಎಂಬುದು ಕುತೂಹಲ ಕೆರಳಿಸಿದೆ. ಅಷ್ಟಕ್ಕೂ ಮೋದಿ ಎಂದರೇನೆ ಕುತೂಹಲ ಅಲ್ಲವೇ?
Leave A Reply