ಭದ್ರತಾ ವೈಪಲ್ಯ, ಗ್ರೇನೆಡ್ ನೊಂದಿಗೆ ಕೇರಳ ವಿಧಾನ ಸಭೆ ಪ್ರವೇಶಿಸಿದ ಕಾಂಗ್ರೆಸ್ ಶಾಸಕ

ತಿರುವನಂತಪುರಂ: ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರದ ಗುಂಡಾ ಪ್ರವೃತಿ ಹೆಚ್ಚುತ್ತಿರುವುದು, ಹತ್ಯೆ, ಕೊಲೆ, ಅತ್ಯಾಚಾರ ನಡೆಯುವುದು ಸಾಮಾನ್ಯವಾಗಿದೆ. ಕಾಂಗ್ರೆಸ್ ಗುಂಡಾಗಳ ಧರ್ಪ ಮಿತಿ ಮೀರುತ್ತಿದೆ. ಕಾಂಗ್ರೆಸ್ಸಿಗರ ಧರ್ಪದ ನಡೆ ಕೇವಲ ರಾಜ್ಯಕಷ್ಟೇ ಅಲ್ಲ, ದೇಶಕ್ಕೆ ಹರಡಿದೆ ಎಂಬುದಕ್ಕೆ ಕೇರಳದ ವಿಧಾನಸಭೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಶಾಸಕನೊಬ್ಬ ಗ್ರೇನೆಡ್ ನೊಂದಿಗೆ ವಿಧಾನಸಭೆ ಪ್ರವೇಶಿಸುವ ಮೂಲಕ ಆಘಾತಕಾರಿ ನಡೆ ಪ್ರದರ್ಶಿಸಿದ್ದಾರೆ. ಆದರೆ ಗ್ರೇನೆಡ್ ತೆಗೆದುಕೊಂಡು ಹೋದರೂ ವಿಧಾನಸಭೆಗೆ ಪ್ರವೇಶಿಸಿರುವ ಬಗ್ಗೆ ಭದ್ರತಾ ಅಧಿಕಾರಿಗಳಿಗೆ ಪತ್ತೆಯಾಗದಿರುವುದು ಭದ್ರತಾ ವೈಪಲ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.
ಮಾಜಿ ಗೃಹ ಸಚಿವ ಮತ್ತು ಕಾಂಗ್ರೆಸ್ ಶಾಸಕ ತಿರುವಂಚೂರು ರಾಧಾಕೃಷ್ಣನ್ ಗ್ರೆನೇಡ್ ಶೆಲ್ ಗಳನ್ನು ವಿಧಾನಸಭೆಯೊಳಗೆ ತೆಗೆದುಕೊಂಡು ಬಂದವರು. ಕಳೆದ ವಾರ ನಡೆದ ಯುವ ಕಾಂಗ್ರೆಸ್ ಪ್ರತಿಭಟನೆ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಬಳಸುತ್ತಿದ್ದ ಗ್ರೇನೆಡ್ ಗಳನ್ನು ಜೊತೆಗೆ ತೆಗೆದುಕೊಂಡು ಬಂದಿದ್ದಾರೆ.
ಗ್ರೇನೆಡ್ ನೊಂದಿಗೆ ವಿಧಾನಸಭೆ ಪ್ರವೇಶಿಸಿ ನಿಯಮ ಮೀರಿದಂತಾಗಿದೆ. ಜೀವಂತ ಗ್ರೇನೆಡ್ ವಿಧಾನಸಭೆಯೊಳಗೆ ತೆಗೆದುಕೊಂಡು ಬಂದಿರುವುದು ವಿಧಾನಸಭೆಯ ಭದ್ರತೆಗೆ ಆತಂಕ ಮೂಡಿಸಿದೆ ಎಂದು ಸರ್ಕಾರ ಮತ್ತು ಕಾಂಗ್ರೆಸ್ಸೇತರ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ‘ಅದು ಜೀವಂತ ಗ್ರೇನೆಡ್ ಆಗಿದ್ದರೇ ತೀವ್ರ ಭದ್ರತಾ ಆತಂಕ ಸೃಷ್ಟಿಸುತ್ತಿದೆ ಎಂದು ಹೇಳಿ, ಕೈ ತೊಳೆದುಕೊಂಡಿದ್ದಾರೆ. ಅಧಿಕಾರಿಗಳು ಗ್ರೇನೆಡ್ ವಶಕ್ಕೆ ಪಡೆದುಕೊಂಡಿದ್ದಾರೆ.
‘ಗ್ರೇನೆಡ್ ಗಳು ಹಳೆಯದಾಗಿದ್ದು, ದಿನಾಂಕ ಮೀರಿದ ಗ್ರೇನೆಡ್ ಗಳನ್ನು ಬಳಸಲಾಗುತ್ತಿದೆ. ಆದ್ದರಿಂದ ಇಂತಹ ಗ್ರೇನೆಡ್ ಬಳಕೆಯಿಂದ ಪ್ರತಿಭಟನಾಕಾರರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಅದನ್ನು ತೋರಿಸಲು ಗ್ರೇನೆಡ್ ವಿಧಾನಸಭೆಗೆ ತೆಗೆದುಕೊಂಡು ಬಂದಿದ್ದೇನೆ ಎಂದು ಶಾಸಕ ರಾಧಾಕೃಷ್ಣನ್ ಸಬೂಬು ಹೇಳಿದ್ದಾರೆ.
‘ರಾಧಾಕೃಷ್ಣನ್ ಅವರು ಗ್ರೇನೆಡ್ ನೊಂದಿಗೆ ವಿಧಾನಸಭೆ ಪ್ರವೇಶಿಸಿರುವುದು ಸದನದ ನಿಯಮ ಮೀರಿದಂತೆ. ಈ ಕುರಿತು ಸೂಕ್ತ ತನಿಖೆ ಮತ್ತು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ಸ್ಪೀಕರ್ ಪಿ ರಾಮಕೃಷ್ಣನ್ ಹೇಳಿದ್ದಾರೆ.
Leave A Reply