ದೇವಸ್ಥಾನಗಳನ್ನು ಕೆಡವಿ ಕಟ್ಟಿದ ಮಸೀದಿ ಸ್ಥಳವನ್ನು ಹಿಂದೂಗಳಿಗೆ ಬಿಟ್ಟುಕೊಡಿ: ರಿಜ್ವಿ ಆಗ್ರಹ
ಲಖನೌ: ಭಾರತದಲ್ಲಿ ಮುಸ್ಲಿಂ ಮತಾಂಧ ಆಡಳಿತಗಾರರ ಅಟ್ಟಹಾಸಕ್ಕೆ ಬಲಿಯಾಗಿರುವ ಹಿಂದೂ ದೇವಾಲಯಗಳನ್ನು ಒಡೆದು ಕಟ್ಟಿರುವ ಮಸೀದಿಗಳನ್ನು ಹಿಂದೂಗಳಿಗೆ ಹಿಂದಿರುಗಿಸಿ ಎಂದು ಉತ್ತರ ಪ್ರದೇಶದ ಶಿಯಾ ವಕ್ಭ್ ಬೋರ್ಡ್ ಅಧ್ಯಕ್ಷ ವಾಸೀಮ್ ರಿಜ್ವಿ ಸಲಹೆ ನೀಡಿದ್ದಾರೆ.
ಈ ಕುರಿತು ಆಲ್-ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಐಪಿಪಿಬಿ) ಅಧ್ಯಕ್ಷ ಮೌಲಾನಾ ರಾಬಿ ಹಸನ್ ನಾದ್ವಿ ಅವರಿಗೆ ಪತ್ರ ಬರೆದಿರುವ ವಾಸೀಮ್ ರಿಜ್ವಿ ಹಿಂದೂಗಳ ಪಾವನ ಕ್ಷೇತ್ರ, ರಾಮ ಜನಿಸಿದ ಅಯೋಧ್ಯ ರಾಮಜನ್ಮಭೂಮಿ ಸೇರಿ ದೇಶದಲ್ಲಿರುವ ಒಟ್ಟು ಒಂಬತ್ತು ವಿವಾದಿತ ಭೂಮಿಗಳನ್ನು ಹಿಂದೂಗಳಿಗೆ ಮರಳಿ ನೀಡಬೇಕು ಎಂದು ಮುಸ್ಲಿಂ ಬೋರ್ಡ್ ಗೆ ಒತ್ತಾಯಿಸಿದ್ದಾರೆ.
ಬೇರೆ ಧರ್ಮಗಳ ಧಾರ್ಮಿಕ ಸ್ಥಳಗಳನ್ನು ನಾಶಪಡಿಸಿ ಮಸೀದಿ ನಿರ್ಮಿಸುವುದು ಇಸ್ಲಾಮಿನ ಕಾನೂನಿಗೆ ವಿರುದ್ಧವಾದದ್ದು. ಅಯೋಧ್ಯದ ಬಾಬರಿ ಮಸೀದಿ, ಮಥುರಾದ ಕೇಶವ ಮಂದಿರ, ವಾರಣಾಸಿಯ ವಿಶ್ವನಾಥ ದೇವಾಲಯ, ಅಹಮದಾಬಾದ್ ನ ಭದ್ರಕಾಳಿ ಮಂದಿರ, ಪಶ್ಚಿಮ ಬಂಗಾಳದ ಪಾಂಡುವಾದಲ್ಲಿನ ಗುಜರಾತ ಬಾತ್ನಾದಲ್ಲಿರುವ ರುದ್ರ ಮಹಾಲಯ, ಅಹಮದಾಬಾದ್ನ ಭದ್ರಕಾಳಿ ಮಂದಿರ, ಪಶ್ಚಿಮ ಬಂಗಾಳದ ಪಾಂಡುವಾದಲ್ಲಿನ ಅದೀನಾ ಮಸೀದಿ, ಮಧ್ಯಪ್ರದೇಶದ ವಿದಿಷಾದ ವಿಜಯಾ ದೇವಿ ಮಂದಿರ ಮತ್ತು ದೆಹಲಿಯ ಕುತುಬ್ ಮಿನಾರ್ ಮಸೀದಿಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಬೇರೆ ಬೇರೆ ಧರ್ಮಗಳ ಧಾರ್ಮಿಕ ಸ್ಥಳಗಳನ್ನು ನಾಶಪಡಿಸಿ ಮಸೀದಿ ನಿರ್ಮಿಸುವುದು ಇಸ್ಲಾಂ ಕಾನೂನಿಗೆ ವಿರುದ್ಧವಾದ್ದದ್ದು ಎಂದು ವಾಸೀಮ್ ರಿಜ್ವಿ ಸಲಹೆ ನೀಡಿದ್ದಾರೆ.
Leave A Reply