ಮೋದಿ ಮೆಚ್ಚಿದ ಆ ಬಾಲಕಿಯ ಕಾರ್ಯ ಒಂದು ಸಾರ್ಥಕ ಕೆಲಸಕ್ಕೆ ನಾಂದಿ ಹಾಡಿತಲ್ಲ ಎಂಬುದೇ ಸ್ಫೂರ್ತಿದಾಯಕ!
ಬೆಂಗಳೂರು: ಒಬ್ಬ ನಾಗರಿಕ, ಒಬ್ಬ ನಾಯಕ ಹೇಗಿರಬೇಕು ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇರೆಲ್ಲೂ ಸಿಗಲಿಕ್ಕಿಲ್ಲ. ಹಾಗೆಯೇ ಒಂದು ಉತ್ತಮ ಕೆಲಸ ಹೇಗೆ ಜನಮನ್ನಣೆ ಪಡೆಯುತ್ತದೆ, ಹೇಗೆ ಬದಲಾವಣೆಗೆ ಮುನ್ನುಡಿ ಬರೆಯುತ್ತದೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆ.
ಆಕೆಯ ಹೆಸರು ಮಲ್ಲಮ್ಮ. ಕೇವಲ 15 ವರ್ಷದ ಇ ಬಾಲಕಿ ಪ್ರಧಾನಿ ಮೋದಿ ಜಾರಿಗೊಳಿಸಿದ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡು ದೂರದ ಕೊಪ್ಪಳದ ದಾನಾಪುರ ಎಂಬ ಕುಗ್ರಾಮದ ತನ್ನ ಮನೆಯಲ್ಲಿ ಶೌಚಾಲಯ ಕಟ್ಟಿಸಬೇಕು ಎಂದು ಮೂರು ದಿನ ಹಟ ಹಿಡಿದು, ಉಪವಾಸ ಬಿದ್ದು, ಆ ಕಾರ್ಯದಲ್ಲಿ ಯಶಸ್ವಿಯಾಗಿದ್ದಳು.
ಇದನ್ನು ಮೆಚ್ಚಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂತಹ ಬಾಲಕಿಯರು ನಮಗೆಲ್ಲ ಸ್ಫೂರ್ತಿ ಎಂದಿದ್ದರು.
ಈಗ ಮಲ್ಲಮ್ಮಳ ಈ ಕಾರ್ಯ ಮತ್ತೊಂದು ಮೈಲಿಗಲ್ಲು ಸ್ಥಾಪನೆಗೆ ದಾರಿಯಾಗಿದ್ದು, “ಸಂಡಾಸ್’’ ಎಂಬ ಚಿತ್ರ ತಂಡ ಈಗ ದಾನಾಪುರದಲ್ಲಿ ನೂರು ಶೌಚಾಲಯ ಕಟ್ಟಿಸಲು ಮುಂದಾಗಿದೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಬಾಲನಟಿಯಾಗಿ ನಟಿಸುತ್ತಿರುವ ಪ್ರತ್ಯಕ್ಷಾ ಎಂಬ ಬಾಲಕಿ ತನಗೆ ಚಿತ್ರದಿಂದ ಬರುವ ಒಂದು ಲಕ್ಷ ರೂಪಾಯಿ ಸಂಭಾವನೆಯನ್ನು ಗ್ರಾಮದಲ್ಲಿ ಶೌಚಾಲಯ ಕಟ್ಟಿಸಲು ನೀಡಿ ಮಾನವೀಯತೆ ಹಾಗೂ ಮಾದರಿ ಕೆಲಸ ಮಾಡಲು ಮುಂದಾಗಿದ್ದಾಳೆ.
ಒಟ್ಟಿನಲ್ಲಿ ಪೊರಕೆ ಹಿಡಿದು ತಾವೇ ರಸ್ತೆ ಶುಚಿಗೊಳಿಸುವ ಮೂಲಕ ಸ್ವಚ್ಛ ಭಾರತ ಯೋಜನೆ ಜಾರಿಗೊಳಿಸಿದ್ದ ಮೋದಿ ಅವರ ಒಂದು ನಡೆ ದೇಶಾದ್ಯಂತ ಅಭಿಯಾನವಾಗಿ ಮಾರ್ಪಟ್ಟಿದ್ದು, ಮಲ್ಲಮ್ಮ, ಪ್ರತ್ಯಕ್ಷಾ ಅವರಂತಹವರ ಸಂಖ್ಯೆ ನೂರ್ಮಡಿಯಾಗಲಿ ಎಂಬುದೇ ನಮ್ಮ ಆಶಯ.
Leave A Reply