ಕಾಂಗ್ರೆಸ್ಸಿನ ಮತ್ತೊಂದು ಓಲೈಕೆಯ ಮುಖವಾಡ ಬಹಿರಂಗ, ಅಲ್ಪಸಂಖ್ಯಾತರು ಸಾಲ ಮರುಪಾವತಿಸದಿರಿ ಎಂದ ಪರಮೇಶ್ವರ್!
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಅಲ್ಪಸಂಖ್ಯಾತರನ್ನು ಓಲೈಸುತ್ತಲೇ ಇದೆ. ಮೊದಲಿಗೆ ಅಲ್ಪಸಂಖ್ಯಾತರಿಗಾಗಿ ಶಾದಿ ಭಾಗ್ಯ, ಬಳಿಕ ಟಿಪ್ಪು ಜಯಂತಿ, ನಂತರ ಹಲವು ಪ್ರಕರಣಗಳಲ್ಲಿ ಸಿಲುಕಿದವರ ಬಿಡುಗಡೆಗೆ “ಮುಗ್ಧ ಅಲ್ಪಸಂಖ್ಯಾತರು” ಎಂಬ ಒಕ್ಕಣೆ ಮೂಲಕ ಅವರನ್ನು ಒಲಿಸಿಕೊಳ್ಳಲು ಯತ್ನಿಸಿತು.
ಈಗ ರಾಜ್ಯ ಕಾಂಗ್ರೆಸ್ಸಿನ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಇದೇ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ಮತ್ತೊಂದು ಹೆಜ್ಜೆ ಇಟ್ಟಿದ್ದು, “ಅಲ್ಪಸಂಖ್ಯಾತರು ತೆಗೆದುಕೊಂಡ ಸಾಲವನ್ನು ಮರುಪಾವತಿಸದಿದ್ದರೂ ಆದೀತು” ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಇತ್ತೀಚೆಗೆ ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರಿಗಾಗಿ ಯೋಜನೆ ರೂಪಿಸಲು ನಡೆಸಿದ ಕಾರ್ಯಾಗಾರವೊಂದರಲ್ಲಿ ಮಾತನಾಡಿದ ಪರಮೇಶ್ವರ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಪೋರೇಷನ್ ಇದುವರೆಗೂ ಸಣ್ಣ ಪ್ರಮಾಣದಲ್ಲಿ ಸಾಲ ನೀಡುತ್ತಿದೆ. ಇನ್ನು ಮುಂದೆ ಸಾಲದ ಪ್ರಮಾನ 50 ಲಕ್ಷದವರೆಗೆ ಆಗಬೇಕು. ಈ ಸಾಲವನ್ನು ಅಲ್ಪಸಂಖ್ಯಾತರು ಮರುಪಾವತಿಸದಿದ್ದರೂ ಆದೀತು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲ, ಸರ್ಕಾರದ ಹಣದ ದುರುಪಯೋಗದ ಕುರಿತು ಕಾಂಗ್ರೆಸ್ಸಿನ ನಾಯಕರೇ ಪಾಠ ಮಾಡಿದ್ದು, ಸರ್ಕಾರಕ್ಕೆ ಟೋಪಿ ಹಾಕಿದರೂ ಪರವಾಗಿಲ್ಲ ಎಂದು ಪರಮೇಶ್ವರ್ ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಮತಕ್ಕಾಗಿ ರಾಹುಲ್ ಗಾಂಧಿ ದೇವಾಲಯಕ್ಕೆ ಹೋಗಲೂ ಸಿದ್ಧ, ಸಿದ್ದರಾಮಯ್ಯನವರು ನಾನು ಹಿಂದೂ ಎನ್ನಲು ಬದ್ಧ ಹಾಗೂ ಈಗ ಸರ್ಕಾರಕ್ಕೆ ಟೋಪಿ ಹಾಕಿದರೂ ಪರವಾಗಿಲ್ಲ ಎಂದು ಓಲೈಕೆಗೆ ಮುಂದಾಗಿರುವ ಕಾಂಗ್ರೆಸ್ ಎಂತಹ ಪೆದ್ದ ಎಂಬುದು ಖಾತ್ರಿಯಾಗಿದೆ. ಇಂತಹವರು ರಾಜಕಾರಣಕ್ಕೇ ಅಪವಾದವಲ್ಲವೇ?
Leave A Reply