ರಾಗಾ ಅಂದ್ರ ರಾಷ್ಟ್ರಕ್ಕೆ ಗಂಡಾಂತರ, ಸದಾನಂದರ ಗೌಡರ ಪ್ರತಿಕ್ರಿಯೆಗೆ ಪೆಚ್ಚಾದ ಕೈನಾಯಕರು

ಬೆಂಗಳೂರು: ವಿಶ್ವವೇ ಮೆಚ್ಚುತ್ತಿರುವ, ಕಠಿಣ ಆರ್ಥಿಕ ನೀತಿಗಳನ್ನು ಜಾರಿಗೆ ತಂದರೂ ರಾಷ್ಟ್ರದ್ಲಲಿ ಹೊಸ ಶಕೆ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರರನ್ನು ಕೇವಲ ವಿರೋಧಕ್ಕಾಗಿ ವಿರೋಧಿಸುವ ಮೂಲಕ ತಮ್ಮ ತೆವಲು ತೀರಿಸಿಕೊಳ್ಳುತ್ತಿರುವ ಕಾಂಗ್ರೆಸ್ಸಿಗರು ಹಲವು ಬಾರಿ ಜನರಿಂದಲೇ ಛೀಮಾರಿ ಹಾಕಿಸಿಕೊಂಡಿದ್ದು ಇದೆ. ಇದೀಗ ರಾಜ್ಯದ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಪ್ರಧಾನಿ ನರೇಂದ್ರ ಮೋದಿ ಅವರ ನಮೋ ಹೆಸರಿಗೆ ನಮಗೆ ಮೋಸ ಎಂದು ಹೇಳಿದಕ್ಕೆ ಕೇಂದ್ರ ಸಚಿವ ಸದಾನಂದಗೌಡ ಅವರು ಪ್ರತಿಕ್ರಿಯೆ ನೀಡಿದ್ದು, ದಿನೇಶ್ ಗುಂಡಾರಾವ್ ಮುಟ್ಟಿನೋಡುಕೊಳ್ಳುವಂತಾಗಿದೆ.
ಸದಾನಂದಗೌಡರು ಕೊಟ್ಟಿರುವ ಪ್ರತಿಕ್ರಿಯೆ ಏನು ಗೊತ್ತೆ
‘ಮೋದಿಯವರ ಹವಾಕ್ಕೆ ದಿ(ಕೆಟ್ಟ) , ದಿ(ಗಿಲಾದ) ಗುಂಡು ರಾಯರೇ ಪ್ರತಿಯೊಂದು ಪದಕ್ಕೆ ಅರ್ಥ ಕಟ್ಟುವುದು ನಮಗೂ ಚೆನ್ನಾಗಿ ಗೊತ್ತು ನೀವು ಕಾಂಗ್ರೆಸ್ ಸಂಸ್ಕೃತಿ ಸ್ವಲ್ಪ ಬಿಟ್ಟು ಗಂಭೀರ ರಾಜಕೀಯ ಮಾಡಿರಿ ನಾವೂನೂ ರಾಗಾ ಎಂದರೆ ರಾಜ್ಯಕ್ಕೆ , ರಾಷ್ಟ್ರಕ್ಕೆ ಗಂಡಾಂತರ ಎನ್ನೋಣವೇ’ ಇದು ಸದಾನಂದರ ಗೌಡರ ಟ್ವೀಟ್.
ರಾಗಾ ಅಂದ್ರೆ: ರಾಷ್ಟ್ರಕ್ಕೆ ಗಂಡಾಂತರ
ಹೌದಲ್ಲವೇ.. ಸದಾನಂದ ಗೌಡರ ಈ ಪ್ರತಿಕ್ರಿಯೆಯಲ್ಲಿ ಎಂತಹ ವಾಸ್ತವಾಂಶ ಅಡಗಿದೆ. ಇತ್ತ ದೇಶದಲ್ಲಿ ಅಧಿಕಾರದಲ್ಲಿರುವ ಸರ್ಕಾರ ಚೀನಾದ ಡೋಕ್ಲಾಂ ಗಡಿ ವಿವಾದಲ್ಲಿದ್ದರೇ, ಅತ್ತ ಈ ಪುಣ್ಯಾತ್ಮ ರಾಗಾ ಚೀನಾ ರಾಯಬಾರಿಗಳೊಂದಿಗೆ ಮಾತುಕತೆ ನಡೆಸುತ್ತಾರೆ. ದೇಶವಿರೋಧಿ ಘೋಷಣೆ, ಭಾರತ ತುಕ್ಡೆ ಮಾಡುತ್ತೇವೆ, ಸಂಸತ್ ಮೇಲೆ ದಾಳೀ ಮಾಡಿದ ಭಯೋತ್ಪಾದಕ ಅಫ್ಜಲ್ ಗುರುವನ್ನು ಬೆಂಬಲಿಸಿದ ಕೊಳಕರ ಬೆಂಬಲಕ್ಕೆ ನಿಲುತ್ತಾರೆ ರಾಹುಲ್ ಗಾಂಧಿ.
ಅದಕ್ಕೆ ತಾನೇ ರಾಹುಲ್ ಗಾಂಧಿ ಪ್ರತಿ ನಡೆಯೂ ನಕಾರಾತ್ಮಕವಾಗಿಯೇ ಇರುತ್ತೆ. ದೇಶದ ದೊಡ್ಡ ಪಕ್ಷದ ನಾಯಕನಾಗಿ ಸಕರಾತ್ಮಕ ಸಲಹೆ ನೀಡುವುದನ್ನು ಬಿಟ್ಟು, ಅಧಿಕಾರದ ಲಾಲಸೆಗಾಗಿ ದೇಶವಿದ್ರೋಹಿ ಕೃತ್ಯಗಳಲ್ಲಿ ಭಾಗಿಯಾಗುವವವರ ಜೊತೆ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಅಲ್ಲವೇ ಸದಾನಂದ ಗೌಡ ಅವರು ಹೇಳಿದ ವಾಸ್ತವ.
ಮೋದಿಯವರ ಹವಾಕ್ಕೆ ದಿ(ಕೆಟ್ಟ) , ದಿ(ಗಿಲಾದ) ಗುಂಡು ರಾಯರೇ ಪ್ರತಿಯೊಂದು ಪದಕ್ಕೆ ಅರ್ಥ ಕಟ್ಟುವುದು ನಮಗೂ ಚೆನ್ನಾಗಿ ಗೊತ್ತು ನೀವು ಕಾಂಗ್ರೆಸ್ ಸಂಸ್ಕೃತಿ ಸ್ವಲ್ಪ ಬಿಟ್ಟು ಗಂಭೀರ ರಾಜಕೀಯ ಮಾಡಿರಿ ನಾವೂನೂ ರಾಗಾ ಎಂದರೆ ರಾಜ್ಯಕ್ಕೆ , ರಾಷ್ಟ್ರಕ್ಕೆ ಗಂಡಾಂತರ ಎನ್ನೋಣವೇ ? @dineshgrao @INCKarnataka https://t.co/QC4xNATPSO
— Sadananda Gowda (@DVSBJP) March 1, 2018
Leave A Reply