ರಾಜ್ಯ ಸರ್ಕಾರದ ದರ್ಪಕ್ಕೆ 20 ಅಧಿಕಾರಿಗಳಿಗೆ ವರ್ಗಾವಣೆ ದೌರ್ಭಾಗ್ಯ, ಸಿಎಂಗೆ ಬುದ್ಧಿ ಇಲ್ಲವೇ?
ಯಾವುದೇ ಒಬ್ಬಅಧಿಕಾರಿ, ವ್ಯಕ್ತಿ, ಶಿಕ್ಷಕ ಒಂದು ಶಾಲೆಗೋ, ಊರಿಗೋ ಹೋದರೆ ಅಲ್ಲಿನ ಪರಿಸ್ಥಿತಿ, ಸಮಸ್ಯೆ, ಜನರ ಮನಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಲು ಕನಿಷ್ಠ ಮುರ್ನಾಲ್ಕು ತಿಂಗಳಾದರೂ ಬೇಕು. ಅಷ್ಟರಮಟ್ಟಿಗೆ ಆತನಿಗೆ ಸಮಯ ಬೇಕು.
ಆದರೆ ಈ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏನಾಗಿದೆ? ಮಿದುಳಿಗೆ ಯಾವ ಮಂಕು ಕವಿದಿದೆ? ಯಾವ ಬೌದ್ಧಿಕ ದಾರಿದ್ರ್ಯ ಸಿದ್ದರಾಮಯ್ಯನವರನ್ನು ಆವರಿಸಿದೆ.
ನೀವೇ ಯೋಚಿಸಿ, ಇನ್ನೆರಡು ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಈಗಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿ, ಜನ ಬಿಡಿ, ಲೋಕಾಯುಕ್ತರಂತಹ ಗಣ್ಯರಿಗೇ ರಕ್ಷಣೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಏಕಾಏಕಿ 20 ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರಲ್ಲ, ಏನೆನ್ನಬೇಕು ಇವರಿಗೆ.
ವರ್ಗಾವಣೆಯಾಗಿ ಹೊಸ ಜಿಲ್ಲೆ, ಮಹಾನಗರಕ್ಕೆ ಹೋಗುವ ಅಧಿಕಾರಿಗಳು ಎರಡೇ ತಿಂಗಳಲ್ಲಿ ಪರಿಸ್ಥಿತಿ ತಹಬಂದಿಗೆ ತರಲು ಸಾಧ್ಯವೇ? ಅವರು ಅಲ್ಲಿ ಹೋಗಿ ಸುಧಾರಿಸಿಕೊಳ್ಳುವ ಹೊತ್ತಿಗೆ ಚುನಾವಣೆ ಬರುತ್ತದೆ. ಆಗ ಹೆಚ್ಚುಕಡಿಮೆಯಾದರೆ ಯಾರು ಹೊಣೆ? ಇಂತಹ ಸಣ್ಣ ವಿಷಯವೂ ಸಿದ್ದರಾಮಯ್ಯನವರ ಮಿದುಳು ಪ್ರವೇಶಿಸುವುದಿಲ್ಲವೇ?
ಅಷ್ಟಕ್ಕೂ ಯಾವ ಅಧಿಕಾರಿಗಳು ಸರ್ಕಾರದ ದರ್ಪಕ್ಕೆ, ವರ್ಗಾವಣೆಗೆ ಅಸ್ತ್ರವಾಗಿದ್ದಾರೆ ಗೊತ್ತಾ?
1. ರವಿ ಡಿ. ಚನ್ನಣ್ಣನವರ್ – ದಕ್ಷಿಣ ವಲಯ ಡಿಸಿಪಿ
2. ಗಿರೀಶ್ – ಮಂಡ್ಯ ಎಸ್ಪಿ
3. ರೇಣುಕಾ ಸುಕುಮಾರ್ – ಕೊಪ್ಪಳ ಎಸ್ಪಿ
4. ಉಮೇಶ್ ಕುಮಾರ್ – ಐಜಿಪಿ ಮತ್ತು ಕೆಸ್ಸಾರ್ಟಿಸಿ ಭದ್ರತಾ ನಿರ್ದೇಶಕ
5. ಡಾ.ಅನೂಪ್ ಶೆಟ್ಟಿ- ಬೆಂಗಳೂರು ಎಸ್ಪಿ
6. ಕಲಾ ಕೃಷ್ಣಮೂರ್ತಿ – ಬೆಂಗಳೂರು ಈಶಾನ್ಯ ವಲಯ ಡಿಸಿಪಿ
7. ಜಿ.ರಾಧಿಕಾ – ಬೆಂಗಳೂರು ಎಸಿಬಿ ಎಸ್ಪಿ
8. ಭೀಮಾಶಂಕರ್ ಎಸ್.ಗುಳೇದ್ – ಬೆಂಗಳೂರು ಗ್ರಾಮಾಂತರ ಎಸ್ಪಿ
9. ನಿಖಾಮ್ ಪ್ರಕಾಶ್ – ವಿಜಯಪುರ ಎಸ್ಪಿ
10. ಕುಲದೀಪ್ ಕುಮಾರ್ – ಬೆಂಗಳೂರು ಕೆಸ್ಸಾರ್ಪಿ
11. ಅಮಿತ್ ಸಿಂಗ್ – ಮೈಸೂರು ಎಸ್ಪಿ
12. ವಿಫುಲ್ ಕುಮಾರ್ – ಮೈಸೂರು ಪೊಲೀಸ್ ಅಕಾಡೆಮಿ ಐಜಿಪಿ
13. ಎಸ್.ರವಿ – ಬಳ್ಳಾರಿ ವಲಯ ಐಜಿಪಿ
14. ಎಂ.ಎನ್.ಅನುಚೇತ್ – ಎಸ್ಐಟಿ ತನಿಖಾಧಿಕಾರಿ
15. ಸೌಮೇಂದು ಮುಖರ್ಜಿ – ದಕ್ಷಿಣ ವಲಯ ಐಜಿಪಿ
16. ಅಮೃತ್ ಪೌಲ್ – ಆಡಳಿತ ವಿಭಾಗದ ಐಜಿಪಿ
17. ಬಿ.ದಯಾನಂದ – ಕೇಂದ್ರ ವಲಯ ಐಜಿಪಿ
Leave A Reply